Lok Sabha Election 2024 Results : ದೇಶದೆಲ್ಲೆಡೆ ಮತ ಎಣಿಕೆ ಆರಂಭ..!

You are currently viewing Lok Sabha Election 2024 Results : ದೇಶದೆಲ್ಲೆಡೆ ಮತ ಎಣಿಕೆ ಆರಂಭ..!

ಸುದೀರ್ಘ ಎರಡು ತಿಂಗಳುಗಳ ಕಾಲ 7 ಹಂತಗಳಲ್ಲಿ ಲೋಕಸಭೆ ಚುನಾವಣೆ ಮತದಾನ ನಡೆದಿತ್ತು, ನಾಯಕರ ರಾಜಕೀಯ ಭವಿಷ್ಯ ಮತ ಪೆಟ್ಟಿಗೆಯಲ್ಲಿ ಭದ್ರವಾಗಿದೆ. ಇದೀಗ ಇಂದು ಮತ ಎಣಿಕೆ ಆರಂಭವಾಗಿದೆ. ನಾಳೆ ದೇಶದ 543 ಲೋಕಸಭಾ ಕ್ಷೇತ್ರಗಳ ಮತ ಎಣಿಕೆ ನಡೆಯಲಿದ್ದು, 543 ಕ್ಷೇತ್ರಗಳಲ್ಲಿ ಸ್ಪರ್ಧಿಸಿದ್ದ 8,360 ಅಭ್ಯರ್ಥಿಗಳ ಭವಿಷ್ಯ ಪ್ರಕಟವಾಗಲಿದೆ. 543 ಲೋಕಸಭಾ ಕ್ಷೇತ್ರಗಳಿಗೆ 7 ಹಂತದಲ್ಲಿ ಮತದಾನ ನಡೆದಿತ್ತು.

ಏ.19ರಂದು ಮೊದಲ ಹಂತದಲ್ಲಿ 102 ಕ್ಷೇತ್ರಗಳಲ್ಲಿ ಮತದಾನ. ಕಳೆದ ಏಪ್ರಿಲ್ 26ರಂದು 2ನೇ ಹಂತದಲ್ಲಿ 89 ಕ್ಷೇತ್ರಗಳಲ್ಲಿ ಮತದಾನ. ಮೇ 7ರಂದು 3ನೇ ಹಂತದಲ್ಲಿ 94 ಕ್ಷೇತ್ರಗಳಲ್ಲಿ ಮತದಾನ. ಮೇ 13ರಂದು 4ನೇ ಹಂತದಲ್ಲಿ 96 ಕ್ಷೇತ್ರಗಳಲ್ಲಿ ಮತದಾನ. ಮೇ 20ರಂದು 5ನೇ ಹಂತದಲ್ಲಿ 49 ಕ್ಷೇತ್ರಗಳಲ್ಲಿ ಮತದಾನ. ಮೇ 25ರಂದು 6ನೇ ಹಂತದಲ್ಲಿ 56 ಕ್ಷೇತ್ರಗಳಲ್ಲಿ ಮತದಾನ. ಜೂನ್ 1ರಂದು ಅಂತಿಮ ಹಂತದಲ್ಲಿ 57 ಕ್ಷೇತ್ರಗಳಲ್ಲಿ ಮತದಾನ. ರಾಜ್ಯದ 28 ಕ್ಷೇತ್ರಗಳಿಗೆ ಏ. 26, ಮೇ 7ರಂದು ಮತದಾನ ನಡೆದಿತ್ತು. ರಾಜ್ಯದ 28 ಕ್ಷೇತ್ರಗಳಲ್ಲಿ ಸ್ಪರ್ಧಿಸಿದ್ದ 474 ಅಭ್ಯರ್ಥಿಗಳ ಭವಿಷ್ಯ ಪ್ರಕಟವಾಗಲಿದೆ. ರಾಜ್ಯದ 28 ಕ್ಷೇತ್ರಗಳಲ್ಲಿ ಶೇಕಡಾ 70.64ರಷ್ಟು ಮತದಾನವಾಗಿತ್ತು.

Leave a Reply

error: Content is protected !!