IMPORTANT : ಚುನಾವಣೆಗೆ ಸಂಬಂಧಿತ ದೂರುಗಳು ಇದ್ದರೆ ಈ ನಂಬರ್ ಗೆ ಕಾಲ್ ಮಾಡಿ..!

You are currently viewing IMPORTANT : ಚುನಾವಣೆಗೆ ಸಂಬಂಧಿತ ದೂರುಗಳು ಇದ್ದರೆ ಈ ನಂಬರ್ ಗೆ ಕಾಲ್ ಮಾಡಿ..!

ಕೊಪ್ಪಳ : ಕರ್ನಾಟಕ ವಿಧಾನಸಭಾ ಸಾರ್ವತ್ರಿಕ ಚುನಾವಣೆ-2023ರ ಸಂಬಂಧ ಚುನಾವಣಾ ದೂರುಗಳನ್ನು ಸಲ್ಲಿಸಲು ಕೊಪ್ಪಳ ಜಿಲ್ಲಾಧಿಕಾರಿಗಳ ಕಾರ್ಯಾಲಯದಲ್ಲಿ ದೂರು ನಿರ್ವಹಣಾ ಕೋಶ ಸ್ಥಾಪಿಸಲಾಗಿದೆ.

ರಾಜ್ಯಾಧ್ಯಂತ ಮಾದರಿ ನೀತಿ ಸಂಹಿತೆ ಜಾರಿಯಲ್ಲಿದ್ದು, ಜಿಲ್ಲೆಯ ಸಾರ್ವಜನಿಕರು ಚುನಾವಣೆಗೆ ಸಂಬಂಧಿತ ಎಲ್ಲಾ ರೀತಿಯ ದೂರುಗಳನ್ನು 24*7 ಸಹಾಯವಾಣಿ ಟೋಲ್‌ ಫ್ರೀ ಸಂಖ್ಯೆ:1950ಗೆ ಕರೆ ಮಾಡಿ ಸಲ್ಲಿಸಬಹುದು ಎಂದು ಜಿಲ್ಲಾ ಚುನಾವಣಾಧಿಕಾರಿ ಹಾಗೂ ಜಿಲ್ಲಾಧಿಕಾರಿ ಎಂ.ಸುಂದರೇಶಬಾಬು ಅವರು ತಮ್ಮ ಅಧಿಕೃತ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Leave a Reply

error: Content is protected !!