LOCAL NEWS : ಇಂದು ತಾಲೂಕ ಮಟ್ಟದ ಅದ್ದೂರಿ ರೇಣುಕಾಚಾರ್ಯರ ಜಯಂತೋತ್ಸವ!
ಪ್ರಜಾವೀಕ್ಷಣೆ ಡಿಜಿಟಲ್ ಸುದ್ದಿ :
ಕುಕನೂರು ಮಾ.12 : ವೀರಶೈವ ಧರ್ಮ ಸಂಸ್ಥಾಪಕರಾದ ಶ್ರೀ ಜಗದ್ಗುರು ರೇಣುಕಾಚಾರ್ಯರ ಕುಕನೂರು ತಾಲೂಕ ಮಟ್ಟದ ಜಯಂತೋತ್ಸವ ಹಾಗೂ ಮೂರ್ತಿ ಪ್ರತಿಷ್ಠಾಪನೆಯನ್ನು ಇಂದು (ಮಾರ್ಚ್ 12ರಂದು) ಮಂಡಲಗಿರಿ ಗ್ರಾಮದಲ್ಲಿ ಆಯೋಜಿಸಲಾಗಿದೆ ಎಂದು ವೀರಶೈವ ಜಂಗಮ ಸಂಘ ತಾಲೂಕ ಘಟಕದ ಅಧ್ಯಕ್ಷ ಮಹೇಶ ಕಲ್ಮಠ ಹೇಳಿದರು.
ಪಟ್ಟಣದಲ್ಲಿ ಸುದ್ದಿಗಾರರೊಂದಿಗೆ ಮಹೇಶ ಕಲ್ಮಠ ಮಾತನಾಡಿ, ವೀರಶೈವ ಸಂಸ್ಥಾಪಕ ಶ್ರೀ ಜಗದ್ಗುರು ರೇಣುಕಾಚಾರ್ಯರ ತಾಲೂಕ ಮಟ್ಟದ ಜಯಂತೋತ್ಸವ ಹಾಗೂ ರೇಣುಕಾಚಾರ್ಯರ ಮೂರ್ತಿ ಪ್ರತಿಷ್ಠಾಪನ ಕಾರ್ಯಕ್ರಮವನ್ನು ತಾಲೂಕಿನ ಮಂಡಲಗಿರಿ ಗ್ರಾಮದಲ್ಲಿ ಆಯೋಜಿಸಿದೆ.
ಇಂದು ಬೆಳಗ್ಗೆ 4:30 ರಿಂದ 7 ಗಂಟೆಯವರೆಗೆ ಮೂರ್ತಿ ಪ್ರತಿಷ್ಠಾಪನ ಹಾಗೂ ಜಯಂತೋತ್ಸವ ಕಾರ್ಯಕ್ರಮವನ್ನು ಆಯೋಜಿಸಿದ್ದು, ಕಾರ್ಯಕ್ರಮದಲ್ಲಿ ತಾಲೂಕಿನ ಕುದುರೆಮೋತಿ ಗ್ರಾಮದಲ್ಲಿರುವ ಮೈಸೂರು ಸಂಸ್ಥಾನ ಮಠದ ಶ್ರೀ ವಿಜಯ ಮಹಾಂತೇಶ್ವರ ಮಹಾಸ್ವಾಮಿಗಳು, ಮಂಗಳೂರಿನ ಅರಳಲೇ ಹಿರೇಮಠದ ಶ್ರೀ ಸಿದ್ದಲಿಂಗ ಶಿವಾಚಾರ್ಯ ಮಹಾಸ್ವಾಮಿಗಳು, ಸಂಸ್ಥಾನ ನಗರಗಡ್ಡಿ ಮಠದ ಶ್ರೀ ಶಾಂತಲಿಂಗೇಶ್ವರ ಮಹಾಸ್ವಾಮಿಗಳು ಹಾಗೂ ಅಡ್ನೋರು, ರಾಜೂರು ಹಾಗೂ ಗದಗ ಶ್ರೀಗಳಾದ ಅಭಿನವ ಪಂಚಾಕ್ಷರ ಶಿವಾಚಾರ್ಯ ಮಹಾಸ್ವಾಮಿಗಳು ಹಾಗೂ ಗುದ್ನೇಶ್ವರ ಮಠದ ಪ್ರಭುಲಿಂಗ ದೇವರು ದಿವ್ಯಸಾನಿಧ್ಯ ವಹಿಸಲಿದ್ದು ಕುಕನೂರು ಪಟ್ಟಣದ ಮುಂಡರಗಿ ಅನ್ನ ದಾನೇಶ್ವರ ಶಾಖ ಮಠದ ಡಾ. ಮಹದೇವ ಮಹಾಸ್ವಾಮಿಗಳು ನೇತೃತ್ವವನ್ನು ವಹಿಸಲಿದ್ದಾರೆ, ಮೂರ್ತಿ ಪ್ರತಿಷ್ಠಾಪನೆ ಯಲಬುರ್ಗಾ ಪಟ್ಟಣದ ಶ್ರೀಧರ ಮುರುಡಿ ಹಿರೇಮಠದ ಶ್ರೀ ಬಸವಲಿಂಗೇಶ್ವರ ಶಿವಾಚಾರ್ಯ ಮಹಾಸ್ವಾಮಿಗಳು ನೆರವೇರಿಸಲಿದ್ದು ಕಾರ್ಯಕ್ರಮದಲ್ಲಿ ಅನೇಕ ರಾಜಕೀಯ ಮುಖಂಡರು, ಉನ್ನತ ಮಟ್ಟದ ಅಧಿಕಾರಿಗಳು, ಹಾಗೂ ಸಾವಿರಾರು ಸಂಖ್ಯೆಯಲ್ಲಿ ವೀರಶೈವ- ಲಿಂಗಾಯತ ಜಂಗಮ ಸಮುದಾಯದ ಬಾಂಧವರು ಪಾಲ್ಗೊಳ್ಳಲಿದ್ದು ಎಲ್ಲರೂ ಸೇರಿ ಕಾರ್ಯಕ್ರಮವನ್ನು ಯಶಸ್ವಿಗೊಳಿಸಬೇಕು ಎಂದು ಕರೆ ನೀಡಿರುತ್ತಾರೆ.
ಈ ವೇಳೆಯಲ್ಲಿ ವೀರಶೈವ ಜಂಗಮ ಸಂಘದ ತಾಲೂಕ ಉಪಾಧ್ಯಕ್ಷ ವೀರಯ್ಯ ವಸ್ತ್ರದ, ಸಿದ್ದಲಿಂಗಯ್ಯ ಉಳ್ಳಾಗಡ್ಡಿ,ಪ್ರಧಾನ ಕಾರ್ಯದರ್ಶಿ ವೀರಯ್ಯ ಹಿರೇಮಠ,,ಕರಬಸಯ್ಯ ಬಿನ್ನಾಳ,ಸಿದ್ದಲಿಂಗಯ್ಯ ಬಂಡಿ, ಅಂದನಯ್ಯ ಗೊರಲೆಕೊಪ್ಪ ಹಾಗೂ ಇನ್ನಿತರರು ಪಾಲ್ಗೊಂಡಿದ್ದರು.