You are currently viewing FLASH NEWS : ಚಳಿಗಾಲ ಅಧಿವೇಶನದಲ್ಲಿ ಒಳ ಮೀಸಲಾತಿ ಮರು ಪರಿಶೀಲನೆಗೆ ಗೋರಸೇನಾ ರಾಜ್ಯ ಪ್ರಧಾನ ಕಾರ್ಯದರ್ಶಿ ಸುರೇಶ ಬಳೂಟಗಿ ಆಗ್ರಹ..!!

FLASH NEWS : ಚಳಿಗಾಲ ಅಧಿವೇಶನದಲ್ಲಿ ಒಳ ಮೀಸಲಾತಿ ಮರು ಪರಿಶೀಲನೆಗೆ ಗೋರಸೇನಾ ರಾಜ್ಯ ಪ್ರಧಾನ ಕಾರ್ಯದರ್ಶಿ ಸುರೇಶ ಬಳೂಟಗಿ ಆಗ್ರಹ..!!

FLASH NEWS : ಚಳಿಗಾಲ ಅಧಿವೇಶನದಲ್ಲಿ ಒಳ ಮೀಸಲಾತಿ ಮರು ಪರಿಶೀಲನೆಗೆ ಗೋರಸೇನಾ ರಾಜ್ಯ ಪ್ರಧಾನ ಕಾರ್ಯದರ್ಶಿ ಸುರೇಶ ಬಳೂಟಗಿ ಆಗ್ರಹ..!!

ಪ್ರಜಾ ವೀಕ್ಷಣೆ ಡಿಜಿಟಲ್ ಡೆಸ್ಕ್ : ಕಾಂಗ್ರೆಸ್ ಸರಕಾರ ರಾಜ್ಯದಲ್ಲಿ ಒಳಮೀಸಲಾತಿ ಜಾರಿಮಾಡಿದ ನಂತರ ಬಂಜಾರ, ಭೋವಿ, ಕೊರಚ, ಕೊರಮ ಸಮುದಾಯಗಳಿಗೆ ಅನ್ಯಾಯವಾಗಿದ್ದು, ಡಿ.8 ರಿಂದ ನಡೆಯುವ ಬೆಳಗಾವಿ ಚಳಿಗಾಲದ ಅಧಿವೇಶನದಲ್ಲಿ ಈ ಅನ್ಯಾಯ ಸರಿಪಡಿಸಲು ರಾಜ್ಯ ಸರಕಾರ ಮುಂದಾಗ ಬೇಕು ಎಂದು ಗೋರ ಸೇನಾ ರಾಜ್ಯ ಪ್ರಧಾನ ಕಾರ್ಯದರ್ಶಿ ಸುರೇಶ ಬಳೂಟಗಿ ಆಗ್ರಹಿಸಿದರು.

ಇಂದು ಕುಕನೂರಿನಲ್ಲಿ ಪ್ರಜಾವೀಕ್ಷಣೆ ಜೊತೆಗೆ ಮಾತನಾಡಿದ ಅವರು, ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಸಮಾಜ ಕಲ್ಯಾಣ ಸಚಿವ ಒಳಮೀಸಲಾತಿಯಿಂದ ಪರಿಶಿಷ್ಟ ಜಾತಿಯ 101 ಸಮುದಾಯಗಳಿಗೆ ಅನ್ಯಾಯವಾಗದಂತೆ ನೋಡಿಕೊಳ್ಳುತ್ತೇವೆ ಎಂದು 2023 ರಲ್ಲಿ ವಿಧಾನ ಸಭಾ ಚುನಾವಣೆ ಸಮಯದಲ್ಲಿ ಭರವಸೆ ನೀಡಿದ್ದರು. ಇದನ್ನು ನಂಬಿದ ನಮ್ಮ ಬಂಜಾರ ಸಮುದಾಯದ ಜನರು ಅವರಿಗೆ ಬಹುಮತ ಬರುವ ಹಾಗೆ ಮತ ಚಲಾಯಿಸಿದರು.ಆದರೆ ಇದನ್ನು ಮರೆತ ಸಿದ್ಧರಾಮಯ್ಯ ನೇತೃತ್ವದ ಕಾಂಗ್ರೆಸ್ ಸರಕಾರ ಒಳಮೀಸಲಾತಿಯಲ್ಲಿ ನಮ್ಮ ಸಮಾಜಕ್ಕೆ ಬಹುದೊಡ್ಡ ಅನ್ಯಾಯ ಮಾಡಿದೆ.ಸರಕಾರಿ ಹುದ್ದೆಗಳ ನೇಮಕದ ರೋಸ್ಟರ್ ಬಿಡುಗಡೆಯಾದ ಬಳಿಕ ನಮಗೆ ಅವಕಾಶಗಳು ಕಡಿಮೆಯಾಗಿವೆ ಎಂದು ಆರೋಪಿಸಿದರು.

ಈ ವಿಷಯ ಸರಕಾರಿ ನೇಮಕಾತಿಯಲ್ಲಿ ಬೆಳಕಿಗೆ ಬಂದಿದೆ ಹಿಂದೆ 100 ಹುದ್ದೆಗಳಲ್ಲಿ ಶೇ.17ರಷ್ಟು ಮೀಸಲಾತಿ ಅನ್ವಯ ಪರಿಶಿಷ್ಟ ಜಾತಿಯ ಎಲ್ಲರಿಗೂ 17-18 ಹುದ್ದೆಗಳಿಗೆ ಸ್ಪರ್ಧಿಸುವ ಅವಕಾಶವಿತ್ತು. ಆದರೆ, ಹೊಸ ರೋಸ್ಟರನಂತೆ 100 ಹುದ್ದೆಗಳಲ್ಲಿ 1ರಿಂದ2 ಹುದ್ದೆಗಳು ಮಾತ್ರ ಸಿಗುತ್ತಿವೆ. ಇದು ಘೋರ ಅನ್ಯಾಯ. ಇದೇ ಸಮಸ್ಯೆ ಇತರೆ ಹುದ್ದೆಗಳು ಹಾಗೂ ಬ್ಯಾಂಕಿಂಗ್ ಹುದ್ದೆಗಳ ನೇಮಕದಲ್ಲೂ ನಡೆಯುತ್ತಿದೆ ಎಂದರು.

ಸುಪ್ರೀಂ ಕೋರ್ಟ್ ನಿರ್ದೇಶನದಂತೆ ಎಂಪರಿಕಲ್ ದತ್ತಾಂಶವನ್ನು ಪರಿಗಣಿಸಿಲ್ಲ, ಬಂಜಾರ ಸಮುದಾಯದ ಜನಸಂಖ್ಯೆಯನ್ನು 11 ಲಕ್ಷ ಎಂದು ತೋರಿಸಲಾಗಿದೆ. ಆದರೆ, ವಾಸ್ತವದಲ್ಲಿ ಒಟ್ಟು 30 ರಿಂದ 35 ಲಕ್ಷ ಬಂಜಾರರಿದ್ದಾರೆ. ತಪ್ಪು ದತ್ತಾಂಶದ ಆಧಾರದಲ್ಲಿ ಮೀಸಲು ಹಂಚಿಕೆ ಮಾಡಿರುವುದು ಸರಿಯಲ್ಲ ಎಂದು ತಿಳಿಸಿದರು.

ಶಿಕ್ಷಣ ಮತ್ತು ಉದ್ಯೋಗದಲ್ಲಿ ಗುಂಪು-ಸಿ ಬದಲಿಗೆ, ರೋಸ್ಟರವನ್ನು ಮಾರ್ಪಡಿಸಿ ಎಲ್ಲರಿಗೂ ಸಮಾನ ಅವಕಾಶ ಸಿಗುವಂತೆ ಏಕ ಗವಾಕ್ಷಿ ಪದ್ದತಿ ಜಾರಿಗೊಳಿಸಬೇಕು. ಅಲೆಮಾರಿ ಸಮುದಾಯದವರಿಗೆ ಪ್ರತ್ಯೇಕವಾಗಿ ಶೇ.1ರಷ್ಟು ಮೀಸಲು ನೀಡಬೇಕು. ಹಿಂದಿನ ಬಿಜೆಪಿ ಸರಕಾರ ಒಳಮೀಸಲು ವಿಷಯದಲ್ಲಿ ಎಡವಿದ ಕಾರಣಕ್ಕಾಗಿಯೇ ಬಂಜಾರ ಸಮುದಾಯದ ವಿರೋಧ ಕಟ್ಟಿಕೊಂಡು ಸೋಲಬೇಕಾಯಿತು. ಈಗಿನ ಕಾಂಗ್ರೆಸ್ ಸರಕಾರ ಕೂಡ ಅದೇ ದಾರಿಯಲ್ಲಿ ಸಾಗಬಾರದು ಎಂದರು.

ಒಂದು ವೇಳೆ ತಾವು ಸರಿಪಡಿಸದೇ ಹೋದರೆ ಮುಂದಿನ ಚುನಾವಣೆಯಲ್ಲಿ ಇಡೀ ಬಂಜಾರ ಸಮುದಾಯ ಒಗ್ಗೂಡಿ ಕಾಂಗ್ರೆಸ್ ಪಕ್ಷಕ್ಕೆ ತಕ್ಕ ಪಾಠ ಕಲಿಸಬೇಕಾಗುತ್ತೆ ಎಂದು ಮಾಧ್ಯಮದ ಮೂಲಕ ಸರಕಾರಕ್ಕೆ ಆಗ್ರಹಿಸಿದರು.

Leave a Reply

error: Content is protected !!