BIG NEWS : ಮುಡಾ ಪ್ರಕರಣ : ಸಿಎಂ ಸಿದ್ದರಾಮಯ್ಯ ತಿನ್ನಲಿಲ್ಲ, ಬಿಡಲಿಲ್ಲ ಸುಮ್ಮನೆ ಅವರ ಮೇಲೆ ಕೇಸ್..!! : ಶಾಸಕ ಬಸವರಾಜ ರಾಯರೆಡ್ಡಿ ಹೇಳಿಕೆ!

You are currently viewing BIG NEWS : ಮುಡಾ ಪ್ರಕರಣ : ಸಿಎಂ ಸಿದ್ದರಾಮಯ್ಯ ತಿನ್ನಲಿಲ್ಲ, ಬಿಡಲಿಲ್ಲ ಸುಮ್ಮನೆ ಅವರ ಮೇಲೆ ಕೇಸ್..!! : ಶಾಸಕ ಬಸವರಾಜ ರಾಯರೆಡ್ಡಿ ಹೇಳಿಕೆ!

ಪ್ರಜಾವೀಕ್ಷಣೆ ಸುದ್ದಿಜಾಲ :-

ಸಿಎಂ ಸಿದ್ದರಾಮಯ್ಯ ತಿನ್ನಲಿಲ್ಲ, ಬಿಡಲಿಲ್ಲ ಸುಮ್ಮನೆ ಅವರ ಮೇಲೆ ಕೇಸ್..!! : ಶಾಸಕ ಬಸವರಾಜ ರಾಯರೆಡ್ಡಿ ಹೇಳಿಕೆ

ಕುಕನೂರು : ‘ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ತಿನ್ಲಿಲ್ಲ, ಉಣ್ಲಿಲ್ಲ ಸುಮ್ನೆ ಅವರ ಮೇಲೆ ಕೇಸ್ ಹಾಕಿದ್ದಾರೆ ಎನ್ನುವ ಮೂಲಕ ಶಾಸಕ ರಾಯರಡ್ಡಿ ಅವರು ಮುಡಾ ಪ್ರಕರಣದನಲ್ಲಿ ಸಿಕ್ಕು ಒದ್ದಾಡುತ್ತಿತಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಯಾವುದೇ ಭ್ರಷ್ಟಾಚಾರ ಮಾಡಿಲ್ಲ ಆದರೂ ವಿನಾಕಾರಣ ಅವರ ಮೇಲೆ ಕೇಸ್ ಹಾಕಿದ್ದಾರೆ’ ಎಂದು ಮುಖ್ಯಮಂತ್ರಿಗಳ ಆರ್ಥಿಕ ಸಲಹೆಗಾರ ಹಾಗೂ ಶಾಸಕ ಬಸವರಾಜ್ ರಾಯರಡ್ಡಿ ಹೇಳಿದ್ದಾರೆ.

ಇಂದು ಕುಕನೂರು ತಾಲೂಕಿನ ಕುದರಿಮೋತಿ ಗ್ರಾಮದ ಕಾರ್ಯಕ್ರಮವೊಂದರಲ್ಲಿ ಮಾತನಾಡಿದ ಶಾಸಕ, ‘ರಾಜಕೀಯವಾಗಿ ಸಿದ್ದರಾಮಯ್ಯ ಅವರು ಶುದ್ಧ ಹಸ್ತರು ಮೂಡಾ ವಿಚಾರದಲ್ಲಿ ಯಾವುದೇ ಭ್ರಷ್ಟಾಚಾರ ಮಾಡಿಲ್ಲ ಆದರೂ ಕೂಡಾ ಅವರ ಮೇಲೆ ಮೂಡಾ ಪ್ರಕರಣದಲ್ಲಿ ಸಿದ್ದರಾಮಯ್ಯ ಅವರನ್ನು ಸಿಲಿಕಿಸಿ ಕೇಸ್ ಹಾಕಿಲಾಗಿದೆ’ ಎಂಬ ಅರ್ಥದಲ್ಲಿ ರಾಯರಡ್ಡಿ ಹೇಳಿದರು.

ಕೃಷ್ಣಾ ಬಿ ಸ್ಕೀಮ್ ನದಿ ನೀರು ಹಂಚಿಕೆ ಪ್ರಕರಣ ಸುಪ್ರೀಮ್ ಕೋರ್ಟ್ ನಲ್ಲಿ ಇದೆ. ನಾಲ್ಕು ರಾಜ್ಯಗಳ ವ್ಯಾಜ್ಯ ನಡೆಯುತ್ತಿದ್ದು ಹೀಗಾಗಿ ಕೃಷ್ಣಾ ಬೀ ಸ್ಕೀಮ್ ನೆನೆಗುದಿಗೆ ಬಿದ್ದಿದೆ. ಹಿಂದಿನವರು ಸುಮ್ಮನೆ ನೀರಾವರಿ ವಿಷಯದಲ್ಲಿ ಸುಳ್ಳು ಹೇಳಿದರು. ಕಳಪೆ ಕಾಮಗಾರಿಯಿಂದಾಗಿ ಕೆರೆಗಳಿಗೆ ನೀರು ತುಂಬಿಸಲು ಆಗುತ್ತಿಲ್ಲ. ಮುಂದಿನ ಎರಡು ವಾರದಲ್ಲಿ ಟ್ರಾನ್ಸ್ಫರ್ಮರ್ ರಿಪೇರಿ ಮಾಡಿಸಿ ಕೆರೆಗಳಿಗೆ ನೀರು ತುಂಬಿಸುವ ಕೆಲಸ ಶೀಘ್ರದಲ್ಲಿ ಪ್ರಾರಂಭವಾಗುತ್ತದೆ ಎಂದು ಶಾಸಕ ರಾಯರಡ್ಡಿ ಹೇಳಿದರು.

Leave a Reply

error: Content is protected !!