ದಾವಣಗೆರೆ : ಮುಂಬರುವ ವಿಧಾನಸಭೆ ಚುನಾವಣೆಯಲ್ಲಿ ದಾವಣಗೆರೆಯ ಮಾಯಕೊಂಡ ಕ್ಷೇತ್ರದ ಕಾಂಗ್ರೆಸ್ ಟಿಕೆಟ್ ಆಕಾಂಕ್ಷಿಯಾಗಿದ್ದ ಸವಿತಾಬಾಯಿ ಕಣ್ಣೀರು ಹಾಕಿದ್ದಾರೆ. ಕಾಂಗ್ರೆಸ್ ಟಿಕೆಟ್ ನಿರಾಕರಿಸಿದ ಬೆನ್ನಲ್ಲೇ ಸುದ್ದಿಗೋಷ್ಟಿ ನಡೆಸಿದ ಅವರು, ಮೂಲತಃ ನಟಿಯಾಗಿರುವ ಸವಿತಾರ ಫೋಟೋಗಳನ್ನು ಅಶ್ಲೀಲವಾಗಿ ಎಡಿಟ್ ಮಾಡಲಾಗಿದೆ ಎಂದು ಆರೋಪ ಮಾಡಿದ್ದಾರೆ. ಟಿಕೆಟ್ ಪಡೆದಿರುವ ಮಾಜಿ ಸಚಿವ ಹೆಚ್.ಆಂಜನೇಯ ಅವರ ಅಳಿಯ ಬಸವಂತಪ್ಪ ಮೇಲೆ ದೂರು ದಾಖಲಾಗಿದೆ. ಇದರ ಜತೆಗೆ ಸವಿತಾ ಪಕ್ಷೇತರವಾಗಿ ನಿಲ್ಲುವುದಾಗಿ ಘೋಷಿಸಿದ್ದಾರೆ.
ಕೆಲ ದಿನಗಳ ಹಿಂದೆ ಸವಿತಾ ಬಾಯಿ ಮಲ್ಲೇಶ್ ನಾಯಕ್ ಅವರಿಗೆ ಟಿಕೆಟ್ ತಪ್ಪಿಸಲು ಅಶ್ಲೀಲ ಫೋಟೊ ವೈರಲ್ ಮಾಡಲಾಗಿತ್ತು. ಅಲ್ಲಿನ ವಾಟ್ಸಾಪ್ ಗ್ರೂಪ್ ಗಳಲ್ಲಿ ಫೋಟೊ ವೈರಲ್ ಮಾಡಿದ್ದ ಕುರಿತು ಸವಿತಾ ಬಾಯಿ ಆರೋಪ ಮಾಡಿದ್ದಾರೆ.
ಎಡಿಟ್ ಮಾಡಿದ ಫೋಟೊಗಳಿಂದ ಟಿಕೆಟ್ ತಪ್ಪಿದೆ ಎಂದು ಸವಿತಾ ಬಾಯಿ ಭಾವುಕರಾಗಿ ಕಣ್ಣೀರಿಟ್ಟಿದಾರೆ. ಈ ಕುತಂತ್ರ ಮಾಡಿ ಟಿಕೆಟ್ ತಪ್ಪಿಸಿದ್ದಾರೆ ಎಂದು ಯಾರ ಹೆಸರು ಹೇಳದೇ ಸವಿತಾ ಬಾಯಿ ಗಂಭೀರವಾಗಿ ಆರೋಪಿಸಿದ್ದಾರೆ. ಪಕ್ಷೇತರ ಅಭ್ಯರ್ಥಿಯಾಗಿ ಕಣಕ್ಕೆ ಇಳಿದು ಪಾಠ ಕಲಿಸಲು ನಿರ್ಧಾರ ಮಾಡಿದ್ದಾನೆ ಎಂದರು. ಈ ಕುರಿತು ನಗರದ ಸಿಇಎನ್ ಪೊಲೀಸ್ ಠಾಣೆಯಲ್ಲಿ ಪೋಟೋ ವೈರಲ್ ಕುರಿತು ಪ್ರಕರಣ ದಾಖಲಾಗಿದೆ.