2023ರ “ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್” ಫೈನಲ್ ಹೈ ವೋಲ್ಟೇಜ್ ಪಂದ್ಯಕ್ಕೆ ಭಾರತ ತಂಡವನ್ನು ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ (ಬಿಸಿಸಿಐ) ಇಂದು ಪ್ರಕಟಿಸಿದೆ. ಲಂಡನ್‌ನ ಓವಲ್ ಕ್ರೀಡಾಂಗಣದಲ್ಲಿ ಜುಲೈ 7ರಿಂದ 11ರವರೆಗೆ ಆಸ್ಟ್ರೇಲಿಯಾ ತಂಡದ ವಿರುದ್ಧ ಪಂದ್ಯ ನಡೆಯಲಿದೆ.
ಭಾರತ ಕ್ರಿಕೆಟ್ ತಂಡದ ಆಯ್ಕೆ ಸಮಿತಿಯು ಆಸ್ಟ್ರೇಲಿಯಾ ವಿರುದ್ಧದ ಐಸಿಸಿ ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್ ಫೈನಲ್‌ಗೆ ತಂಡವನ್ನು ಆಯ್ಕೆ ಮಾಡಿದೆ. ಒಟ್ಟು 15 ಜನ ಆಟಗಾರರನ್ನು ಬಿಸಿಸಿಐ ಆಯ್ಕೆಮಾಡಿದ್ದು, ಇದರಲ್ಲಿ ಆಶ್ಚರ್ಯ ಎನ್ನುವ ಹಾಗೇ ಅಜಿಂಕ್ಯ ರಹಾನೆ 15ರ ಬಳಗದಲ್ಲಿ ಸ್ಥಾನ ಪಡೆದುಕೊಂಡಿದ್ದಾರೆ.
ಭಾರತ ತಂಡ ಹೀಗಿದೆ. ಟೀಂ ಇಂಡಿಯಾ ನಾಯಕನಾಗಿ ರೋಹಿತ್ ಶರ್ಮಾ (ನಾಯಕ), ಶುಭಮನ್ ಗಿಲ್, ಚೇತೇಶ್ವರ ಪೂಜಾರ, ವಿರಾಟ್ ಕೊಹ್ಲಿ, ಅಜಿಂಕ್ಯ ರಹಾನೆ, ಕೆ.ಎಲ್. ರಾಹುಲ್, ಕೆ.ಎಸ್ ಭರತ್ (ವಿಕೆಟ್ ಕೀಪರ್), ರವಿಚಂದ್ರನ್ ಅಶ್ವಿನ್ (ಸ್ಪೀನ್ ಬೌಲರ್- ಆಲ್‌ರೌಂಡರ್), ರವೀಂದ್ರ ಜಡೇಜಾ ( ಸ್ಪೀನ್ ಬೌಲರ್ ಆಲ್‌ರೌಂಡರ್), ಅಕ್ಷರ್ ಪಟೇಲ್ ( ಸ್ಪೀನ್ ಬೌಲರ್- ಆಲ್‌ರೌಂಡರ್), ಶಾರ್ದೂಲ್ ಠಾಕೂರ್(ಮೇಡಿಯಮ್ ಪೇಸ್ ಬೌಲರ್- ಆಲ್‌ರೌಂಡರ್), ಮೊಹಮ್ಮದ್ ಶಮಿ (ಬೌಲರ್), ಮೊಹಮ್ಮದ್ ಸಿರಾಜ್ (ಬೌಲರ್), ಉಮೇಶ್ ಯಾದವ್ (ಬೌಲರ್), ಜಯದೇವ್ ಉನದತ್ (ಬೌಲರ್).