ಮೈಸೂರು ಸಾಂಸ್ಕೃತಿಕ ಮೇಳದ ಸರ್ವಾಧ್ಯಕ್ಷರಾಗಿ ಎಂ. ಬಿ .ಜಯಶಂಕರ್ ಆಯ್ಕೆ.

ಮೈಸೂರು ಸಾಂಸ್ಕೃತಿಕ ಮೇಳದ ಸರ್ವಾಧ್ಯಕ್ಷರಾಗಿ ಎಂ. ಬಿ .ಜಯಶಂಕರ್ ಆಯ್ಕೆ.
ಕುಕನೂರು : ಕೊಪ್ಪಳ ಜಿಲ್ಲೆಯ ಕುಕನೂರಿನ ಕನ್ನಡ ಸಾಹಿತ್ಯ ಸಂಸ್ಕೃತಿ ಅಭಿವೃದ್ದಿ ಟ್ರಸ್ಟ್ ಹಾಗೂ ಮೈಸೂರು ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು ಮತ್ತು ಜಸ್ಟ್ ಮಾತ್ ಮಾತಲ್ಲಿ ಮೈಸೂರು ಸ್ನೇಹ ಕೂಟ ಸಹಯೋಗದಲ್ಲಿ ಅಕ್ಟೋಬರ್ 6 ರಂದು ಮೈಸೂರಿನ ವಿಜಯ ನಗರ ಬಡಾವಣೆ 1 ನೇ ಹಂತದ ಜಿಲ್ಲಾ ಸಾಹಿತ್ಯ ಪರಿಷತ್ ಸಭಾಂಗಣದಲ್ಲಿ. ನಡೆಯುವ 11 ನೇ ರಾಜ್ಯ ಮಟ್ಟದ ಸಾಂಸ್ಕೃತಿಕ ಮೇಳ ದ ಸವಾ೯ಧ್ಯಕ್ಷರಾಗಿ ಮೈಸೂರಿನ ಹಿರಿಯ ಸಾಹಿತಿ .ಎಂ. ಬೀ ಜಯಶಂಕರ್ ಅವರನ್ನು ಆಯ್ಕೆ ಮಾಡಿ ಸಮ್ಮೇಳನಕ್ಕೆ ಆಹ್ವಾನ ನೀಡಲಾಯಿತು.
ವೃತ್ತಿಯಿಂದ ರಾಜ್ಯ ಸರಕಾರದ ನಿವೃತ್ತ ಮುಖ್ಯ ಎಂಜಿನಿಯರ್ ಆಗಿರುವ ಜಯಶಂಕರ್ ಮೈಸೂರ ವಿಶ್ವ ವಿದ್ಯಾಲಯದ ಡಾ. ಬೀ.ಆರ್. ಅಂಬೇಡ್ಕರ್ ಸಂಶೋಧನಾ ಮತ್ತು ವಿಸ್ತರಣಾ ಕೇಂದ್ರದ ವಿಶ್ರಾಂತ ನಿರ್ದೇಶಕರಾಗಿದ್ದಾರೆ. ಕವಿ ವಚನಕಾರ ,ಸಾಹಿತಿಯಾಗಿ ಅಮೂಲ್ಯ ಕೃತಿಗಳನ್ನು ಬರೆದಿದ್ದಾರೆ. ಅರಿವಿನ ಭಾಸ್ಕರ್ (ಕವನ ಸಂಕಲನ) ಮಾಧ್ಯಮದಲ್ಲಿ ಶ್ರೀನಿವಾಸ ಪ್ರಸಾದ( ಸಂಪಾದಕೀಯ) ದಲಿತ ದಪ೯ಣ( ಆಧುನಿಕ ವಚನ ಸಂಕಲನ ) ಬೂಸಾ ಸಾಹಿತ್ಯ ಎಂದ ಮಾತು ,(ಕವನ ಸಂಕಲನ) ದಲಿತ ಧ್ವನಿ (ಧ್ವನಿ ಸುರಳಿ) ಅಂಬೇಡ್ಕರ್ ಮತ್ತು ಲೋಹಿಯಾ ಬಿಡಿ ಲೇಖನ :ಮುಕ್ತ ವಿ.ವಿ.ಕೆ ಸಿದ್ಧ ಪಡಿಸಿದ ಪಾಠಗಳು. ಪ್ರಕಟಿಸಿದ್ದಾರೆ , ಗೋಲ್ಡ್ ಪ್ಲೆಟ್ ಅವಾರ್ಡ್ ಅಂತರರಾಷ್ಟ್ರೀಯ ಪ್ರಶಸ್ತಿ , ಮೈಸೂರು ಜಿಲ್ಲಾ ಕನ್ನಡ ರಾಜ್ಯೋತ್ಸವ ಪ್ರಶಸ್ತಿ , ವಚನ ಆಕಾಡೆಮಿ ಹಾಗೂ ಹೊಯ್ಸಳ ಕನ್ನಡ ಪ್ರಶಸ್ತಿ ಸೇರಿ ಸಾಕಷ್ಟು ಗೌರವ ಪುರಸ್ಕಾರ ಇವರಿಗೆ ಸಂದಿವೆ. 80ರ ಇಳಿವಯಸ್ಸಿನಲ್ಲೂ. ಸಾಹಿತ್ಯ ಮತ್ತು ಶೈಕ್ಷಣಿಕ ಕ್ಷೇತ್ರದ ಮೇಲೆ ಆಸಕ್ತಿ ಮೂಡಿಸಿಕೊಂಡಿದ್ದಾರೆ. ಮಂಗಳವಾರ ಮೈಸೂರಿನಲ್ಲಿ ಮಾಜಿ ಸಚಿವರೂ ಹಾಗೂ ಕೊಳ್ಳೆಗಾಲ ಮಾಜಿ ಶಾಸಕ ರಾದ ಎನ್.ಮಹೇಶ್ ಅವರ ಸಮ್ಮುಖದಲ್ಲಿ ಕನ್ನಡ ಸಾಹಿತ್ಯ ಸಂಸ್ಕೃತಿ ಅಭಿವೃದ್ದಿ ಟ್ರಸ್ಟ್ ಅಧ್ಯಕ್ಷ ರುದ್ರಪ್ಪ ಭಂಡಾರಿ ಅವರು ಸನ್ಮಾನಿಸಿ ಗೌರವಿಸಿ ಅಧಿಕೃತವಾಗಿ ಸಮ್ಮೇಳನಕ್ಕೆ ಆಹ್ವಾನಿಸಿದರು.

Leave a Reply

error: Content is protected !!