LOCAL EXPRESS : ತಾಲೂಕಿನ ಹಿರಿಯ ಪತ್ರಕರ್ತ ಕೊಟ್ರಪ್ಪ ತೋಟದ ನಿಧನ!
ಯಲಬುರ್ಗಾ-ಕುಕನೂರು : ತಾಲೂಕಿನ ಹಿರಿಯ ಪತ್ರಕರ್ತರಾದ ಕೊಟ್ರಪ್ಪ ತೋಟದ ಅವರು ನಿನ್ನೆ ರಾತ್ರಿ 11:30ರ ಸುಮಾರಿಗೆ ನಿಧನರಾಗಿದ್ದಾರೆ ಎಂದು ತಿಳಿದು ಬಂದಿದೆ.
ತೋಟದ ಅವರು ಕುಕನೂರು ತಾಲೂಕಿನ ಮಂಗಳೂರು ಗ್ರಾಮದ ನಿವಾಸಿಯಾಗಿದ್ದು, ಕೆಲವು ದಿನಗಳಿಂದ ಅನಾರೋಗ್ಯದಿಂದ ಬಳಲುತ್ತಿದ್ದರು ಎನ್ನಲಾಗಿದೆ. ಈ ಕಾರಣಗಳಿಂದಲೇ ಅವರು ನಿಧನರಾಗಿರಬಹುದು ಎನ್ನುವ ವಿಷಯ ತಿಳಿದು ಬಂದಿದೆ. ಇವರು ತಾಲೂಕಿನ ಪತ್ರಕರ್ತರಾಗಿ ನವೋದಯ, ಕಿತ್ತೂರು ಕರ್ನಾಟಕ ಸೇರಿದಂತೆ ವಿವಿಧ ಪತ್ರಿಕೆಗಳಲ್ಲಿ ತಮ್ಮದೇ ಆದ ವಿಶೇಷ ಬರವಣಿಗೆ ಹಾಗೂ ಲೇಖನಗಳು ಹಾಗೂ ಈ ಭಾಗದ ಮಠ, ಮಾನ್ಯಗಳ ಪರಿಚಯ ಹಾಗೂ ಸ್ವಾಮೀಜಿಗಳ ಕುರಿತು ಅವರ ಜೀವನ ಚರಿತ್ರೆಗಳನ್ನು ಮತ್ತು ರಾಜಕೀಯ ಧುರೀಣರ, ಮುಖಂಡರ, ಸಾಹಿತಿಗಳ, ಶರಣ, ಶರಣೆಯರ ಕುರಿತು ತಮ್ಮದೇ ಆದ ಶೈಲಿಯಲ್ಲಿ ಅತ್ಯದ್ಭುತ ಬರವಣಿಗೆ ಮೂಲಕ ಪತ್ರಿಕಾ ರಂಗದಲ್ಲಿ ವಿಶೇಷ ಛಾಪು ಮೂಡಿಸಿದ ವ್ಯಕ್ತಿತ್ವ ಹೊಂದಿದವರಾಗಿದ್ದರು.
ಇಂದು ಮದ್ಯಾಹ್ನ 2 ಗಂಟೆಗೆ ಮಂಗಳೂರಿನ ರೌದ್ರಭೂಮಿಯಲ್ಲಿ ಅಂತ್ಯ ಕ್ರಿಯೇ ನಡೆಯಲಿದೆ ಎಂದು ಕುಟುಂಸ್ಥರು ತಿಳಿಸಿದ್ದಾರೆ.