BIG NEWS : ಮೃತ ರೇಣುಕಾಸ್ವಾಮಿ ಮಹಾ ಕಾಮಾಂಧ…? : ಚಾರ್ಟ್ ಶೀಟ್ ನಲ್ಲಿನ ಮತ್ತೊಂದು ಸ್ಫೋಟಕ ಮಾಹಿತಿ..!!
ಬೆಂಗಳೂರು : ಚಿತ್ರದುರ್ಗದ ರೇಣುಕಾ ಸ್ವಾಮಿಯನ್ನು ಕೊಲೆ ಮಾಡಿದ ಪ್ರಕರಣಕ್ಕೆ ಸಂಬಂಧಿಸಿದ ಎಲ್ಲಾ ಆರೋಪಿಗಳ ವಿರುದ್ಧ ಪೋಲೀಸರು ಕೋರ್ಟಿಗೆ ಚಾರ್ಜ್ ಶೀಟ್ ಸಲ್ಲಿಸಿದ್ದಾರೆ. ಇದೀಗ ಚಾರ್ಟ್ ಶೀಟ್‌ನಲ್ಲಿನ ಮತ್ತೊಂದು ಸ್ಫೋಟಕ ವಿಷಯ ಬಯಲಾಗಿದ್ದು, ರೇಣುಕಾ ಸ್ವಾಮಿ ಕೇವಲ ಪವಿತ್ರಾಗೌಡ ಅಷ್ಟೇ ಅಲ್ಲದೆ ಕನ್ನಡದ ಚಿತ್ರರಂಗದ ನಟಿಯರಾದ ರಾಗಿಣಿ ದ್ವಿವೇದಿ, ಶುಭಾ ಪೂಂಜಾ ಸೇರಿದಂತೆ ಹಲವು ನಟಿಯರಿಗೂ ಅಶ್ಲೀಲ ಮೆಸೇಜ್ ಕಳುಹಿಸಿದ್ದ ಅನ್ನೋದು
ಬಟಾ-ಬಯಲಾಗಿದೆ ಎಂದು ತಿಳಿದು ಬಂದಿದೆ.
ರೇಣುಕಾ ಸ್ವಾಮಿ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ನ್ಯಾಯಾಲಯಕ್ಕೆ ಪೊಲೀಸರು ಸಲ್ಲಿಸಿರುವ ಚಾರ್ಜ್ ಶೀಟ್‌ನಲ್ಲಿರುವ ಒಂದೊಂದು ವಿಷಯಗಳು ಕೂಡ ಆಘಾತಕಾರಿದೆ. ರೇಣುಕಾ ಸ್ವಾಮಿ ಪವಿತ್ರ ಗೌಡಗೆ ಅಶ್ಲೀಲ ಮೆಸೇಜ್ ಮಾಡುವುದರಿಂದ ಹಿಡಿದು, ನಟ ದರ್ಶನ್ ಹಾಗೂ ಎಲ್ಲಾ ಆರೋಪಿಗಳು ಅರೆಸ್ಟ್ ಆಗುವವರೆಗೂ, ಹಾಗೂ ಹೇಗೆ ಕೊಲೆ ಆಯ್ತು ಎಂದು ಪ್ರತಿಯೊಂದು ಅಂಶವನ್ನು ಪೊಲೀಸರು ಜಾರ್ಜ್ ಶೀಟ್ ನಲ್ಲಿ ಉಲ್ಲೇಖಿಸಿದ್ದಾರೆ. ಜೊತೆಗೆ ರೇಣುಕಾ ಸ್ವಾಮಿ ಕೇವಲ ಪವಿತ್ರ ಗೌಡ ಅಷ್ಟೇ ಅಲ್ಲದೆ ರಾಗಿಣಿ ದ್ವಿವೇದಿ, ಶುಭಾ ಪೂಂಜಾ ಸೇರಿದಂತೆ ಅನೇಕ ನಟಿಯರಿಗೆ ರೇಣುಕಾಸ್ವಾಮಿ ತನ್ನ ನಕಲಿ (ಫೇಕ್) ಅಕೌಂಟ್ ನಿಂದ ಅಶ್ಲೀಲ ಸಂದೇಶ ಕಳುಹಿಸಿದ್ದನಂತೆ. ಪೊಲೀಸರ ವಿಚಾರಣೆ ವೇಳೆಯಲ್ಲಿ ಪ್ರದೋಶ್ ಮತ್ತು ವಿನಯ್ ನೀಡಿರುವ ಹೇಳಿಕೆಯಲ್ಲಿ ರೇಣುಕಾಸ್ವಾಮಿ ಈ ನಟಿಯರಿಗೆ ಮಾತ್ರವಲ್ಲ, ಇನ್ನೂ ಹಲವು ನಟಿಯರಿಗೆ ಮೆಸೇಜ್ ಕಳುಹಿಸಿದ್ದ ಅನ್ನೋ ಮಾತು ಉಲ್ಲೇಖವಾಗಿದೆ ಎಂದು ಸ್ಪೋಟಕ ಮಾಹಿತಿ ಹೋರಬಂದಿದೆ.
ಸ್ಪೋಟಕ ಮಾಹಿತಿ ಬಹಿರಂಗವಾದ ಬೇಗೆ..!
ರೇಣುಕಾ ಸ್ವಾಮಿಯನ್ನು ಆರ್ ಆರ್ ನಗರದ ಪಟ್ಟಣ ಗೆರೆ ಶೆಡ್ ಗೆ ಕರೆದುಕೊಂಡು ಬಂದಾಗ ಆತನ ಮೊಬೈಲ್ ಮಾಡಿದಾಗ ರಾಗಿಣಿ ದ್ವಿವೇದಿ, ಶುಭಾ ಪೂಂಜಾ ಸೇರಿದಂತೆ ಹಲವರಿಗೆ ತನ್ನ ನಕಲಿ (ಫೇಕ್) ಅಶ್ಲೀಲ ಮೆಸೇಜ್ ಕಳುಹಿಸಿದ್ದನ್ನು ನಾವು ನೋಡಿದ್ದೇವೆ ಎಂದು ಆರೋಪಿ ಪ್ರದೋಶ್, ವಿನಯ್ ಪೋಲೀಸರ ವಿಚಾರಣೆ ವೇಳೆ ಹೇಳಿದ್ದನ್ನು ಚಾರ್ಜ್ ಶೀಟ್ ನಲ್ಲಿ ದಾಖಲಾಗಿದೆ.