Post Views: 263
LOCAL NEWS : ಬಸ್ ಸೌಲಭ್ಯಕ್ಕಾಗಿ ಎಐಡಿಎಸ್‌ಓ ವತಿಯಿಂದ ಪ್ರತಿಭಟನೆ!
ಕೊಪ್ಪಳ : ತಾಲೂಕಿನ ಮುನಿರಾಬಾದ್ ಗ್ರಾಮಕ್ಕೆ ವಿದ್ಯಾಭ್ಯಾಸಕ್ಕೆ ಹೋಗುವ ವಿದ್ಯಾರ್ಥಿಗಳು ಎದುರಿಸುತ್ತಿರುವ ಬಸ್ ನ ವಿವಿಧ ರೀತಿಯ ಸಮಸ್ಯೆಗಳನ್ನು ಪರಿಹರಿಸಲು ಎಐಡಿಎಸ್‌ಓ ನೇತೃತ್ವದಲ್ಲಿ ವಿದ್ಯಾರ್ಥಿಗಳ ಪ್ರತಿಭಟನೆ ನಡೆಯಿತು.

ಈ ಪ್ರತಿಭಟನೆಯನ್ನು ಉದ್ದೇಶಿಸಿ ಎಐಡಿಎಸ್‌ಓ ಜಿಲ್ಲಾ ಸಂಚಾಲಕಾರದ ಗಂಗರಾಜ ಅಳ್ಳಳ್ಳಿ ಮಾತನಾಡಿ, ಹುಲಿಗಿ, ಹೊಸ ಲಿಂಗಾಪುರ ಮತ್ತು ಮುನಿರಾಬಾದ್ ಮಧ್ಯದ ನಡುವಿನ ರಾಷ್ಟ್ರೀಯ ಹೆದ್ದಾರಿಯ ರಸ್ತೆಗಳಿಗೆ ಫ್ಲೈ ಓವರ್ ನಿರ್ಮಿಸುತ್ತಿದ್ದು, ಇದರಿಂದಾಗಿ ಹುಲಿಗಿ, ಹೊಸ ಲಿಂಗಾಪುರ ಹೊಸಳ್ಳಿ ಸೇರಿದಂತೆ ವಿವಿಧ ಹಳ್ಳಿಗಳಿಂದ ಮುನ್ರಾಬಾದ್ ಶಾಲಾ ಕಾಲೇಜುಗಳಿಗೆ ಬರುವ ವಿದ್ಯಾರ್ಥಿಗಳಿಗೆ ಮುನಿರಾಬಾದ್ ಒಳಗೆ ಹಲವಾರು ಬಸ್ಸುಗಳು ಬರದೇ ಇರುವುದರಿಂದ, ಹಾಗೆಯೇ ಈ ಪ್ರಮುಖ ಹಳ್ಳಿಗಳಲ್ಲಿ ಯಾವುದೇ ಬಸ್ಸುಗಳು ನಿಲ್ಲಿಸದೆ ಮತ್ತು ಮುನಿರಾಬಾದ್ ಒಳಗಡೆ ಹೋಗದೆ ಹಾಗೆಯೇ ರಾಷ್ಟ್ರೀಯ ಹೆದ್ದಾರಿಯ ಮೂಲಕ ಹೊಸಪೇಟೆಗೆ ಹೋಗುತ್ತಿವೆ. ಇದರಿಂದಾಗಿ ವಿದ್ಯಾರ್ಥಿಗಳನ್ನು ಮುನಿರಾಬಾದ್ಗೆ 3 ಕಿ.ಮೀ ಮುಂಚೆಯೇ ಬಸ್ ಗಳನ್ನು ನಿಲ್ಲಿಸುತ್ತಿರುವುದರಿಂದ ಹಲವು ಬಾರಿ ವಿದ್ಯಾರ್ಥಿಗಳು ನಡೆದುಕೊಂಡೇ ಬರುತ್ತಿದ್ದಾರೆ, ಒನ್ ವೇ ಅಲ್ಲೇ ಬರುತ್ತಿರುವುದರಿಂದ, ಅನೇಕ ಬಾರಿ ವಾಹನ ಅಪಘಾತಗಳು ಸಂಭವಿಸಿವೆ. ಹಾಗೆ ಪಾಲಕರಿಗೂ ಕೂಡ ಶಾಲಾ ಮತ್ತು ಪಿಯು ವಿದ್ಯಾರ್ಥಿಗಳನ್ನು ಕಳಿಸಲು ಭಯಪಡುತ್ತಿದ್ದಾರೆ. ವಿದ್ಯಾರ್ಥಿಗಳು ಹಲವು ಬಾರಿ ನಡೆದುಕೊಂಡೆ ಹೋಗುವುದರಿಂದ ಶಾಲಾ-ಕಾಲೇಜುಗಳಲ್ಲಿ ತರಗತಿಗಳನ್ನು ಸರಿಯಾಗಿ ಹಾಜರಾಗಲು ಸಾಧ್ಯವಾಗುತ್ತಿಲ್ಲ.
ಹಾಗೆಯೇ ಕೆಲವು ಬಸ್ಸುಗಳು ಹೊಸ ಲಿಂಗಾಪುರ, ಹುಲಿಗಿ, ಹೊಸಳ್ಳಿ ಮತ್ತು ಗಿಣಿಗೇರ ಮುಂತಾದ ಹಳ್ಳಿಗಳನ್ನು ವಿದ್ಯಾರ್ಥಿಗಳು ಬಸ್ ನಿಲ್ಲಿಸಿ ಎಂದರು ಸ್ಪಂದಿಸದೆ ಹಾಗೆ ಚಲಿಸಿಕೊಂಡು ಹೋಗುತ್ತಾರೆ,ಹಾಗೇ ಸಮರ್ಪಕವಾಗಿ ಬಸ್ಸುಗಳ ವ್ಯವಸ್ಥೆ ಇಲ್ಲದಿರುವುದರಿಂದ ವಿದ್ಯಾರ್ಥಿಗಳು ತೊಂದರೆ ಅನುಭವಿಸುತ್ತಿದ್ದಾರೆ. ಹಾಗೆ ವಿದ್ಯಾರ್ಥಿಗಳು ಬಸ್ ಅನ್ನು ಹತ್ತುವುದನ್ನು ನೋಡಿ ಹಲವು ಬಾರಿ ಬಸ್ ನಿಲ್ಲಿಸದೆಯೇ ಬಸ್ ಚಾಲಕರು ಹಾಗೆ ಹೋಗುತ್ತಾರೆ. ಕೆಲವು ಬಾರಿ ವಿದ್ಯಾರ್ಥಿನಿಯರು ವಿದ್ಯಾರ್ಥಿಗಳು ಪ್ರಶ್ನೆ ಮಾಡಿದಾಗಲೂ ಕೆಲವರು ವಿದ್ಯಾರ್ಥಿಗಳಿಗೆ ಅವಾಚ್ಯ ಶಬ್ದಗಳಿಂದ ಬಯುತ್ತಿದ್ದಾರೆ. ಈ ರೀತಿಯ ಅನೇಕ ಸಮಸ್ಯೆಗಳನ್ನ ಈ ಭಾಗದ ವಿದ್ಯಾರ್ಥಿಗಳು ಎದುರಿಸುತ್ತಿದ್ದಾರೆ.
ವಿದ್ಯಾರ್ಥಿಗಳ ಈ ಸಮಸ್ಯೆಗಳನ್ನು ಆದಷ್ಟು ಬೇಗನೆ ಪರಿಹರಿಸಬೇಕೆಂದು ವಿದ್ಯಾರ್ಥಿಗಳ ಪರವಾಗಿ ಎ.ಐ.ಡಿ.ಎಸ್.ಓ ವಿದ್ಯಾರ್ಥಿ ಸಂಘಟನೆಯೂ ಆಗ್ರಹಿಸುತ್ತದೆ ಎಂದರು.
ನಂತರ ಅನೇಕ ವಿದ್ಯಾರ್ಥಿಗಳು ತಮ್ಮ ಸಮಸ್ಯೆಗಳ ಕುರಿತಂತೆ ಮಾತನಾಡಿದರು. ಈ ಸಂದರ್ಭದಲ್ಲಿ ಎಐಡಿಎಸ್‌ಓ ಕಾರ್ಯಕರ್ತರಾದ ಸದಾಶಿವ, ವೆಂಕಟೇಶ, ವಿಜಯಾನಂದ, ದೇವ, ವಿದ್ಯಾರ್ಥಿಗಳಾದ, ಸಾಹಿಲ್,ಸಂಜನಾ, ರೇಣುಕಾ, ಪ್ರೀತಮ್, ಸಾಧನ, ಲಿಂಗರಾಜ್ ಮುಂತಾದ 200 ಕ್ಕೂ ಹೆಚ್ಚು ವಿದ್ಯಾರ್ಥಿಗಳು ಭಾಗವಹಿಸಿದ್ದರು.