LOCAL NEWS : ಕಾಂಗ್ರೆಸ್ ಕಛೇರಿಯಲ್ಲಿ ಶ್ರದ್ಧಾಂಜಲಿ ಸಭೆ : ಮಾಜಿ ಸಿಎಂ ಎಸ್.ಎಂ.ಕೃಷ್ಣ ನಿಧನಕ್ಕೆ ಕಂಬನಿ..!
ಯಲಬುರ್ಗಾ : ಮಾಜಿ ಮುಖ್ಯಮಂತ್ರಿ ಎಸ್.ಎಂ.ಕೃಷ್ಣ ನಿಧನರಾದ ಹಿನ್ನೆಲೆಯಲ್ಲಿ ಪಟ್ಟಣದ ಬ್ಲಾಕ್ ಕಾಂಗ್ರೆಸ್ ಕಛೇರಿಯಲ್ಲಿ ಕಾರ್ಯಕರ್ತರು ಶ್ರದ್ಧಾಂಜಲಿ ಸಲ್ಲಿಸಿ, ಸಂತಾಪ ಸೂಚಿಸಲಾಯಿತು.
ಬ್ಲಾಕ್ ಕಾಂಗ್ರೆಸ್ ಕಾರ್ಯಧ್ಯಕ್ಷ ಕರಿಬಸಪ್ಪ ನಿಡಗುಂದಿ ಮಾತನಾಡಿ, ರಾಜ್ಯ ಹಾಗೂ ದೇಶದ ಕಂಡ ಅತ್ಯುತ್ತಮ ನಾಯಕರಾಗಿ, ನಾಡಿನ ಸಿಎಂ ಆಗಿ ಉತ್ತಮ ಕೆಲಸವನ್ನು ಮಾಡಿದ್ದಾರೆ. ಕರ್ನಾಟಕ ಹಾಗೂ ಕೊಪ್ಪಳ ಜಿಲ್ಲೆಗೆ ಕೃಷ್ಣ ರವರ ಕೊಡುಗೆ ಅಪಾರವಿದೆ. ಇಂದು ಅವರ ಅಗಲಿಕೆ ಬಹಳಷ್ಟು ನೋವು ತಂದಿದೆ ಎಂದರು.
ಬೆಂಗಳೂರನಲ್ಲಿ ಐಟಿ-ಬಿಟಿ ಸ್ಥಾಪಿಸಿ ಅಭಿವೃದ್ಧಿಗೆ ಶ್ರಮಿಸಿದ್ದಾರೆ. ಕೇಂದ್ರ ಸಚಿವರಾಗಿ, ರಾಜ್ಯಪಾಲ, ಮುಖ್ಯಮಂತ್ರಿಗಳಾಗಿ ದಕ್ಷ ಆಡಳಿತ ನಡೆಸಿ ರಾಜ್ಯದ ಜನತೆಗೆ ಕೊಡುಗೆ ನೀಡಿದ್ದಾರೆ. ಮೃತರ ಆತ್ಮಕ್ಕೆ ಶಾಂತಿ ಸಿಗಲಿಂದು ದೇವರಲ್ಲಿ ಪ್ರಾರ್ಥಿಸುತ್ತೇನೆ ಎಂದರು.
ಈ ವೇಳೆ ಬ್ಲಾಕ್ ಕಾಂಗ್ರೆಸ್ ಕಾರ್ಯಧ್ಯಕ್ಷ ಡಾ.ಶಿವನಗೌಡ ದಾನರೆಡ್ಡಿ,ಮುಖಂಡರಾದ ಶರಣಪ್ಪ ಗಾಂಜಿ, ಆನಂದ ಉಳ್ಳಾಗಡ್ಡಿ, ಮಲ್ಲು ಜಕ್ಕಲಿ, ಸಿಎಂ ಈಶ್ವರ ಅಟಮಾಳಗಿ, ಮಲ್ಲೇಶಗೌಡ ಪಾಟೀಲ, ಹುಲಗಪ್ಪ ಬಂಡಿವಡ್ಡರ್, ಹನುಮಂತ ಭಜಂತ್ರಿ, ಸಂತೋಷ ಬೆಣಕಲ್ಲ, ವಂಸತರಾವ ಕುಲಕರ್ಣಿ, ಎಂ.ಎಫ್.ನದಾಫ್, ಪುನೀತ್ ಕೊಪ್ಪಳ, ಮೌನೇಶ ಬಡಿಗೇರ್, ರಾಜ ಹಡಪದ, ಪರಶುರಾಮ ಸಂಗನಾಳ , ಖಾಜಾವಲಿ ಗಡಾದ ಇದ್ದರು.