ಕುಕುನೂರು : ತಾಲೂಕಿನ ಗವರಾಳ ಗ್ರಾಮದಲ್ಲಿ ಕಳೆದ ಒಂದು ವಾರದಿಂದ ವಾಂತಿಬೇದಿ ಪ್ರಕರಣಗಳು ಕಂಡುಬಂದ ಹಿನ್ನೆಲೆಯಲ್ಲಿ ಗ್ರಾಮದಲ್ಲಿ ತಾತ್ಕಾಲಿಕ ಆರೋಗ್ಯ ಕೇಂದ್ರವನ್ನು ತೆರೆಯಲಾಗಿದ್ದು, ಒಂದು ವಾರದಲ್ಲಿ ಸುಮಾರು 35 ಕ್ಕೆ ಹೆಚ್ಚು ಜನರಿಗೆ ವಾಂತಿ ಬೇದಿ ಕಾಣಿಸಿಕೊಂಡಿವೆ. ಈ ಹಿನ್ನಲೆಯಲ್ಲಿ
ಶನಿವಾರ ಗ್ರಾಮಕ್ಕೆ
ಜಿಲ್ಲಾ ಸರ್ವೇ ಕ್ಷಣ ಅಧಿಕಾರಿ ಡಾ.ನಂದಕುಮಾರ ಭೇಟಿ ನೀಡಿ ಗ್ರಾಮದ ಕುಡಿಯುವ ನೀರಿನ ಘಟಕ ಹಾಗೂ ಚರಂಡಿ ನಿರ್ವಹಣೆಯನ್ನು ವೀಕ್ಷಿಸಿ ಸ್ವಚ್ಛತೆಯನ್ನು ಕಾಪಾಡಿಕೊಳ್ಳುವಂತೆ ತಿಳಿಸಿದರು.
ಈ ಸಂದರ್ಭದಲ್ಲಿ ತಾಲೂಕ ವೈದ್ಯಾಧಿಕಾರಿ ಡಾಕ್ಟರ್ ಸುಮಾ ಪಾಟೀಲ್, ಡಾ.ಗುರು ಪ್ರಸಾದ, ಸುಧೀರ್ ಲ್ಯಾಬ್ ಟೆಕ್ನಿಷಿಯಂ, ಹಾಗೂ ಬಸಪ್ಪ. ಶಂಕ್ರಪ್ಪ ಅಂಗಡಿ ಹಿರಿಯ ಆರೋಗ್ಯ ಅಧಿಕಾರಿ.ಪಿಡಿಓ ವೈಜನಾಥ ಪಾಟೀಲ, ಗ್ರಾಮ ಪಂಚಾಯತ ಸದಸ್ಯ ಮಹೇಶ ಗಾವರಾಳ ಹಾಗೂ ಇತರರಿದ್ದರು.