ನಿಧನ ವಾರ್ತೆ
ಕರ್ನಾಟಕ ರಾಜ್ಯ ಅಂಗವಿಕಲರ ಒಕ್ಕೂಟದ ರಾಜ್ಯಾಧ್ಯಕ್ಷರಾದ ಶಶಿಧರ ಶಿರಸಂಗಿ ನಿಧನ!
ಶಿರಹಟ್ಟಿ: ಸ್ಥಳೀಯ ಆಸರೆ ಸಂಸ್ಥೆಯ ಕಾರ್ಯದರ್ಶಿ ಹಾಗೂ ಲೋಕ ದರ್ಶನ ದಿನಪತ್ರಿಕೆಯ ವರದಿಗಾರರು ಮತ್ತು ಕರ್ನಾಟಕ ರಾಜ್ಯ ಅಂಗವಿಕಲರ ಒಕ್ಕೂಟದ ರಾಜ್ಯಾಧ್ಯಕ್ಷರಾದ ಶಶಿಧರ ಶಿರಸಂಗಿ ಅವರು ಬುಧವಾರ ಮುಂಜಾನೆ ಲಿಂಗೈಕ್ಯರಾಗಿದ್ದಾರೆ.
ಮೃತರಿಗೆ ಪತ್ನಿ, ಸಹೋದರರು, ಸಹೋದರಿಯರು, ಕುಟುಂಬ ವರ್ಗ ಸೇರಿದಂತೆ ಅಪಾರ ಬಂಧು ಬಳಗವನ್ನು ಅಗಲಿದ್ದಾರೆ
ಶಶಿಧರ ಶಿರಸಂಗಿ ಅವರು ಸರಳ ಸಜ್ಜನಿಕೆಯ ವ್ಯಕ್ತಿ, ಆಸರೆ ಸಂಸ್ಥೆ ಮೂಲಕ ಹತ್ತಾರು ವರ್ಷಗಳಿಂದ ಲಕ್ಷಾಂತರ ಬಡ ನಿರುದ್ಯೋಗಿಗಳಿಗೆ ಕರಕುಶಲ ತರಬೇತಿ ನೀಡಿ ಸ್ವಾವಲಂಬಿ ಜೀವನಕ್ಕೆ ದಾರಿ ತೋರುತ್ತಿದ್ದರು, ಮತ್ತು ದಿನ ಪತ್ರಿಕೆ, ಪ್ರಜಾಧ್ವನಿ ಸುದ್ದಿವಾಹಿನಿ ಮೂಲಕ ಕ್ರಾಂತಿಕಾರಿ ಸುದ್ದಿಗಳನ್ನು ಜನರಿಗೆ ಉಣಬಡಿಸಿ ಸಮಾಜದ ಅಂಕು ಡೊಂಕುಗಳ ತಿದ್ದುವ ಕಾರ್ಯ ಮಾಡುತ್ತಿದ್ದರು. ಇಂತಹ ಬಡವರ ಬಂಧುವಿನ ಅಗಲಿಕೆ ಶಿರಹಟ್ಟಿ ತಾಲೂಕಿಗೆ ತುಂಬಲಾರದ ನಷ್ಟ ಎಂದು ಶ್ರೀ ಜ. ಫಕೀರಸಿದ್ದರಾಮ ಮಹಾಸ್ವಾಮಿಗಳುಹೇಳಿದರು.
ಸಂತಾಪ:
ಪ್ರೋ. ಐ.ಜಿ. ಸನಾದಿ, ಶಾಸಕ ಡಾ. ಚಂದ್ರು ಲಮಾಣಿ, ಮಾಜಿ ಶಾಸಕ ರಾಮಣ್ಣ ಲಮಾಣಿ, ರಾಮಕೃಷ್ಣ ದೊಡ್ಡಮನಿ, ಸುಜಾತಾ ದೊಡ್ಡಮನಿ, ಮಂಜುನಾಥ ಬಮ್ಮನಕಟ್ಟಿ, ಫಕ್ಕೀರೇಶ ಮ್ಯಾಟಣ್ಣವರ, ಶಿವಪ್ರಕಾಶ ಮಹಾಜನಶಟ್ಟರ, ಕಾರ್ಯನಿರತ ಪತ್ರಕರ್ತರ ಸಂಘದ ಜಿಲ್ಲಾಧ್ಯಕ್ಷ ರಾಜು ಹೆಬ್ಬಳ್ಳಿ, ತಾಲೂಕಾಧ್ಯಕ್ಷ ಮಂಜುನಾಥ ಅರೆಪಲ್ಲಿ ಹಾಗೂ ಸರ್ವ ಸದಸ್ಯರು, ವಿವಿಧ ಕನ್ನಡಪರ ಸಂಘಟನೆಗಳ ಸದಸ್ಯರು ಸಂತಾಪ ಸೂಚಿಸಿದರು.