Post Views: 159


ಮುಂಡರಗಿ : ಗದಗ ಜಿಲ್ಲೆ ಮುಂಡರಗಿ ತಾಲೂಕಿನ ಕೋರ್ಲಹಳ್ಳಿ ಸೇತುವೆ ಬಳಿ ತುಂಗಭದ್ರಾ ನದಿಯಲ್ಲಿ ಈಜಲು ಹೋಗಿ ಮೂವರು ನೀರು ಪಾಲು ಆಗಿರುವ ಪ್ರಕರಣ ದಾಖಲಾಗಿತ್ತು.
ಓರ್ವ ವ್ಯಕ್ತಿಯ ಮೃತ ದೇಹ ಪತ್ತೆಯಾಗಿದೆ. ಇನ್ನಿಬ್ಬರಿಗಾಗಿ ಶೋಧ ಕಾರ್ಯ ಮುಂದುವರೆಯುತ್ತಿದೆ.
ಶಿರಹಟ್ಟಿ ಮೂಲದ ಶರಣಪ್ಪ ಬಡಿಗೇರ್, ಗುರುನಾಥ ಬಡಿಗೇರ್ ಹಾಗೂ ಮಹೇಶ್ ಬಡಿಗೇರ್ ನೀರು ಪಾಲು ಆಗಿದ್ದರು.
ಈಗಾಗಲೇ ಮಹೇಶ್ ಬಡಿಗೇರ್ (36) ಮೃತ ದೇಹ ಪತ್ತೇಯಾಗಿದೆ.
ಅಗ್ನಿಶಾಮಕ ದಳ ಹಾಗೂ ಮೀನುಗಾರರ ಸಹಾಯ ದಿಂದ ಶೋಧ ಕಾರ್ಯ ನಡೆಯುತ್ತಿದೆ. ಮೃತ ದೇಹ ಕಂಡು ಕುಟುಂಬಸ್ಥರ ಆಕ್ರಂದಣ ಮುಗಿಲು ಮುಟ್ಟಿದೆ.
ವರದಿ: ವೀರೇಶ್ ಗುಗ್ಗರಿ
You Might Also Like
error: Content is protected !!