ನಟ ಪುನೀತ್ ರಾಜ್‍ಕುಮಾರ್ 50 ನೇ ಜನ್ಮದಿನ: ಅಗಲಿದ ‘ಅಪ್ಪು’ವಿನ ಸ್ಮರಣೆ ಪ್ರಯುಕ್ತ .ಬುಕ್ಕು ಪೇನ್ನು, ಸ್ವೀಟ್ ವಿತರಣೆ..
ಮುದಗಲ್ಲ :- ಇಂದು ದಿವಂಗತ ನಟ ಪುನೀತ್ ರಾಜ್‍ಕುಮಾರ್ ಅವರ 50ನೇ ಜನ್ಮದಿನ. ಈ ಪ್ರಯುಕ್ತ
ಪುನೀತ್ ರಾಜಕುಮಾರ್ ಅವರ ಅಭಿಮಾನಿ ಯಾದ ರಮೇಶ್ ಹವಳಿ ಅವರು ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯ ವೆಂಕಟರಾಯರು ಪೇಟೆ ಶಾಲೆಯ ಮುದ್ದು ಮಕ್ಕಳಿಗೆ ಪುಸ್ತಕ ಪೇನ್ನು ವಿತರಣೆ ಮಾಡಿದರು..
ಈ ಸಂದರ್ಭದಲ್ಲಿ ಮಾತನಾಡಿದ ಮುಖ್ಯಾ ಗುರುಗಳಾದ ಸಂಗಯ್ಯ ಹಿರೇಮಠ ಅವರು ನಟ ಪುನೀತ್ ರಾಜ್‍ಕುಮಾರ್ 50 ನೇ ಜನ್ಮದಿನ: ಅಗಲಿದ ‘ಅಪ್ಪು’ವಿನ ಸ್ಮರಣೆ ಪ್ರಯುಕ್ತ ಪುಸ್ತಕ ವಿತರಣೆ ಮಾಡುತ್ತಿರುವುದು ಬಡ
ಮಕ್ಕಳಿಗೆ ಸಹಾಯ ಮಾಡುತ್ತಿರುವುದು ಪ್ರಶಂಸನೀಯ ವಿಷಯ ಎಂದರು.
ಮಾತನಾಡಿದರು ರಮೇಶ್ ಹವಳಿ ಅವರು ತಾಯಂದಿರಿಗೆ ತಮ್ಮ ಮಗು ಕೃಷ್ಣನ ಹಾಗಿರಬೇಕು ಎನ್ನುವ ಆಸೆ ಇರುತ್ತದೆ. ಅದರ ನಡುವೆ ಕರ್ನಾಟಕದ ಒಂದಿಡೀ ತಲೆಮಾರಿನ ಹೆಣ್ಮಕ್ಕಳು ಪುನೀತ್‌ನಂಥ ಮಗುವಿರಬೇಕು ಅಂತ ಆಸೆ ಪಟ್ಟಿದ್ದರು. ಈ ಕಾಲದ ಬಹುತೇಕ ಮಕ್ಕಳಿಗೆ ಪುನೀತ್ ಅಂದ್ರೆ ಪ್ರೀತಿ. ಹಾಲುಗಲ್ಲದ ಮಕ್ಕಳಿಗೂ ಕುಣಿಯಲು, ನಿದ್ದೆ ಮಾಡಲು ‘ಬೊಂಬೆ ಹೇಳುತೈತೆ, ಮತ್ತೆ ಹೇಳುತೈತೆ..’ ಹಾಡೇ ಬೇಕು. ಯುವಕರಿಗೆ ಅವನು ಸ್ಫೂರ್ತಿ, ಯುವತಿಯರಿಗೆ ಅವರು ಕಂಡರೆ ಪ್ರೀತಿ. ಹಿರಿಯ ಜೀವಗಳಿಗಂತೂ ಅವನೇ ರಾಜಕುಮಾರ!
ಹೀಗೆ ಬದುಕಿನ ಉದ್ದಕ್ಕೂ ಎಲ್ಲರನ್ನೂ, ಎಲ್ಲವನ್ನೂ ಪ್ರೀತಿಯಿಂದ ಅಪ್ಪಿಕೊಂಡೇ ಇದ್ದ ಪುನೀತ್ ರಾಜ್‌ಕುಮಾರ್ ಕಾಣದಂತೆ ಮಾಯವಾಗಿದ್ದಾರೆ. ದೊಡ್ಡ ಸ್ಟಾರ್ ಎಂಬ ಯಾವ ಅಹಂ ಕೂಡ ಇಲ್ಲದ, ಎಲ್ಲರನ್ನೂ ಗೌರವದಿಂದ ಕಾಣುವ, ಅತ್ಯಂತ ವಿನೀತವಾದ, ಪುನೀತವಾದ ಜೀವವೊಂದು ಅಸ್ತಂಗತವಾಗಿದೆ.
46 ವರ್ಷಗಳ ಬದುಕಿನಲ್ಲಿ ಪುನೀತ್ ಸುಮಾರು 32 ವರ್ಷಗಳನ್ನು ನಟಿಸುತ್ತಲೇ ಕಳೆದಿದ್ದಾರೆ. ಒಂದನೇ ವರ್ಷದಿಂದ 14 ವರ್ಷದವರೆಗೆ ಬಾಲನಟನಾಗಿ ರಾಷ್ಟ್ರ ಪ್ರಶಸ್ತಿ ಗಳಿಸುವಷ್ಟರ ಮಟ್ಟಿಗೆ ಬೆಳೆದ ಪುನೀತ್, 27ನೇ ವಯಸ್ಸಿನಲ್ಲಿ ನಾಯಕನಾಗಿ ಮರು ಪ್ರವೇಶವನ್ನು ಪಡೆದರು ಎಂದರು
ಈ ಸಂದರ್ಭದಲ್ಲಿ ಮುಖ್ಯಾ ಗುರು ಗಳಾದ ಸಂಗಯ್ಯ ಹಿರೇಮಠ ,ಶಶಿಕಲಾ ,ಅಂಜಲಿ , ಶಶಿಕುಮಾರ್, ಅಮ್ಜದ್, ಕೃಷ್ಣ , ಹಸೇನಪ್ಪ ಹವಳಿ , ಪ್ರದೀಪ್ ಹವಳಿ
ರಮೇಶ ಬಂಕದಮನೆ, ಇತರರು ಉಪಸ್ಥಿತರಿದ್ದರು