ಕುಕನೂರು: ಕುಕನೂರು ಎಪಿಎಂಸಿ ಆವರಣದಲ್ಲಿ ಸ್ಥಾಪಿಸಲಾಗಿರುವ ಇಂದಿರಾ ಕ್ಯಾಂಟಿನ್ ಮೇ 27 ರಂದು ಪ್ರಾರಂಭ ಮಾಡಲಾಗುವುದು ಎಂದು ಪಟ್ಟಣ ಪಂಚಾಯತ್ ಮುಖ್ಯಾಧಿಕಾರಿ ರವೀಂದ್ರ ಬಾಗಲಕೋಟೆ ತಿಳಿಸಿದರು.
ಶನಿವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಅಂದು ಮಧ್ಯಾಹ್ನ ನಡೆಯುವ ವೇದಿಕೆ ಸಮಾರಂಭ ಇದೆ.
ಕುಕನೂರು ಹಾಗೂ ಸುತ್ತಲಿನ ಜನರ ಬಹುದಿನಗಳ ಬೇಡಿಕೆ ಯಾದ ಇಂದಿರಾ ಕ್ಯಾಂಟಿನ್. ಹಸಿದವರ ಪಾಲಿನ ಕಾಮಧೇನು ಇದ್ದಂತೆ, ಕ್ಯಾಂಟೀನ್ ಅನ್ನು ಜಿಲ್ಲಾ ಉಸ್ತುವಾರಿ ಸಚಿವ ಶಿವರಾಜ್ ತಂಗಡಗಿ ಚಾಲನೆ ನೀಡುವರು.
ಶಾಸಕ ಬಸವರಾಜ್ ರಾಯರೆಡ್ಡಿ ಅಧ್ಯಕ್ಷತೆ ವಹಿಸಲಿದ್ದಾರೆ. ಬೆಳಿಗ್ಗೆ ಯಿಂದ ಮಧ್ಯಾಹ್ನದ ವರೆಗೆ ಕ್ಯಾಂಟಿನ್ ನಿವ೯ಹಣೆ ಇರುತ್ತದೆ ರಾಯಚೂರಿನ ವೀರಯ್ಯ ಹಿರೇಮಠ ಅವರು ಗುತ್ತಿಗೆದಾರರು ಆಗಿದ್ದು. ಸಾವ೯ಜನಿಕರು ಇದನ್ನು ಸದುಪಯೋಗ ಪಡೆದುಕೊಳ್ಳಬೇಕು ಎಂದು ತಿಳಿಸಿದರು. ಪಂಚಾಯತ್ ಅಧ್ಯಕ್ಷೆ ಲಲಿತಮ್ಮ ಯಡಿಯಾಪುರ, ಉಪಾಧ್ಯಕ್ಷ ಪರಶುರಾಮ್, ಸ್ಥಾಯಿ ಸಮಿತಿ ಅಧ್ಯಕ್ಷ ನೂರ ಅಹ್ಮದ್ ಗುಡಿ ಹಿಂದಲ್, ಸದಸ್ಯರಾದ ರಾಮಣ್ಣ ಬಂಕದಮನಿ, ಯಲ್ಲಪ್ಪ ಕಲ್ಮನಿ , ವೀರಣ್ಣ ಯಲಬುರ್ಗಾ ಇತರರೂ ಹಾಜರಿದ್ದರು.