ಕುಕನೂರು : ಪಟ್ಟಣದಲ್ಲಿ ಸರ್ಕಾರದಿಂದ ಬೆಂಬಲ ಬೆಲೆಯಲ್ಲಿ ಕಡೆಲೆಯನ್ನುಖರೀದಿ ಮಾಡುತ್ತಿದ್ದು, ಖರೀದಿ ಕೇಂದ್ರದಲ್ಲಿ ರೈತರಿಂದ ಗುಣಮಟ್ಟ ಪರೀಕ್ಷೆ ನೆಪದಲ್ಲಿ ರೈತರಿಂದ ಹಣ ವಸೂಲಿ ಮಾಡುತ್ತಿದ್ದಾರೆ. ಎಂಬ ರೈತರ ಆರೋಪದ ಮೇಲೆ ಮಂಗಳವಾರ ಜಂಟಿ ಕೃಷಿ ನಿರ್ದೇಶಕರಾದ ಟಿ.ಎಸ್. ರುದ್ರೇಶಪ್ಪ ಭೇಟಿ ನೀಡಿ ಪರಶೀಲನೆ ನೆಡೆಸಿದರು.
ಬೆಂಬಲ ಬೆಲೆಯಲ್ಲಿ ಕಡೆಲೆ ಮಾರಾಟ ಮಾಡಲು ಬರುವ ರೈತರಿಂದ ಬೆಳೆಯ (ಕಾಳುಗಳ) ಗುಣಮಟ್ಟ ಪರೀಕ್ಷೆ ನೆಪವಡ್ಡಿ ರೈತರಿಂದ ಕನಿಷ್ಠ ಒಂದು ಸಾವಿರ ರೂಪಾಯಿ ಪಡೆಯುತ್ತಿರುವ ಆರೋಪ ಕೇಳಿ ಬಂದ ಹಿನ್ನಲೆಯಲ್ಲಿ ಮಂಗಳವಾರ ಕೃಷಿ ಅಧಿಕಾರಿಗಳ ಖರೀದಿ ಕೇಂದ್ರಗಳಿಗೆ ಭೇಟಿ ನೀಡಿ ಪರೀಶಿಲನೆ ನೆಡೆಸಿದರು.
ಇದೇ ಸಂದAರ್ಭದಲ್ಲಿ ರೈತರು ನೇರವಾಗಿ ಅಧಿಕಾರಿಗಳ ಮುಂದೆಯೇ ಹಣ ಪಡೆಯುತ್ತಿರುವ ಬಗ್ಗೆ ದೂರಿದರು.
ಈ ಸಂದರ್ಭದಲ್ಲಿ ರೈತ ಸಂಘದ ಮುಖಂಡರಾದ ಅಂದಪ್ಪ ಹುರಳಿ ಮಾತನಾಡಿ ಅಧಿಕಾರಿಗಳು ರೈತರಿಂದ ಹಣ ಮಾತ್ರವಲ್ಲದೆ ಪ್ರತಿ ರೈತರಿಂದ ೫ ರಿಂದ ೧೦ ಕೆಜಿ ಕಡೆಲೆಯನ್ನು ಸಹ ಪಡೆಯುತ್ತಿದ್ದಾರೆ. ಇಂತಹ ಭ್ರಷ್ಟ ಅಧಿಕಾರಿಗಳ ವಿರುದ್ದ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದರು.
ಖರೀದಿ ಕೇಂದ್ರಕ್ಕೆ ಭೇಟಿ ನೀಡಿದ್ದ ಜಂಟಿ ಕೃಷಿ ನಿರ್ದೇಶಕ ಟಿ.ಎಸ್. ರುದ್ರೇಶಪ್ಪ ಮಾತನಾಡಿ ತಪ್ಪಿತಸ್ಥರ ವಿರುದ್ದ ಕ್ರಮ ಕೈಗೊಳ್ಳಲಾವುಗುದು. ರೈತರು ಖರೀದಿ ಕೇಂದ್ರದಲ್ಲಿ ಯಾರಿಗೂ ಹಣ ಕೊಡುವ ಅವಶ್ಯಕತೆ ಇಲ್ಲ. ರೈತರು ಕಡ್ಡಾಯವಾಗಿ ಆಧಾರ್ ಕಾರ್ಡ ಹಾಗೂ ಬ್ಯಾಂಕ್ ಲಿಂಕ್ ಮಾಡಿಸಿ ನೀಡಬೇಕು ಎಂದರು.
ಈ ಸಂದರ್ಭದಲ್ಲಿ ಉಪತಹಶೀಲ್ದಾರ್ ಮುರಳಿಧರ್ ರಾವ್ ಕುಲಕರ್ಣಿ, ಸಹಾಯಕ ಕೃಷಿ ನಿರ್ದೇಶಕ ಪ್ರಾಣೇಶ ಹಾದಿಮನಿ, ಸಹಾಯಕ ಕೃಷಿ ಅಧಿಕಾರಿ ಬಸವರಾಜ ತೇರಿನ, ಕಂದಾಯ ನೀರಕ್ಷಕ ರಂಗನಾಥ ಬಂಡಿ, ರೈತ ಸಂಘದ ಪ್ರಮುಖರಾದ ಬಸವರಾಜ ಕೊಡ್ಲಿ, ಅನಿಲ ಹುಜರತ್ತಿ ಹಾಗೂ ಇತರರಿದ್ದರು.
ಕಡಲೆ ಖರೀದಿ ಕೇಂದ್ರಲ್ಲಿ ರೈತರಿಂದ ಹಣ ವಸೂಲಿ, ಸ್ಥಳಕ್ಕೆ ಭೇಟಿ ನೀಡಿದ ಅಧಿಕಾರಿಗಳು.
