SPECIAL STORY : ಮಳೆ ಬಾರದೆ ರೈತರು ಕಂಗಾಲು : ರೈತರಿಗೆ ಆರ್ಥಿಕ ಸಂಕಷ್ಟದ ಆತಂಕ..!!
ಕೊಪ್ಪಳ : ಜಿಲ್ಲೆಯಲ್ಲಿ ಮಳೆ ಬಾರದೆ ರೈತರು ಕಂಗಾಲಾಗಿದ್ದು, ಮುಂಗಾರು ಹಂಗಾಮಿನಲ್ಲಿ ಮಳೆ ಬಾರದ ಕಾರಣ ಬಿತ್ತನೆ ಕಾರ್ಯ ವಿಳಂಬವಾಗಿ, ಬೆಳೆಗಳು ಒಣಗುವ ಆತಂಕ ಎದುರಾಗಿದೆ ಇದರಿಂದ ಜಿಲ್ಲೆಯ ರೈತರಲ್ಲಿ ಭಾರೀ ಆರ್ಥಿಕ ನಷ್ಟ ಅನುಭವಿಸುವ ಸಾಧ್ಯತೆ ಇದೆ ಎಂದು ಕೃಷಿ ತಜ್ಞನರು ಅಭಿಪ್ರಾಯ ಪಟ್ಟಿದ್ದಾರೆ.
ಜಿಲ್ಲೆಯ ಯಲಬುರ್ಗಾ,ಕುಕನೂರು, ಕುಷ್ಟಗಿ ಕನಕಗಿರಿ ಸೇರಿದಂತೆ ಬಹುತೇಕ ತಾಲೂಕಿನಲ್ಲಿ ಮಳೆ ಆಧಾರಿತ ಬೆಳೆಗಳನ್ನೇ ರೈತರು ಬಿತ್ತನೆ ಮಾಡಿದ್ದು, ಈ ಮುಂಚೆ ಬಿತ್ತನೆ ಮಾಡುವ ಪ್ರಕ್ರಿಯೇ ಎಲ್ಲೂ ಕೂಡ ಸರಿಯಾದ ಸಮಯದಲ್ಲಿ ಮಳೆ ಬಾದಿರುವುದು ಬೆಳೆಗಳ ಮೊಳಕೆಯಲ್ಲೂ ಕೂಡ ಕುಂಟಿತವಾಗಿದೆ. ಇದೀಗ ಮಳೆಗಾಗಿ ಕಾಯುತ್ತಿದ್ದ ರೈತನ ಪಾಡು ಬಹಳಷ್ಟು ಶೋಚನಿಯವಾಗಿದೆ.
ಕಳೆದ ಜೂನ್ ತಿಂಗಳಲ್ಲಿ ಮುಂಗಾರು ಆರಂಭವಾಗಬೇಕಿತ್ತು, ಆದರೆ ಮಳೆ ಬರದ ಕಾರಣ ರೈತರು ಕಂಗಾಲಾಗಿದ್ದಾರೆ ಎಂದು ಸ್ಥಳೀಯ ರೈತಾಪಿ ವರ್ಗದವರ ಅಭಿಪ್ರಾಯ ಸಂಗ್ರಹವಾಗಿದೆ. ಈ ಪರಿಸ್ಥಿತಿಯಿಂದಾಗಿ ರೈತರಿಗೆ ಆರ್ಥಿಕ ನಷ್ಟ ಉಂಟಾಗುವ ಸಾಧ್ಯತೆಯಿದೆ ಎನ್ನಲಾಗಿದೆ.
ಯಲಬುರ್ಗಾ,ಕುಕನೂರು, ಕುಷ್ಟಗಿ ಕನಕಗಿರಿ ಸೇರಿದಂತೆ ಬಹುತೇಕ ತಾಲೂಕಿನಲ್ಲಿ ಹೆಸರು, ಹಲಸಂದೆ, ಜೋಳ, ಹತ್ತಿ, ತೊಗರಿ, ಸಜ್ಜೆ ಮತ್ತು ಸೂರ್ಯಕಾಂತಿ ಮುಂತಾದ ಬೆಳೆಗಳನ್ನು ಬೆಳೆಯುತ್ತಾರೆ. ಇವಲ್ಲದೆ, ಕೆಲವು ಕಡೆಗಳಲ್ಲಿ ಮೆಣಸಿನಕಾಯಿ, ನೆಲಗಡಲೆ, ಮತ್ತು ಸೋಯಾಬಿನ್ ಕೂಡ ಬೆಳೆಯುತ್ತಾರೆ.
“ಈ ಬಾರಿ ಮುಂಗಾರು ಮಳೆಯು ಸರಿಯಾದ ರೀತಿಯಲ್ಲಿ ಆಗದಿರದಕ್ಕೆ ರೈತರು ಬಹಳಷ್ಟು ಆರ್ಥಿಕ ಸಂಕಷ್ಟ ಅನುಭವಿಸುವುದು, ಸರ್ಕಾರ ಹಾಗೂ ಜನಪ್ರತಿನಿಧಿಗಳು ರೈತರ ಕಡೆ ಸ್ವಲ್ಪ ಗಮನ ಕೊಡಿ, ಮೂಡ ಬಿತ್ತಿನೆ ಮಾಡುವ ಪ್ರಕ್ರಿಯೆಯಲ್ಲಿ ತೊಡಗಿಸಿಕೊಳ್ಳಿ ಅಥವಾ ಬರ ಪರಿಹಾರ ಕೊಡಬೇಕ ಮುಂಚಿತವಾಗಿ ಸರ್ಕಾರ ಜಾಗೃತಿ ವಹಿಸಿದರೆ ಮುಂದಿನ ಅಪಾಯವನ್ನು ತಪ್ಪಿಸಿ..!”
ಹಾಲಪ್ಪ ಆಚಾರ್,
ಮಾಜಿ ಸಚಿವ, ಮಾಜಿ ಶಾಸಕ-ಯಲಬುರ್ಗಾ ವಿಧಾನಸಭಾ ಕ್ಷೇತ್ರ
-: ರೈತರಿಗೆ ಆರ್ಥಿಕ ಸಂಕಷ್ಟದ ಆತಂಕ :-
ಮುಂದೆ ಬೆಲೆ ಕುಸಿತ:- ಬೆಳೆದ ಬೆಳೆಗಳಿಗೆ ಸರಿಯಾದ ಬೆಲೆ ಸಿಗದ ಕಾರಣ ರೈತರು ಆರ್ಥಿಕವಾಗಿ ಹಿಂದುಳಿಯುತ್ತಿದ್ದಾರೆ.
ಬೆಳೆ ವೈಫಲ್ಯ :- ನೈಸರ್ಗಿಕ ವಿಕೋಪಗಳು ಅಥವಾ ಹವಾಮಾನ ವೈಪರೀತ್ಯದಿಂದಾಗಿ ಬೆಳೆಗಳು ಹಾಳಾಗಿ, ರೈತರು ನಷ್ಟ ಅನುಭವಿಸುತ್ತಿದ್ದಾರೆ.
ಸಾಲದ ಹೊರೆ:- ರೈತರು ಕೃಷಿ ಚಟುವಟಿಕೆಗಳಿಗೆ ಸಾಲ ಪಡೆಯುತ್ತಾರೆ ಮತ್ತು ಅದನ್ನು ಮರುಪಾವತಿಸಲು ಸಾಧ್ಯವಾಗದೆ ಆರ್ಥಿಕ ಸಂಕಷ್ಟಕ್ಕೆ ಸಿಲುಕುತ್ತಾರೆ.
ಕಡಿಮೆ ಆದಾಯ :- ತಿಂಗಳ ಆದಾಯವು ತುಂಬಾ ಕಡಿಮೆ ಇರುವ ಕಾರಣ, ರೈತರು ತಮ್ಮ ಮೂಲಭೂತ ಅಗತ್ಯಗಳನ್ನು ಪೂರೈಸಲು ಕಷ್ಟಪಡುತ್ತಿದ್ದಾರೆ.
ಸರ್ಕಾರಿ ಯೋಜನೆಗಳ ಕೊರತೆ :- ಸರ್ಕಾರದಿಂದ ಸಿಗಬೇಕಾದ ಸಹಾಯಧನ(ಬೆಳೆ ವಿಮೆ) ಬರ ಪರಿಹಾರ ಮತ್ತು ಬೆಂಬಲಿತ ಬೆಲೆಗಳು ಸರಿಯಾಗಿ ದೊರೆಯುತ್ತಿಲ್ಲ.
ಈ ಮೇಲಿನ ಕಾರಣಗಳಿಂದಾಗಿ ರೈತರು ಆರ್ಥಿಕವಾಗಿ ಹಿಂದುಳಿದಿದ್ದು, ಅವರ ಕುಟುಂಬಗಳು ಭಾರೀ ಆರ್ಥಿಕ ಸಂಕಷ್ಟದಲ್ಲಿ ಮುಳಗಲಿವೆ ಎಂದು ಹೇಳಲಾಗುತ್ತದೆ. ಹಾಗಾಗಿ ಸರ್ಕಾರ ಎಚ್ಚತ್ತು ಈ ಭಾಗದ ರೈತರಲ್ಲಿ ಆತ್ಮವಿಶ್ವಾಸ ತುಂಬುವುದು ಹಾಗೂ ಅದಕ್ಕೆ ಪೂರಕವಾದ ವಾತವಾರಣ ನಿರ್ಮಾಣಮಾಡುವ ಕೆಲಸವಾಗಬೇಕಾಗಿದೆ.