BREAKING : ಭೀಕರ ರಸ್ತೆ ಅಪಘಾತ : ದೇವಿ ದರ್ಶನ ಮುಗಿಸಿ ವಾಪಾಸ್ ಆಗ್ತಿದ್ದ ಮೂವರ ಸಾವು…!!

You are currently viewing BREAKING : ಭೀಕರ ರಸ್ತೆ ಅಪಘಾತ : ದೇವಿ ದರ್ಶನ ಮುಗಿಸಿ ವಾಪಾಸ್ ಆಗ್ತಿದ್ದ ಮೂವರ ಸಾವು…!!

BREAKING : ಭೀಕರ ರಸ್ತೆ ಅಪಘಾತ : ದೇವಿ ದರ್ಶನ ಮುಗಿಸಿ ವಾಪಾಸ್ ಆಗ್ತಿದ್ದ ಮೂವರ ಸಾವು…!!

ಅಥಣಿ : ಕೆಎಸ್‌ಆರ್‌ಟಿಸಿ ಬಸ್ ಹಾಗೂ ಕಾರು ನಡುವೆ ಭೀಕರ ಅಪಘಾತ ಸಂಭವಿಸಿದ್ದು, ಕಾರಿನಲ್ಲಿದ್ದ ಮೂವರು ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ.

ಅಥಣಿ ತಾಲೂಕಿನ ಮುರಗುಂಡಿ ಗ್ರಾಮದ ಹೊರವಲಯದಲ್ಲಿ ಈ ಘಟನೆ ನಡೆದಿದ್ದು.ಕಾರ್ ಹಾಗೂ ಬಸ್ ಮುಖಾ-ಮುಖಿ ಡಿಕ್ಕಿಯಾದ ಪರಿಣಾಮ ಕಾರ್ ಸಂಪೂರ್ಣ ನುಜ್ಜು ಗುಜ್ಜಾಗಿದೆ.


ಕರ್ನಾಟಕ ಸಾರಿಗೆ ಸಂಸ್ಥೆಯ ವಿಜಯಪುರ
ಬಸ್ ಡಿಪೋ ಗೆ ಸಂಬಂಧಿಸಿದ ಬಸ್ ಹಾಗೂ ಕಲಬುರಗಿ ಮೂಲದ ವ್ಯಕ್ತಿಯ ಕಾರ್ ಮದ್ಯ ಅಪಘಾತ ಸಂಭವಿಸಿದೆ.ಮೃತರೆಲ್ಲರೂ ಕಲಬುರಗಿ ಜಿಲ್ಲೆಯ ಅಪ್ಜಲಪುರ ಮೂಲದವರು.ಎಂದು ತಿಳಿದುಬಂದಿದ್ದು.ಗೀರಿಶ ಬಳ್ಳೋರಗಿ, ರಾಹುಲ್ ಮ್ಯಾಲೇಶಿ, ಸಂಗು ಅಮರಗೊಂಡ ಮೃತ ದುರ್ದೈವಿಗಳಾಗಿದ್ದಾರೆ. ರಾಧಿಕಾ ಮ್ಯಾಲೇಶಿ ಎಂಬ ಮಹಿಳೆಗೆ ಗಂಭೀರ ಗಾಯಗಳಾಗಿದ್ದು ಸ್ಥಳೀಯ ಆಸ್ಪತ್ರೆಗೆ ರವಾನಿಸಿದ್ದಾರೆ.

ಕಾರ್ ನಲ್ಲಿದ್ದವರು ಕೊಲ್ಲಾಪುರದ ಮಹಾಲಕ್ಷ್ಮಿ ದೇವಿ ದರ್ಶನ ಪಡೆದು ವಾಪಾಸ್ ಹೊರಟ್ಟಿದ್ದರು ಎಂದು ತಿಳಿದು ಬಂದಿದೆ.ಸ್ಥಳಕ್ಕೆ ಅಥಣಿ ಪೊಲೀಸರು ಭೇಟಿ ಪರಿಶೀಲನೆ ನಡೆಸಿದ್ದಾರೆ.ಅಥಣಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ‌ ಈ ಘಟನೆ ನಡೆದಿದೆ.

ವರದಿ ಉಮರ ಮೊಮೀನ

Leave a Reply

error: Content is protected !!