BREAKING : ರಾಜ್ಯಾದ್ಯಾಂತ ಕೆಪಿಎಸ್ ಶಾಲೆಗಳ ಮಕ್ಕಳಿಗೆ ಉಚಿತ ಬಸ್ ವ್ಯವಸ್ಥೆ! : ಸಚಿವ ಮಧು ಬಂಗಾರಪ್ಪ
ಕುಕನೂರು : ‘ರಾಜ್ಯಾದ್ಯಾಂತ ಕರ್ನಾಟಕ ಪಬ್ಲೀಕ್ ಸ್ಕೂಲ್ (ಕೆಪಿಎಸ್ ಶಾಲೆಗಳ) ಮಕ್ಕಳಿಗೆ ಉಚಿತ ಬಸ್ ವ್ಯವಸ್ಥೆ ಆರಂಭಿಸಲು ಸರ್ಕಾರ ತೀರ್ಮಾನಿಸಿದೆ’ ಎಂದು ಶಾಲಾ ಶಿಕ್ಷಣ ಮತ್ತು ಸಾಕ್ಷರತೆ ಇಲಾಖೆ ಸಚಿವ ಮಧು ಬಂಗಾರಪ್ಪ ತಿಳಿಸಿದರು.
ಇಂದು ಪಟ್ಟಣದ ಪ್ರವಾಸಿ ಮಂದಿರದಲ್ಲಿ ಪತ್ರಕರ್ತರ ಪ್ರಶ್ನೆಗೆ ಉತ್ತರಿಸಿದ ಸಚಿವ ಮಧು ಬಂಗಾರಪ್ಪ,’ರಾಜ್ಯಾದ್ಯಾಂತ ಕರ್ನಾಟಕ ಪಬ್ಲೀಕ್ ಸ್ಕೂಲ್‌ಗಳು (ಕೆಪಿಎಸ್ ಶಾಲೆಗಳು) ಕಾರ್ಯಾರಂಭಿಸುತ್ತಿದ್ದು, ‘ಈ ಶಾಲೆಗಳಲ್ಲಿ ಎಲ್‌ಕೆಜಿ ಯಿಂದ ಪಿಯುಸಿವರೆಗಿನ ಬಡ ಮಕ್ಕಳು ವಿದ್ಯಾರ್ಜನೆ ಮಾಡುತ್ತಿದ್ದಾರೆ. ಹಿಗಾಗಿ ಬಡ ಕುಟುಂಬದಿಂದ ಬಂದತಂಹ ಮಕ್ಕಳ ಶಿಕ್ಷಣಕ್ಕೆ ಪೂರಕವಾಗಲೇಂದು ಇದೀಗ ಸರ್ಕಾರವೂ ಈ ಶಾಲಾ ಮಕ್ಕಳಿಗೆ ಯಾವ ಯಾವ ಭಾಗದಲ್ಲಿ ಅವಶ್ಯಕತೆ ಇದೆಯೋ ಅಲ್ಲಿ ಉಚಿತ ಬಸ್ ವ್ಯವಸ್ಥೆ ಆರಂಭಿಸಲು ನಿರ್ಧಾರ ಮಾಡಲಾಗಿದೆ’ ಎಂದು ತಿಳಿಸಿದರು.