You are currently viewing ನಿವ೯ಹಣೆ ಇಲ್ಲದೆ ಸೊರುಗುತ್ತಿದೆ ಮುದಗಲ್ಲ ಪಟ್ಟಣದ ಕೋಟೆ…

ನಿವ೯ಹಣೆ ಇಲ್ಲದೆ ಸೊರುಗುತ್ತಿದೆ ಮುದಗಲ್ಲ ಪಟ್ಟಣದ ಕೋಟೆ…

ನಿವ೯ಹಣೆ ಇಲ್ಲದೆ ಸೊರುಗುತ್ತಿದೆ ಮುದಗಲ್ಲ ಪಟ್ಟಣದ ಕೋಟೆ…

ಕೋಟೆ ಸೂಕ್ತ ನಿರ್ವಹಣೆ ಇಲ್ಲದಿರುವುದೆ ಸೊರಗುತ್ತಿರುವ ಐತಿಹಾಸಿಕ ಸ್ಮಾರಕ..

ಮುದಗಲ್ಲ: ಪಟ್ಟಣದಲ್ಲಿರುವ ಐತಿಹಾಸಿಕ ಕೋಟೆಗಳ ಸೂಕ್ತ ನಿರ್ವಹಣೆ ಇಲ್ಲದೆ ಹಾಳಾಗುತ್ತಿದೆ. ಪಟ್ಟಣದಲ್ಲಿರುವ ಐತಿಹಾಸಿಕ ಕೋಟೆಯು ಗತಕಾಲದ ವೈಭವವನ್ನು ನೆನಪಿಸುವ ಅದ್ಭುತ ತಾಣವಾಗಿದೆಯಾದರೂ ಸೂಕ್ತ ನಿರ್ವಹಣೆ ಇಲ್ಲದೆ ಸೊರಗುತ್ತಿರು ವುದು ಇತಿಹಾಸ ಪ್ರೇಮಿಗಳ ವಿಷಾದಕ್ಕೆ ಕಾರಣವಾಗಿದೆ

ಐತಿಹಾಸಿಕ ಮುದಗಲ್ಲ ಪಟ್ಟಣದ
ಕೋಟೆಯ ಸಂದುಗಳಲ್ಲಿ ಜಾಲಿಗಿಡ ಮತ್ತು ಮರಗಳು ಬೆಳೆದಿದ್ದು ಕೋಟೆಯನ್ನು ಶಿಥಿಲಾವಸ್ಥೆಗೆ ನೂಕುತ್ತಿವೆ. ಆದರೂ ಪ್ರಾಚ್ಯವಸ್ತು ಇಲಾಖೆ ಮತ್ತು ಜಿಲ್ಲಾಡಳಿತ ಕಂಡು ಕಾಣದಂತಿವೆ..

ದೇವಗಿರಿಯ ಯಾದವರ ನಂತರದಲ್ಲಿ 14ನೇ ಶತಮಾನದಲ್ಲಿ ಆಡಳಿತಕ್ಕೆ ಬಂದ ಕಾಕತೀಯರ ಕಾಲದಲ್ಲಿ ಮುದಗಲ್ಲ ಕೋಟೆ ನಿರ್ಮಾಣ ಕಾರ್ಯ ಆರಂಭಗೊಂಡಿತ್ತು ಎಂಬುದು ಇಲ್ಲಿ ದೊರೆತ ಶಿಲಾಶಾಸನಗಳಿಂದ ತಿಳಿದು ಬರುತ್ತದೆ.

ಬಹುಮನಿ ಸುಲ್ತಾನರು, ವಿಜಯನಗರದ ಅರಸರು, ಕೊನೆಯಲ್ಲಿ ವಿಜಯಪುರದ ಆದಿಲ್ ಶಾಹಿಗಳ ಅವಧಿಯಲ್ಲಿ ವಿಭಿನ್ನ ಶೈಲಿಯಲ್ಲಿ ನಿರ್ಮಾಣಗೊಂಡ ಕೋಟೆ ಇದಾಗಿದೆ. ಸ್ವಾತಂತ್ರ್ಯ ನಂತರದಲ್ಲಿ ನಿರ್ಹವಣೆ, ಮೇಲುಸ್ತುವಾರಿ ಕೊರತೆಯಿಂದ ಮುಳ್ಳುಕಂಟಿ ಬೆಳೆದು ಕುಸಿಯುತ್ತಾ ಸಾಗಿದೆ. ಎರಡು ಸುತ್ತಿನ ಕೋಟೆ ಶೇ. 90ರಷ್ಟು ಮುಳ್ಳುಕಂಟಿ ಬೆಳೆದು ಬಹುತೇಕ ಕಡೆಗಳಲ್ಲಿ ಕುಸಿತವಾಗಿದೆ.

ಕೋಟೆ ದ್ವಾರ ಬಾಗಿಲು ಭಾಗಶಃ ಮುರಿದು ಮುಚ್ಚಲು-ತೆರೆಯಲು ಬಾರದಂತಾಗಿವೆ. ಕೋಟೆ ಸುತ್ತಲಿನ ಕಂದಕ ಘನತ್ಯಾಜ್ಯ ಹಾಕುವ ಸ್ಥಳವಾಗಿದ್ದು, ಕೊಳಚೆ ನೀರು ಸಂಗ್ರಹಗೊಂಡು ರೋಗ ಹರಡುವ ತಾಣವಾಗಿದೆ. ಗತ ಇತಿಹಾಸವನ್ನು ಸಾರುವ ಕೋಟೆ ಬಗ್ಗೆ ಸರಿಯಾದ ಪ್ರಚಾರ ಕಾರ್ಯವನ್ನು ಪ್ರವಾಸೋದ್ಯಮ ಇಲಾಖೆ, ಪ್ರಾಚ್ಯವಸ್ತುಗಳ ಇಲಾಖೆ ಹಾಗೂ ಜಿಲ್ಲಾಡಳಿತದಿಂದ ಮಾಡಲು ಸಾಧ್ಯವಾಗಿಲ್ಲ. ರಾಜರ ಕಾಲದ ಕುರುಹುಗಳಾದ ಕೋಟೆ, ಸ್ಮಾರಕಗಳನ್ನು ಸಂರಕ್ಷಣೆ ಮಾಡಿದರೆ ಮುಂದಿನ ಪೀಳಿಗೆಗೆ ಮಾಹಿತಿ ಒದಗಿಸಲು ಅನುಕೂಲವಾಗಲಿದೆ. ಇಲ್ಲದಿದ್ದರೆ ಈ ನಾಡಿನ ಹೆಗ್ಗುರುತುಗಳ ಬಗ್ಗೆ ಮುಂದಿನ ಪೀಳಿಗೆಗೆ ತಿಳಿಸಲು ಆಗುವುದಿಲ್ಲ.

ಪ್ರಾಚ್ಯವಸ್ತು ಇಲಾಖೆ ಕೋಟೆ ಮೇಲೆ ಬೆಳೆದಿರುವ ಜಾಲಿಗಿಡಗಳ ತೆಗೆಯುವ ಕೆಲಸ ಮಾಡುತ್ತಿಲ್ಲ. ಹೀಗೆ ಮುಂದುವರೆದರೆ ಸ್ಮಾರಕಗಳು ನಶಿಸಿ ಹೋಗುತ್ತವೆ
– ಶರಣಪ್ಪ ಕಟ್ಟಿಮನಿ ಲಿಂಗಸೂರ ದಲಿತ ಸಂಘರ್ಷ ಸಮಿತಿ ಅಧ್ಯಕ್ಷರು ಬೇಸರ ವ್ಯಕ್ತಪಡಿಸಿದರು

ಕೋಟೆಯ ಇತಿಹಾಸ:-ಮುದಗಲ್ ಕೋಟೆಯು ಹಲವಾರು ಶತಮಾನಗಳ ವೈಭವಯುತ ಇತಿಹಾಸವನ್ನು ಹೊಂದಿದೆ. ಇದರ ಪ್ರಾರಂಭಿಕ ನಿರ್ಮಾಣವು ಕ್ರಿ.ಶ. 14ನೇ ಶತಮಾನದಲ್ಲಿ ಬಹಮನಿ ಸುಲ್ತಾನರ ಕಾಲದಲ್ಲಿ ನಡೆದಿತೆಂದು ತಿಳಿದುಬರುತ್ತದೆ.
ಕಾಲಕ್ರಮೇಣ, ಈ ಕೋಟೆ ವಿಜಯನಗರ ಸಾಮ್ರಾಜ್ಯ ಮತ್ತು ನಂತರ ಬಿಜಾಪುರದ ಆದಿಲ್ ಶಾಹಿ ರಾಜವಂಶದ ಆಳ್ವಿಕೆಗೆ ಒಳಪಟ್ಟಿತು. ಹಲವು ಯುದ್ಧಗಳು ಮತ್ತು ರಾಜಕೀಯ ಬದಲಾವಣೆಗಳಿಗೆ ಸಾಕ್ಷಿಯಾದ ಈ ಕೋಟೆ, ಆಡಳಿತಗಾರರ ಪರಿವರ್ತನೆಗಳನ್ನು ಅನುಭವಿಸಿದೆ. ಪ್ರತಿ ಆಡಳಿತಗಾರನು ತನ್ನ ಕಾಲದ ಗುರುತನ್ನು ಕೋಟೆಯ ರಚನೆ ಮತ್ತು ಪರಿಸರದ ಮೇಲೆ ಮೂಡಿಸಿದ್ದು, ಇದು ಕೋಟೆಯ ಐತಿಹಾಸಿಕ ಮಹತ್ವವನ್ನು ಮತ್ತಷ್ಟು ಹೆಚ್ಚಿಸಿದೆ.

ವಾಸ್ತುಶಿಲ್ಪ
ಮುದಗಲ್ ಕೋಟೆಯ ಹೊರ ಕೋಟೆ ಸುಮಾರು ಅರ್ಧ ಚದರ ಮೈಲು ವಿಸ್ತಾರ ಹೊಂದಿದೆ. ಕೋಟೆಯ ರಕ್ಷಣೆಗೆ ಸುತ್ತಮುತ್ತ ನೀರು ತುಂಬಿದ ವಿಶಾಲ ಕಂದಕವಿದ್ದು, ಕೆಲವು ಸ್ಥಳಗಳಲ್ಲಿ ಅದರ ಅಗಲವು ಸುಮಾರು 50 ಗಜಗಳಷ್ಟು ಇದೆ. ಕಂದಕದ ಒಳಭಾಗದಲ್ಲಿ ಕೊತ್ತಲಗಳ ಸರಪಳಿಯಿದ್ದು, ಅವು ಕ್ರಮವಾಗಿ ಒಳಭಾಗಕ್ಕೆ ಕಿರಿದಾಗುತ್ತ ಸಾಗುತ್ತವೆ.

ಈ ಕೋಟೆಯಲ್ಲಿ ಕೆಲವೆಡೆ ಹಿಂದೂ ಶೈಲಿಯ ವಾಸ್ತುಶಿಲ್ಪದ ಲಕ್ಷಣಗಳು ಕಂಡುಬಂದರೆ, ಇನ್ನೂ ಕೆಲವೆಡೆ ಮುಸ್ಲಿಂ ಶೈಲಿಯ ಕಮಾನು ವಿನ್ಯಾಸಗಳು ಕಾಣಿಸುತ್ತವೆ. ಕಂದಕ ಮತ್ತು ಕೊತ್ತಲಗಳ ಈ ವಿನ್ಯಾಸವು ಮನೋಹರ ದೃಶ್ಯವನ್ನು ಸೃಷ್ಟಿಸುತ್ತದೆ.

ಕೋಟೆಯ ವಾಸ್ತುಶಿಲ್ಪವು ಪ್ರಾಚೀನ ಕಾಲದ ಶಿಲ್ಪಿಗಳ ಕೌಶಲ್ಯ ಮತ್ತು ನೈಪುಣ್ಯವನ್ನು ಪ್ರತಿಬಿಂಬಿಸುತ್ತದೆ. ಉತ್ತರಾಭಿಮುಖವಾಗಿರುವ ಕೋಟೆಯ ಭವ್ಯ ಪ್ರವೇಶದ್ವಾರವು ಪ್ರವಾಸಿಗರನ್ನು ವಿಶಾಲ ಅಂಗಳಕ್ಕೆ ಕರೆದೊಯ್ಯುತ್ತದೆ. ಈ ಅಂಗಳವು ಬುರುಜುಗಳು ಮತ್ತು ಕಾವಲು ಗೋಪುರಗಳಿಂದ ಸುತ್ತುವರೆದಿದೆ.

ಉತ್ತರದ ಕಡೆ ಇರುವ ಫತೇ ದರ್ವಾಜಾದ ಮುಂದೆ ಒಂದು ಬೃಹತ್ ಕೊತ್ತಲವಿದೆ. ಇದರ ಎರಡೂ ಬದಿಗಳಲ್ಲಿ ಪರದೆಗೋಡೆಗಳಿದ್ದು, ಕೋಟೆಯ ರಕ್ಷಣೆಗೆ ವಿನ್ಯಾಸಗೊಳಿಸಲಾಗಿದೆ. ಈ ಕೊತ್ತಲದ ಸಮೀಪದಲ್ಲಿ ಉತ್ತರಾಭಿಮುಖವಾಗಿ ಮೂರು ಕಮಾನು ತೆರೆಯುವಿಕೆಗಳನ್ನು ಹೊಂದಿರುವ ಕಾವಲುಗಾರರ ಕೋಣೆ ಇದೆ.

ಕೊತ್ತಲದ ಒಳಭಾಗದಲ್ಲಿ ಪಶ್ಚಿಮ ಮತ್ತು ಈಶಾನ್ಯ ದಿಕ್ಕುಗಳಿಗೆ ಪ್ರವೇಶದ್ವಾರಗಳಿರುವ ಕಿರಿದಾದ ಅಂಗಳವಿದೆ. ಈ ದ್ವಾರಗಳು ಕಂಬ ಮತ್ತು ಲಿಂಟೆಲ್ ಶೈಲಿಯಲ್ಲಿ ನಿರ್ಮಿಸಲ್ಪಟ್ಟಿವೆ. ಈ ದ್ವಾರಗಳ ಮೂಲಕ ಸಾಗುವ ಮುಚ್ಚಿದ ಹಾದಿಯ ಎರಡೂ ಬದಿಗಳಲ್ಲೂ ಕಾವಲುಗಾರರ ಕೊಠಡಿಗಳು ಇದ್ದವೆ.

ಇದಲ್ಲದೆ, ಈ ಬೃಹತ್ ಕೊತ್ತಲದ ಬಳಿ ಕನ್ನಡ ಶಾಸನವನ್ನು ಹೊಂದಿರುವ ಒಂದು ಪ್ರಾಚೀನ ಬಂದೂಕು (ತೋಪು) ಕಾಣಿಸುತ್ತದೆ. ಈ ತೋಪಿನ ಒಳಭಾಗದಲ್ಲಿ ಉದ್ದವಾದ ಕಬ್ಬಿಣದ ಪಟ್ಟಿಗಳನ್ನು ಬಳಸಿ, ಹೊರಭಾಗದಲ್ಲಿ ಹೂಪ್‌ಗಳ ಮೂಲಕ ಬಿಗಿಯಾಗಿ ಬಂಧಿಸಲಾಗಿದೆ.

ಕೊಟೆಯ ರಕ್ಷಣೆ ಹಿನ್ನೆಲೆಯಲ್ಲಿ ಪ್ರಾಚ್ಯವಸ್ತು ಇಲಾಖೆ ಕೂಡಲೇ ಸೂಕ್ತ ರಕ್ಷಣಾ ವ್ಯವಸ್ಥೆಗಳನ್ನು ಮಾಡಿಕೊಳ್ಳುವಂತೆ ಸಾರ್ವಜನಿಕ ವಲಯದಿಂದ ಒತ್ತಾಯ ಕೇಳಿಬಂದಿದೆ.

ಖಾಲಿ ಹೊಡೆಯುತ್ತಿರುವ ಕೋಟೆ ಆವರಣ ಈಗ ಮಾದಕ ವ್ಯಸನಿಗಳ ಅಡ್ಡೆಯಾಗುವ ಆತಂಕ ಕಾಣಿಸಿಕೊಂಡಿದೆ ಸಂಜೆಯಾಗುತ್ತಲೇ ಒಳನುಸುಳುವ ಕುಡುಕರು ತಮಗೆ ಎಲ್ಲಿ ಬೇಕೆಂದರಲ್ಲಿ ಕುಳಿತು ಕುಡಿಯುವ ತಾಣವಾಗಿ ಮಾರ್ಪಾಡಾಗುತ್ತಿದೆ.

ಕೊಟೆಯ ರಕ್ಷಣೆ ಸ್ವಚ್ಛತೆ ಕಾರ್ಯದ
ಹಿನ್ನೆಲೆಯಲ್ಲಿ ಬಗ್ಗೆ ಕೂಡಲೇ ಸೂಕ್ತ ಕ್ರಮ ಕೈಗೊಳ್ಳುವಂತೆ
ಪ್ರಾಚ್ಯವಸ್ತು ಇಲಾಖೆ ಸ್ಥಳೀಯ ಜನಪ್ರತಿನಿಧಿ ಹಾಗೂ ಜಿಲ್ಲಾಡಳಿತ ಹಾಗೂ ಸರಕಾರ ಎಚ್ಚೆತ್ತು ಕತ್ತಲಲ್ಲಿ ಮುಳುಗುವ ಐತಿಹಾಸಿಕ ಕೋಟೆಗೆ ಅಭಿವೃದ್ಧಿ ಎಂಬ ಬೆಳಕು ನೀಡಬೇಕಿದೆ. ಸಾರ್ವಜನಿಕ ವಲಯದಿಂದ ಒತ್ತಾಯ ಕೇಳಿಬಂದಿದೆ.

ವರದಿ:-ಮಂಜುನಾಥ ಕುಂಬಾರ

Leave a Reply

error: Content is protected !!