LOCAL NEWS :ಕೊಪ್ಪಳದಲ್ಲಿ “ಕವಡೆ ಪೀರಹಬ್ಬ”ದ ನಿಮಿತ್ಯ ಶಾಂತಿ ಸಭೆ
ಕೊಪ್ಪಳ : ಇಂದು ಕೊಪ್ಪಳ ನಗರ ಪೊಲೀಸ್ ಠಾಣೆಯ ಆವರಣದಲ್ಲಿ ಮುಂಬರುವ ಕವಡೆ ಪೀರಹಬ್ಬದ ನಿಮಿತ್ಯ ಶಾಂತಿ ಸಭೆಯನ್ನು ಹಮ್ಮಿಕೊಳ್ಳಲಾಗಿತ್ತು.
ಈ ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿಕೊಂಡು ಕೊಪ್ಪಳ ನಗರ ಪೊಲೀಸ್ ಠಾಣೆಯ ಪೊಲೀಸ್ ಇನ್ಸ್ಪೆಕ್ಟರ್ ಜಯಪ್ರಕಾಶ್ ಅವರು ಮಾತನಾಡಿ, ‘ಕೊಪ್ಪಳ ನಗರವು ಶಾಂತಿಯಿಂದ ಇದ್ದು, ಕಾನೂನು ಸುವ್ಯವಸ್ಥೆ ಅಚ್ಚುಕಟ್ಟಾಗಿದೆ. ನಾವೆಲ್ಲ ಶಾಂತಿಯಿಂದ ಹಬ್ಬವನ್ನು ಆಚರಿಸೋಣ ಈ ಬಗ್ಗೆ ಸೂಕ್ತ ಬಂದೋಬಸ್ತ್ ನ್ನು ನೀಡಲಾಗುವುದು. ಇದಕ್ಕೆ ತಮ್ಮ ಸಹಕಾರ ಕೂಡ ಮುಖ್ಯವಾಗಿರುತ್ತದೆ ಎಂದರು.
ಈ ಕಾರ್ಯಕ್ರಮದಲ್ಲಿ ನಗರಸಭೆ ಕೊಪ್ಪಳ ಮ್ಯಾನೇಜರ್ ಮುನಿಸ್ವಾಮಿ, ಕೆಇಬಿಯ ನಾಗೇಂದ್ರ ಮತ್ತು ಪ್ರಮುಖರಾದ ಹುಸೇನ್ ಪೀರಾ ವಕೀಲರು, ಮಾನ್ವಿ ಪಾಷಾ, ನಾಸೀರ್ ಹುಸೇನ್, ಇತರರು ಭಾಗವಹಿಸಿದ್ದರು. ಠಾಣೆಯ ಪಿಎಸ್ಐಗಳಾದ ಶಾರದಮ್ಮ ಮತ್ತು ಶರಣಪ್ಪ ಹಾಗೂ ಸಿಬ್ಬಂದಿ ಕೆ ಹೆಚ್ ಕಲಕಬಂಡಿ, ಹನುಮೇಶ್, ಇತರರು ಇದ್ದರು.