LOCAL BREAKING : ಕುಕನೂರು ತಾಲ್ಲೂಕಿನ ನೆಲಜೇರಿ ಗ್ರಾಮದಲ್ಲಿ ಚಿರತೆ ದಾಳಿಯಿಂದ ಮೃತಪಟ್ಟ ಕುರಿಗಳು..!!

You are currently viewing LOCAL BREAKING : ಕುಕನೂರು ತಾಲ್ಲೂಕಿನ ನೆಲಜೇರಿ ಗ್ರಾಮದಲ್ಲಿ ಚಿರತೆ ದಾಳಿಯಿಂದ ಮೃತಪಟ್ಟ ಕುರಿಗಳು..!!

ಪ್ರಜಾ ವೀಕ್ಷಣೆ ಸುದ್ದಿ : 

LOCAL BREAKING : ಕುಕನೂರು ತಾಲ್ಲೂಕಿನ ನೆಲಜೇರಿ ಗ್ರಾಮದಲ್ಲಿ ಚಿರತೆ ದಾಳಿಯಿಂದ ಮೃತಪಟ್ಟ ಕುರಿಗಳು..!!

ಕುಕನೂರು : ತಾಲ್ಲೂಕಿನ ನೆಲಜೇರಿ ಗ್ರಾಮದ ನಿಂಗಮ್ಮ ಕರಡಿ ಎಂಬುವರ ಹೊಲದಲ್ಲಿನ ಕುರಿಗಳ ಹಟ್ಟಿಯ ಮೇಲೆ ಚಿರತೆ ದಾಳಿ ಮಾಡಿ 13 ಕುರಿಗಳನ್ನು ಕೊಂದುಹಾಕಿದೆ.

 

ಗ್ರಾಮದ ನಿವಾಸಿ ರಾಜಪ್ಪ ಅವರು ಕುರಿ ಸಾಕಾಣಿಕೆ ಮಾಡಿಕೊಂಡು ಜೀವನ ನಡೆಸುತ್ತಿದ್ದರು. ಎಂದಿನಂತೆ ಕುರಿಗಳನ್ನು ಹಟ್ಟಿಯಲ್ಲಿ ಹಾಕಿದಾಗ ಬುಧವಾರ ರಾತ್ರಿ ಚಿರತೆ ದಾಳಿ ಮಾಡಿ 13 ಕುರಿಗಳನ್ನು ಸಾಯಿಸಿದೆ. ₹1.50 ಸಾವಿರಕ್ಕೂ ಹೆಚ್ಚು ನಷ್ಟ ಉಂಟಾಗಿದೆ. ಸರ್ಕಾರ ಸೂಕ್ತ ಪರಿಹಾರ ನೀಡಬೇಕು’ ಎಂದು ರಾಜಪ್ಪ ಮನವಿ ಮಾಡಿದರು.

ಚಿರತೆ ದಾಳಿ ಕಂಡು ರೈತರು ರಾತ್ರಿ ಸಮಯದಲ್ಲಿ ಜಮೀನಿಗೆ ತೆರಳಲು ಭಯಭೀತರಾಗಿದ್ದಾರೆ. ಸಂಬಂಧಿಸಿದ ಅರಣ್ಯ ಇಲಾಖೆಯವರು ಬೋನನ್ನು ಇಟ್ಟು ಚಿರತೆ ಸೆರೆಗೆ ಕ್ರಮವಹಿಸಬೇಕೆಂದು ಗ್ರಾಮದ ಮುಖಂಡ ಮಂಜುನಾಥ್ ಒತ್ತಾಯಿಸಿದರು.

Leave a Reply

error: Content is protected !!