ಮುದಗಲ್ಲ ವರದಿ..
ಅಧಿಕಾರಿಗಳ ನಿರ್ಲಕ್ಷ್ಯ : ಸ್ವಂತ ಹಣದಲ್ಲಿ ರಸ್ತೆ ಗುಂಡಿ ಮುಚ್ಚಿದ :-ಶಾಲಂ ಟೈಲರ್ (ಕಾಂಗ್ರೆಸ್ ಸಾಮಾಜಿಕ ಕಾಳಜಿ ಇರುವ ಕಾಯ೯ಕತ೯)..
ಮುದಗಲ್ಲ :- ರಾಯಚೂರು – ಬೆಳಗಾವಿ ರಾಜ್ಯ ಹೆದ್ದಾರಿರಸ್ತೆ ಯಲ್ಲಿ
ಗುಂಡಿ ಬಿದ್ದ ರಸ್ತೆಗಳ ದುರಸ್ತಿ ಮಾಡುವಂತೆ ಅಧಿಕಾರಿಗಳಿಗೆ ಹಲವು ಸಲ ಮನವಿ ಮಾಡಿದರೂ ಕ್ಯಾರೆ ಎನ್ನಲಿಲ್ಲ. ಇದರಿಂದ ಬೇಸತ್ತ ಸ್ಥಳೀಯ ಕಾಂಗ್ರೆಸ್ ಕಾಯ೯ಕತ೯ ರಾದ ಶಾಲಂ ಟೈಲರ್ ಅವರು ಕೊನೆಗೆ ಸ್ವಂತ ಹಣದಲ್ಲಿ ಮುಖ್ಯರಸ್ತೆ ಗುಂಡಿಗೆ ಜಲ್ಲಿಕಲ್ಲು ಸಿಮೆಂಟ್ ಮಣ್ಣು ಹಾಕಿ ದುರಸ್ತಿ ಮಾಡಿ ಸಾಮಾಜಿಕ ಕಳಕಳಿ ಮೆರೆದಿದ್ದಾರೆ.
ರಾಯಚೂರು – ಬೆಳಗಾವಿ
ರಾಜ್ಯ ಹೆದ್ದಾರಿಸಂಪರ್ಕ ಕಲ್ಪಿಸುವ ರಾಜ್ಯ ಹೆದ್ದಾರಿಯಲ್ಲಿ ಬಿದ್ದಿರುವ ಆಳವಾದ ಗುಂಡಿಗಳನ್ನು
ಗುಂಡಿಗಳಿಗೆ ಸಿಮೆಂಟ್ ಹಾಗೂ ಜಲ್ಲಿಕಲ್ಲು ಹಾಗೂ ಮಣ್ಣು ಹಾಕಿ, ತಾತ್ಕಾಲಿಕವಾಗಿ ಸುಗಮ ಸಂಚಾರಕ್ಕೆ ಅನುವು ಮಾಡಿಕೊಟ್ಟರು.ಈ ರಸ್ತೆ ಡಾಂಬಾರು ಕಂಡು ಹಲವು ವರ್ಷಗಳಾಗಿವೆ. ಹೆಚ್ಚಿನ ಸಂಚಾರ ದಿಂದ ರಸ್ತೆಯುದ್ದಕ್ಕೂ ಗುಂಡಿಗಳು ಬಿದ್ದು ವಾಹನ ಸವಾರರು ಪರದಾಡಬೇಕಾದ ಸ್ಥಿತಿ ನಿರ್ಮಾಣವಾಗಿತ್ತು.
ರಸ್ತೆ ದುರಸ್ತಿಗೆ ಸಂಬಂಧಪಟ್ಟ ಇಲಾಖೆ ಅಧಿಕಾರಿಗಳ ಗಮನಕ್ಕೆ ತಂದರೂ ಗುಂಡಿ ಮುಚ್ಚದೆ ನಿರ್ಲಕ್ಷ ವಹಿಸಿದ್ದಾರೆ. ನಿತ್ಯ ಸಂಚಾರ ಮಾಡುವ ಬಸ್‌ಗಳು, ವಾಹನಗಳಿಗೆ , ವಿಧ್ಯಾರ್ಥಿ ಗಳಿಗೆ ಹಿರಿಯ ನಾಗರಿಕರಿಗೆ ಸಮಸ್ಯೆ ಉಂಟಾಗಿತ್ತು ಎಂದು ಸ್ಥಳೀಯರು ಹೇಳುತ್ತಾರೆ.
ಮಳೆಯಿಂದ ಈ ರಸ್ತೆಯಲ್ಲಿ ಮತ್ತೆ ಗುಂಡಿಗಳು ರಾರಾಜಿಸುತ್ತಿದ್ದವು. ಹೀಗಾಗಿ ರಾಯಚೂರು – ಬೆಳಗಾವಿ
ರಾಜ್ಯ ಹೆದ್ದಾರಿ ರಸ್ತೆಯಲ್ಲಿ ಶಾಲಂ ಟೈಲರ್ (ಕಾಂಗ್ರೆಸ್ ಕಾಯ೯ಕತ೯)
ಅನೇಕ ಕಾಂಗ್ರೆಸ್ ಕಾರ್ಯಕರ್ತರು
ಶಾಲಂ ಟೈಲರ್ ಅವರು ತಮ್ಮ ಸ್ವಂತ ಖರ್ಚಿನಲ್ಲಿ ಸಿಮೆಂಟ್ ಕಾಂಕ್ರಿಟ್‌ನಿಂದ ಗುಂಡಿ ಮುಚ್ಚಿದ್ದಾರೆ
ಇನ್ನಾದರೂ ಸಂಬಂಧಪಟ್ಟ ಲೋಕೋಪಯೋಗಿ ಇಲಾಖೆಯವರು, ಜನಪ್ರತಿನಿಧಿಗಳು ಇತ್ತ ಗಮನ ಹರಿಸಬೇಕು. ಬಾಕಿ ಉಳಿದಿರುವ ರಸ್ತೆಗೆ ಡಂಬಾರು ಹಾಕಿಸುವ ಮೂಲಕ ಅನುಕೂಲ ಮಾಡಿಕೊಡಬೇಕು ಎಂದು ಶಾಲಂ ಟೈಲರ್ ಆಗ್ರಹಿಸಿದರು
ʼಪ್ರತಿನಿತ್ಯ ಈ ರಸ್ತೆಯಲ್ಲಿ ಸಾವಿರಾರು ವಾಹನಗಳು ಓಡಾಡುತ್ತಿವೆ. ರಸ್ತೆ ಗುಂಡಿ ಸಮಸ್ಯೆಯಿಂದ ಕೆಲ ಸವಾರರು ಬಿದ್ದು ಅಪಾಯದಿಂದ ಪಾರಾಗಿದ್ದಾರೆ.
ಈ ಬಗ್ಗೆ ಜನಪ್ರತಿನಿಧಿಗಳು, ಅಧಿಕಾರಿಗಳ ಗಮನಕ್ಕೆ ತಂದರೂ ಸ್ಪಂದಿಸುತ್ತಿಲ್ಲ.
ಸಾಮಾಜಿಕ ಕಳಕಳಿಯ ಕಾಂಗ್ರೆಸ್ ಕಾಯ೯ಕತ೯ರಾದ ರುದ್ರಗೌಡ ಆಮದಿಹಾಳ . ಮೌನೇಶ್ ಚಲವಾದಿ. ಹುಲುಗಪ್ಪ ಚಲವಾದಿ. ಹುಸೇನ್ ಬಾಷಾ ಡೊಂಗ್ರಿ ಮಾಂತೇಶ್ ಬೋವಿ. ಖಾಜಾ ಮೇಸ್ತ್ರಿ ಇದ್ದರು..
ವರದಿ:- ಮಂಜುನಾಥ ಕುಂಬಾರ