ಕುಕನೂರು : ತಾಲೂಕಿನ ಯರೇಹಂಚಿನಾಳ ಗ್ರಾಮದ ಕರ್ನಾಟಕ ಸಂಸ್ಕೃತಿ ವಿದ್ಯಾಪೀಠ ಪ್ರೌಢ ಶಾಲೆಯಲಿ ತಾಲೂಕು ಕಾನೂನು ಸೇವಾ ಸಮಿತಿ ಯಲಬುರ್ಗಾ ಇವರ ಸಯೋಗದಲ್ಲಿ ಮಕ್ಕಳ ಹಕ್ಕುಗಳ ಕಾನೂನು ಅರಿವು ನೆರವು ಕಾರ್ಯಕ್ರಮವನ್ನು ಆಯೋಜಿಸಿದ್ದು ಕಾರ್ಯಕ್ರಮವನ್ನು ಹಿರಿಯ ಸಿವಿಲ್ ನ್ಯಾಯಾಧೀಶ ವಿಜಯಕುಮಾರ ಕನ್ನೂರ ಯಲಬುರ್ಗಾ ಇವರು ಉದ್ಘಾಟಿಸಿದರು.
ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಹಿರಿಯ ಸಿವಿಲ್ ನ್ಯಾ. ವಿಜಯಕುಮಾರ ಕನ್ನೂರ ಅವರು, ‘ಮಕ್ಕಳು ತಮ್ಮ ಹಕ್ಕುಗಳನ್ನು ತಿಳಿದುಕೊಂಡು ಉತ್ತಮ ನಾಗರಿಕರಾಗಿ ಬದುಕಬೇಕು. ಕಾನೂನು ಬಗ್ಗೆ ತಿಳಿದುಕೊಳ್ಳಲು ನಿರಂತರ ಅಭ್ಯಾಸ ಅವಶ್ಯಕವಗಿದೆ. ಆದ್ದರಿಂದ ಮಕ್ಕಳು ಪ್ರಚಲಿತ ವಿಷಯ ಹಾಗೂ ಘಟನೆಗಳ ಬಗ್ಗೆ ಸದಾ ತಿಳಿದುಕೊಳ್ಳಲು ಮುಂದಾಗಬೇಕು ಎಂದರು.
ಮುಖ್ಯ ಅತಿಥಿ ಸ್ಥಾನ ವಹಿಸಿಕೊಂಡ ಇನ್ನೊಓರ್ವ ನ್ಯಾಯಾಧೀಶರಾದ ಆಯಿಷಾಬಿ.ಪಿ.ಮಜೀದ್ ಕಾರ್ಯಕ್ರಮವನ್ನು ಉದ್ದೇಶಿಸಿ ಮಾತನಾಡಿದರು. ಈ ಸಂದರ್ಭದಲ್ಲಿ ವಕೀಲರ ಸಂಘದ ಉಪಾಧ್ಯಕ್ಷರಾದ ಎಚ್.ಎಚ್.ಹಿರೇಮನಿ, ಪ್ರಧಾನ ಕಾರ್ಯದರ್ಶಿ ಈರಣ್ಣ ಬ ಕೋಳೂರ. ಸರಕಾರಿ ವಕೀಲರಾದ ಎ.ಐ.ಹಾದಿಮನಿ. ಎಸ್. ಎಸ್. ಹೊಂಬಳ. ಎ. ಎಮ್. ಪಾಟೀಲ. ಪಿ ಆರ್ ಹಿರೇಮಠ್. ಎಸ್. ಸಿ ಗದಗಿನ. ಎಮ್.ಎಸ್.ಪಾಟಿಲ್. ಕೆ ಆರ್ ಬೆಟಗೇರಿ. ನಾಗರಾಜ ಹವಾಲ್ದಾರ್ ವಕೀಲರು. ಸುಭಾಸ್ ಮಾದಿನೂರ. ಮುಖ್ಯೋಪಾಧ್ಯರಾದ. ಎಸ್. ಅಂಜನಪ್ಪ ಶಾಲೆಯ ಎಲ್ಲಾ ಶಿಕ್ಷಕರು ವಿವಿಧ ಇಲಾಖೆ ಅಧಿಕಾರಿಗಳು ಹಾಗೂ ಸಿಬ್ಬಂದಿ ವರ್ಗದವರು ಹಾಗೂ ವಕೀಲರ ಸಂಘದ ಎಲ್ಲಾ ಪದಾಧಿಕಾರಿಗಳು ಹಾಗೂ ಇತರರಿದ್ದರು.