ಸಿಂಧನೂರಿನಲ್ಲಿ ವನಸಿರಿ ಫೌಂಡೇಶನ್ ಮೂಲಕ ನಿತ್ಯ ಚಟುವಟಿಕೆ
ಪರಿಸರದ ಸೇವೆಯಲ್ಲಿ 24/7 ಹೊರಡುವ ಪರಿಸರ ರಥಯಾತ್ರೆ…
ಪರಿಸರ ಸೇವೆ ಮಾಡಲೆಂದು ಅದಕ್ಕಾಗಿಯೇ ವನಸಿರಿ ಫೌಂಡೇಶನ್ ಸ್ಥಾಪಿಸಿ ನಿತ್ಯ ಪರಿಸರ ಸಂಬಂಧಿತ ಚಟುವಟಿಕೆಗಳಲ್ಲಿ ತೊಡಗಿರುವ ರಾಯಚೂರು ಜಿಲ್ಲೆಯ ಸಿಂಧನೂರ ಯುವಕರಾದ ಅಮರೇಗೌಡ ಮಲ್ಲಾಪುರ ಎಲ್ಲರಿಗೂ ಸ್ಪೂರ್ತಿ ನೀಡಿದ್ದಾರೆ.
ಹೌದು, ಈ ಯುವ ಪರಿಸರ ಪ್ರೇಮಿಗಳು ನಾನು ಅವರ ಪರಿಸರ ರಥವನ್ನು ನೋಡಿ ಆಸಕ್ತಿಯಿಂದ ಬೆನ್ನಟ್ಟಿ ಹುಡುಕಿಕೊಂಡು ಭೇಟಿ ನೀಡಿದ್ದೆ ತಾವರಗೇರಿಯಲ್ಲಿ, ಅಂದು ರಾಯಚೂರು ಜಿಲ್ಲೆಯ ಮಾನ್ವಿ ಮನೆಯಲ್ಲಿ ಇರುವ ನನ್ನ ಕುಟುಂಬದ ಸಹೋದರಿ ರೇಣುಕಾ ಅಕ್ಕನವರ ಮದುವೆಗೆ ಹೋಗುವಾಗ ಭೇಟಿಯಾಗಿ ಖುಷಿಯಾಯಿತು.
ಸಂಪೂರ್ಣವಾಗಿ ಹಸಿರು ಬಣ್ಣದಿಂದ ಅಲಂಕೃತಗೊಂಡ ವಾಹನವೊಂದು, ಸುತ್ತಲೂ ಸರ್ ಜಗದೀಶಚಂದ್ರ ಬೋಸ್, ಸುಂದರಲಾಲ್ ಬಹುಗುಣ, ಸಾಲುಮರದ ತಿಮ್ಮಕ್ಕನವರಂತಹ ಪರಿಸರ ಸೇವೆಯಲ್ಲಿ ಸಾಧನೆ ಮಾಡಿದ ಸಾಧಕರ ಫೋಟೋಗಳು, ಪರಿಸರಕ್ಕೆ ಸಂಬಂಧಿಸಿದ ಸಾಲುಗಳು ತುಂಬಿದ್ದವು. ಅದರ ಕೇಳ್ಗೆ ಪರಿಸರದ ಸೇವೆಯಲ್ಲಿ 24/7 ಅಂತ ಬರೆದಿತ್ತು. ವಾಹನ ನಿಲ್ಲಿಸಿದ ಸಸಿಗಳು ಹಾಗೂ ಶಿಶುಗಳು (ಮಕ್ಕಳು) ಇಬ್ಬರು.
ಈಗಿನ ಕಾಲದಲ್ಲಿ ಬಯಲು ನಾಡಿಯಲ್ಲಿ ಪರಿಸರ ಹೊರಟಿರುವ ರಥ ಯಾವುದು ಎಂದು ನನಗೆ ಕುತೂಹಲ. ನನ್ನ ಸಹೋದರ ವಿನಾಯಕ ಜರತಾರಿ ಅವರಿಗೆ ಪರಿಸರದ ರಥವನ್ನು ಫಾಲೋ ಮಾಡುವಂತೆ ಹೇಳಿದೆ. ನಂತರ ನಮ್ಮ ಕಾರನ್ನು ಅವರ ಪರಿಸರ ರಥದ ಮುಂದೆ ಹೋಗಿ ನಿಲ್ಲಿಸಿದಾಗ ನಮಗೆ ಆಶ್ಚರ್ಯವಾಯಿತು.ಕಾರಣ ಅವರನ್ನು ನೋಡಿ, ಅವರಿಂದ ಪಡೆದ ಮಾಹಿತಿಗಳು. ಆ ವ್ಯಕ್ತಿ ಎರಡು ವಾಹನಗಳನ್ನು ಕೇವಲ ಪರಿಸರದ ಸೇವೆಗಾಗಿ ಮೀಸಲಿಟ್ಟಿದ್ದಾರೆ. ದಿನವೂ ಒಂದಲ್ಲ ಒಂದು ಚಟುವಟಿಕೆ ನಡೆಸುತ್ತಾರೆ. ಅವರೆ ಗಿಡಗಳನ್ನು ಬೆಳೆಸಿ ಕೊಡುತ್ತಾರೆ. ಶಾಲಾ ಕಾಲೇಜು, ಜನ ಸಮೂಹ ಸೇರುವ ಕಡೆ ಹೋಗಿ ಪರಿಸರ ಜಾಗೃತಿ ಮೂಡಿಸುತ್ತಾರೆ.
ಬೇಸಿಗೆಯಲ್ಲಿ ಪ್ರಾಣಿ ಪಕ್ಷಿಗಳಿಗೆ ಕುಡಿಯುವ ನೀರಿನ ಅರವಟ್ಟಿಗೆ, ತೊಟ್ಟಿಗಳಿಗೆ ಉಚಿತವಾಗಿ. ಕೆಲವು ಕಡೆ ತಾವೇ ಅಳವಡಿಸುತ್ತಾರೆ. ಅದಕ್ಕಾಗಿ ತಮ್ಮ ಆದಾಯವನ್ನು ಎಷ್ಟು ಖರ್ಚು ಮಾಡಿದ್ದಾರೋ, ಹಿನ್ನಲೆ (ಆದಾಯದ ಮೂಲ) ಏನಿದೆಯೋ ನನಗೆ ತಿಳಿಯದು.ಅಷ್ಟೇ ಅಲ್ಲದೆ ಕಳೆದ ಮೂರು ತಿಂಗಳಿಂದ ನಾನು ನೋಡಿಕೊಂಡು ಬಂದಿರುವ ಪ್ರಕಾರ ದಿನವೂ ವಿವಿಧ ರೀತಿಯ ಪರಿಸರಕ್ಕೆ, ನೀರಿಗೆ, ಮಣ್ಣಿಗೆ ಸಂಬಂಧಿಸಿದ ಚಟುವಟಿಕೆಗಳನ್ನು ನಡೆಸುತ್ತಾರೆ. ಅವರಿಗೆ ಕಾರ್ಯ ರೂಪಕ್ಕೆ ತರುತ್ತಾರೆ.
ಇವರ ಪರಿಸರ ಚಟುವಟಿಕೆಗಳ ಜಾಗಕ್ಕೆ ವಿವಿಧ ಮಠದ ಸ್ವಾಮೀಜಿಗಳು ಭೇಟಿ ನೀಡಿ ಖುಷಿಪಟ್ಟು ಆಶೀರ್ವಾದ ಮಾಡಿದ್ದಾರೆ. ಹಿರಿಯರು, ಅನೇಕ ಅಧಿಕಾರಿಗಳು, ಯುವಕರು ಸೇರಿದಂತೆ ಬೆನ್ನು ತಟ್ಟಿದ್ದಾರೆ. ಇನ್ನೂ ಅನೇಕರು ಇವರನ್ನು ಸ್ಪೂರ್ತಿಯಾಗಿ ಪಡೆದಿದ್ದಾರೆ.
ಜೂನ್-5 ರಂದು ನೆಪಮಾತ್ರಕ್ಕೆ ಒಂದು ಗಿಡ ನೆಟ್ಟು ಪೋಸು ಕೊಡುವ ಹಾಗೂ ಸುದ್ದಿಗಳಲ್ಲಿ, ಪ್ರಚಾರದಲ್ಲಿ ಪರಿಸರ ಪ್ರೇಮವನ್ನು ವ್ಯಕ್ತಪಡಿಸುವ ಅನೇಕರಲ್ಲಿ ದಿನವೂ ಚಟುವಟಿಕೆಯ ಮೂಲಕ ಶ್ರಮಿಸುವ ಫೋಟೋಗಳನ್ನು ಇಂತಹವರಿಗೆ ನಾವು ಶಬ್ಬಾಸ್‌ನಲ್ಲಿ ಹೇಳಲೇಬೇಕು.
ವನಸಿರಿಯ ಸಂಸ್ಥಾಪಕ ಅಮರೇಗೌಡ ಮಲ್ಲಾಪೂರ ಅವರು ಹಾಗೂ ಅವರ ತಂಡವನ್ನು ನಾವು ನಮ್ಮ ಪರಿಸರ ಪರಿವಾರ, ಗ್ರೀನ್ ಆರ್ಮಿ ಹಾಗೂ ಎಲ್ಲಾ ಪರಿಸರ ಪ್ರೇಮಿಗಳ ಪರವಾಗಿ ಅಭಿನಂದಿಸುತ್ತೇವೆ.
ತಾಯಿ ಪರಿಸರಮಾತೆ, ಭೂ ತಾಯಿ ಪರಿಸರ ಸೇವೆ ಮಾಡಲು ನಿಮಗೆ ಇನ್ನೂ ಹೆಚ್ಚಿನ ಶಕ್ತಿ ನೀಡಲಿ, ಉತ್ತಮ ಆರೋಗ್ಯ ನೀಡಲಿ ಎಂದು ಪ್ರಾರ್ಥಿಸುತ್ತೇವೆ.
ಅಮರೇಗೌಡ ಮಲ್ಲಾಪುರ ಅವರ ಸಂಪರ್ಕ ಸಂಖ್ಯೆ: 9480969895, 8884808333
ಕೃಪೆ :ಚಂದ್ರು ಎಂ. ರಾಥೋಡ್ (ನರೇಗಲ್ಲ)