Health Tips‌ : ನಿಮ್ಮ ‌”ಲೈಂಗಿಕ ಶಕ್ತಿ” ಹೆಚ್ಚಿಸುವುದಕ್ಕೆ ಇಲ್ಲಿದೆ ಉತ್ತಮ ಉಪಾಯ..!!

ಯೋಗಕ್ಕೆ ನಮ್ಮ ದೇಶದಲ್ಲಿ ಬಹಳ ಪ್ರಮುಖ್ಯತೆ ನೀಡಲಾಗುತ್ತದೆ. ಯೋಗವು ನಮ್ಮ ದೈನಂದಿನ ಬದುಕಿನಲ್ಲಿ ಬಹಳ ಮಹತ್ವದಾಗಿದೆ. ನಾವು ನಿರಂತರ ಯೋಗ ಮಾಡುತ್ತಿದ್ದರೆ ಯಾವುದೇ ರೋಗ-ರುಜನೆಗಳು ಬರುವುದಿಲ್ಲ. ಯೋಗ ಮಾಡುವುದರಿಂದ ಅನೇಕ ಪ್ರಯೋಜನಗಳಿವೆ. ನಿಯಮಿತವಾಗಿ ಯೋಗ ಮಾಡುವುದರಿಂದ ನಿಮ್ಮ ದೈಹಿಕ ಮತ್ತು ಮಾನಸಿಕ ಆರೋಗ್ಯ ಹೆಚ್ಚಿಸುವುದಲ್ಲದೆ ಅನೇಕ ಆರೋಗ್ಯ ಸಮಸ್ಯೆಗಳಿಂದ ಮುಕ್ತಿ ಪಡೆಯಬಹುದು. ಯೋಗವು ಅದರ ವಿಶೇಷತೆಯಿಂದಲೇ ಪ್ರಪಂಚದಾದ್ಯಂತ ಗುರುತಿಸಲ್ಪಟ್ಟಿದೆ. ಯೋಗವು ಅತೀ ಹೆಚ್ಚು ಮನುಷ್ಯನಿಗೆ ಕಾಡುವ ಮಧುಮೇಹ ಸಮಸ್ಯೆಯನ್ನು ಸಹ ನಿಯಂತ್ರಿಸುತ್ತದೆ. ಕೆಲವು ರೀತಿಯ ಯೋಗಾಸನಗಳನ್ನು ಅಭ್ಯಾಸ ಮಾಡುವುದರಿಂದ ಮಧುಮೇಹವನ್ನು ಕಡಿಮೆ ಮಾಡಿ, ಲೈಂಗಿಕ ಶಕ್ತಿಯನ್ನು ಹೆಚ್ಚಿಸುತ್ತದೆ. ಈ ಯೋಗಾಸನಗಳು ಮಧುಮೇಹವನ್ನು ಕಡಿಮೆ ಮಾಡಬಲ್ಲವು. ಇದರಿಂದ ಲೈಂಗಿಕ ಶಕ್ತಿ ಹೆಚ್ಚುತ್ತದೆ. ಈ ಬಗ್ಗೆ ಸಂಪೂರ್ಣ ಮಾಹಿತಿ ಇಲ್ಲಿದೆ… ಮುಂದೆ ಓದಿ….

1. ವಜ್ರಾಸನ :- ಈ ಆಸನವನ್ನು ಮಾಡುವ ಮೊದಲು, ನಿಮ್ಮ ಕಾಲುಗಳನ್ನು ಚಾಚಿ ನೆಲದ ಮೇಲೆ ಕುಳಿತುಕೊಳ್ಳಿ. 2 ಕಾಲುಗಳನ್ನು ಒಂದರ ಬಳಿಕ ಒಂದರಂತೆ ಮಡಚಿ ಕುಳಿತುಕೊಳ್ಳಿ. ಈಗ ನಿಮ್ಮ ಪೃಷ್ಠಗಳನ್ನು ಕಾಲುಗಳ ನಡುವೆ ಇಡುವುದನ್ನು ಖಚಿತಪಡಿಸಿಕೊಳ್ಳುವುದರ ಜೊತೆಗೆ ಸಾಧ್ಯವಾದಷ್ಟು ಕಾಲ ಈ ಭಂಗಿಯಲ್ಲಿ ಕುಳಿತುಕೊಳ್ಳಿ.

ಈ ತರ ಮಾಡುವುದರಿಂದ ಜೀರ್ಣಾಂಗ ವ್ಯವಸ್ಥೆಯು ಸುಧಾರಿಸಿ, ಒತ್ತಡ ಮತ್ತು ಆತಂಕ ಕಡಿಮೆಯಾಗುತ್ತದೆ ಜೊತೆಗೆ ರಕ್ತದೊತ್ತಡವೂ ನಿಯಂತ್ರಣfಲ್ಲಿಡುತ್ತದೆ. ಇದು ವಿಶೇಷವಾಗಿ ಸಕ್ಕರೆ ರೋಗಿಗಳಿಗೆ ತುಂಬಾ ಒಳ್ಳೆಯದು. ಮೇದೋಜ್ಜೀರಕ ಗ್ರಂಥಿಗಳ ಕಾರ್ಯವನ್ನು ಉತ್ತೇಜಿಸಿ, ಇನ್ಸುಲಿನ್ ಸ್ರವಿಸುವಿಕೆಯನ್ನು ಹೆಚ್ಚು ಮಾಡುತ್ತದೆ.

2. ಅರ್ಧ ಮತ್ಯೇಂದ್ರಾಸನ :- ಮೊದಲು ನೆಲದ ಮೇಲೆ ಚಾಪೆ ಹಾಸಿ, ನಂತರ ಅದರ ಮೇಲೆ ನೇರವಾಗಿ ಕುಳಿತುಕೊಳ್ಳಿ ಮತ್ತು 2 ಕಾಲುಗಳನ್ನು ಮುಂದಕ್ಕೆ ಚಾಚಿಕೊಂಡು, ಎಡಗಾಲನ್ನು ನೊಗದ ತೊಡೆಯ ಕೆಳಗೆ ಮಡಚಿಕೊಳ್ಳಿ. ಬಳಿಕ ಎಡಗಾಲಿನ ಮೇಲೆ ಮೊಣಕಾಲನ್ನು ತೋರಿಸುತ್ತಾ ಬಲಗಾಲಿನೊಂದಿಗೆ ಕುಳಿತುಕೊಂಡು. ಸಾಧ್ಯವಾದಷ್ಟು ಕಾಲ ಈ ಭಂಗಿಯಲ್ಲಿ ಕುಳಿತುಕೊಳ್ಳಬೇಕು.

ಈ ಆಸನ ಮಾಡುವುದರಿಂದ ಜೀರ್ಣಕಾರಿ ಶಕ್ತಿ ವೃದ್ಧಿತ್ತದೆ. ಬೆನ್ನುಮೂಳೆಯನ್ನ ಬಲಪಡಿಸುತ್ತದೆ. ನರವೈಜ್ಞಾನಿಕ ಈ ಸಮಸ್ಯೆಗಳು ಸಹ ಕಡಿಮೆಯಾಗುತ್ತವೆ. ಇನ್ಸುಲಿನ್ ಸ್ರವಿಸುವಿಕೆಯನ್ನು ಉತ್ತೇಜಿಸಲು ಸಹಾಯ ಮಾಡುತ್ತದೆ.

3. ಸರ್ವಾಂಗಾಸನ :- ಮೊದಲು ಚಾಪೆಯ ಮೇಲೆ ಮಲಗಿ & ನಿಮ್ಮ ಕಾಲುಗಳನ್ನು ಚಾಚಿಕೊಂಡು. ನಿಮ್ಮ ಕೈಗಳನ್ನು ಪಕ್ಕಕ್ಕೆ ಇಡಬೇಕು. ಅದಾದನಂತರ ನಿಮ್ಮ ಕಾಲುಗಳನ್ನು ಮೇಲಕ್ಕೆ ಎತ್ತುವಾಗ ನಿಧಾನವಾಗಿ ಉಸಿರಾಡಿ. ಈಗ ಅಂಗೈಗಳನ್ನು ಪಾದದ ಮೇಲೆ ಇರಿಸಿಕೊಳ್ಳಿ ಸ್ವಲ್ಪ ಎತ್ತರದಲ್ಲಿ ಇರಿಸಬೇಕು ಇದರಿಂದ ಅದು ಕುತ್ತಿಗೆಯಿಂದ ಕಾಲಿಗೆ ನೇರವಾಗಿರುತ್ತದೆ. ಈ ಕ್ರಮವನ್ನು ಸರ್ವಾಂಗಾಸನ ಎಂದು ಕರೆಯಲಾಗುತ್ತದೆ.

ಅದೇ ಭಂಗಿಯಲ್ಲಿ, ಉಸಿರನ್ನು ಹೊರಹಾಕಿ ಜೊತೆಗೆ ನಿಮ್ಮ ಪಾದಗಳನ್ನು ಮತ್ತು ಮೊಣಕಾಲುಗಳನ್ನು ಮುಖದ ಹಿಂಭಾಗದಿಂದ ಬಾಗದಂತೆ ನೆಲದ ಮೇಲೆ ಇರಿಸಿಕೊಳ್ಳಿ. ಕೇವಲ 30 ಸೆಕೆಂಡುಗಳ (ಅರ್ದ ನಿಮಿಷ) ಕಾಲ ಹಾಗೆ ಬೀಟ್ಟು. ಆರಂಭದಲ್ಲಿ ಇದು ಕಷ್ಟಕರವಾಗಬಹುದು. ಅದರ ಬಳಿಕ ಅದು ಸುಲಭವಾಗುತ್ತದೆ. ಈ ಆಸನ ಮಾಡುವುದರಿಂದ ಬೆನ್ನುಮೂಳೆ ಬಲಗೊಳ್ಳುತ್ತದೆ. ಬೆನ್ನುನೋವನ್ನು ಕ್ರಮೇಣವಾಗಿ ಕಡಿಮೆ ಮಾಡುತ್ತದೆ. ಆಸ್ತಮಾದಂತಹ ಸಮಸ್ಯೆಗಳು ಸಹ ಇದರಿಂದ ಕಡಿಮೆಯಾಗುತ್ತವೆ.

4. ಪಶ್ಚಿಮೋತ್ತಾನಾಸನ:- ನಿಮ್ಮ ಎರಡು ಕಾಲುಅನ್ನು ಚಾಚಿಕೊಂಡು ಕುಳಿತುಕೊಳ್ಳಿ. ಈಗ ಎರಡೂ ಕೈಗಳನ್ನು ಮೇಲಕ್ಕೆತ್ತಿ ಮತ್ತು ಕೈಗಳಿಂದ ಕಾಲ್ಬೆರಳುಗಳನ್ನು ಹಿಡಿದು ದೇಹವನ್ನು ಮುಂದಕ್ಕೆ ಸಾದ್ಯವಾದಷ್ಟೂ ಬಗ್ಗಿಸಿ.

ಈ ಆಸನವನ್ನು ಪ್ರತಿದಿನ ಮಾಡುವುದರಿಂದ ಹೊಟ್ಟೆಯ ಸ್ನಾಯುಗಳು ಸದೃಢಗೊಳ್ಳುತ್ತವೆ. ಮಲಬದ್ಧತೆ ಮತ್ತು ಅಜೀರ್ಣದಂತಹ ತೀವ್ರವಾದ ಸಮಸ್ಯೆಗಳು ದೂರವಾಗುತ್ತವೆ. ಲೈಂಗಿಕ ಶಕ್ತಿ ಕ್ರಮೇಣ ಹೆಚ್ಚಾಗುತ್ತದೆ.

5. ವಿಪರೀತ ಕರಣಿ ಆಸನ:- ಮೊದಲು ನಿಮ್ಮ ಕಾಲುಗಳನ್ನು ಚಾಚಿ ಕುಳಿತುಕೊಳ್ಳಿ. ಬಳಿಕ ಬಲಗಾಲನ್ನು ಮಡಚಿ ಹಾಗೂ ನಿಮ್ಮ ಪಾದವನ್ನು ಬೆನ್ನಿನ ಮೇಲೆ ಇರಿಸಿಕೊಳ್ಳಿ. ಅಂತೆಯೇ, ಎಡಗಾಲನ್ನು ಮಡಚಿ ಎರಡೂ ಪಾದಗಳೊಂದಿಗೆ ವಜ್ರಾಸನದಲ್ಲಿ ಕುಳಿತುಕೊಳ್ಳಿ. ಆಳವಾಗಿ ನಿಧವಾಗಿ ಉಸಿರಾಡಿ ಮತ್ತು ನಿಧಾನವಾಗಿ ಮಲಗಿ. ಎರಡೂ ಕೈಗಳನ್ನು ಒಟ್ಟಿಗೆ ಇರಿಸಿಕೊಂಡು ಮತ್ತು ತಲೆಯನ್ನು ಕೆಳಗೆ ಇರಿಸಿ.

ಈ ಆಸನದಲ್ಲಿ ಸ್ವಲ್ಪ ಸಮಯದವರೆಗೂ ಹಾಗೇ ಇರಿ. ಈ ಆಸನ ಮಾಡುವುದರಿಂದ ರಕ್ತದೊತ್ತಡ ನಿಯಂತ್ರಣಕ್ಕೆ ಬಂದು. ಮೂತ್ರಪಿಂಡಗಳ ಆರೋಗ್ಯವನ್ನು ಸುಧಾರಿಸುತ್ತದೆ.

ಲೇಖನ: ಆರ್‌. ಚಂದ್ರು ಬಿ

Leave a Reply

error: Content is protected !!