SPECIAL STORY : ಕೊಪ್ಪಳದ ಹಿಂದೂ ಮಹಾ ಮಂಡಳಿಯ “ಗಣಪತಿ ಮೂರ್ತಿ ಪ್ರತಿಸ್ಠಾಪನೆ” ಹಿನ್ನೋಟ!!

You are currently viewing SPECIAL STORY : ಕೊಪ್ಪಳದ ಹಿಂದೂ ಮಹಾ ಮಂಡಳಿಯ “ಗಣಪತಿ ಮೂರ್ತಿ ಪ್ರತಿಸ್ಠಾಪನೆ” ಹಿನ್ನೋಟ!!

ಕೊಪ್ಪಳದ ಹಿಂದೂ ಮಹಾ ಮಂಡಳಿ ವತಿಯಿಂದ ನಡೆಯುತ್ತಿರುವುದು ಸಾರ್ವಜನಿಕ ವಿಘ್ನವಿನಾಶಕ ಮಹಾ ಗಣಪತಿಯ ಮೂರ್ತಿ ಪ್ರತಿಸ್ಠಾಪನೆ ಕಾರ್ಯಕ್ರಮ. ಇದು ನಗರದ ಸಾಂಸ್ಕೃತಿಕ ಧಾರ್ಮಿಕ ಚಟುವಟಿಕೆಗಳ ಆಚರಣೆಗಳನ್ನು ನೆನಪುಗಳೊಂದಿಗೆ ನಡೆಯುತ್ತಿದೆ. ನಗರದಲ್ಲಿ 2017ರಲ್ಲಿ ಆರಂಭವಾದ ಸಾರ್ವಜನಿಕ ಗಣಪತಿಯ ಮೂರ್ತಿ ಪ್ರತಿಸ್ಠಾಪನೆ ಕಾರ್ಯಕ್ರಮ ಇಂದಿಗೆ ಭರ್ತಿ 7 ವರ್ಷ ತುಂಬಿದೆ. ಈ ಹಿಂದಿನ 6 ವರ್ಷಗಳ ಈ ಆಚರಣೆ ನಡೆದುಬಂದ ಹಾದಿಯ ಬಗ್ಗೆ ಸ್ವಲ್ಪ ಸಮಯ ಕೊಟ್ಟು ಗಮನಿಸೋಣ ಬನ್ನಿ…!!

ನಗರದ 31 ವಾರ್ಡ್ ನಿಂದ 4-5 ಜನರು ಬಂದು ಹಿಂದೂ ಸಂಘಟನೆ ಬೆಳೆಸುವುದು ಮುಖ್ಯ ಉದ್ದೇಶವಾಗಿತ್ತು, ಬಳಿಕ ಹಿಂದೂ ಮಹಾಮಂಡಳಿ ಆರಂಭವಾದಾಗ 20-40 ಜನರಿಂದ ಶುರುವಾಗಿದ್ದು, ಸದ್ಯದಲ್ಲಿ ಈಗ ಇರುವಂತ ಸದಸ್ಯರ ಸಂಖ್ಯೆ 1000 ಕ್ಕೂ ಅಧಿಕವಾಗಿದೆ. ಅದರ ಜೊತೆಗೆ ಕಾರ್ಯಕರ್ತರು ಇದೀಗ 1500-2000 ಸದಸ್ಯರನ್ನು ಹೊಂದಿದ್ದಾರೆ.

ಮೊದಲನೇ ವರ್ಷದ ಸಾರ್ವಜನಿಕ ಗಣಪತಿಯ ಮೂರ್ತಿ ಪ್ರತಿಸ್ಠಾಪನೆ

31 ವಾರ್ಡ್ ನಲ್ಲಿ 4-5 ಜನರಿಂದ ಆರಂಭವಾದ ಹಿಂದೂ ಮಹಾ ಮಂಡಳಿಯ ಗಣೇಶನ ಮೂರ್ತಿ ಮೂರ್ತಿ ಪ್ರತಿಸ್ಠಾಪನೆ ಕಾರ್ಯಕ್ರಮ ಆರಂಭವಾಯಿತು. ಮೊದಲನೇ ವರ್ಷ ಈ ಹಿಂದೂ ಮಹಾಮಂಡಳಿಯನ್ನ ಮಾಡೋದಕ್ಕೆ ಸಾತ್ ಕೊಟ್ಟವರು ಸಂಸದರ ಕರಡಿ ಸಂಗಣ್ಣ ಹಾಗೂ ಕೊಪ್ಪಳದ ಶಾಸಕರು ರಾಘವೇಂದ್ರ ಇಟ್ನಾಳ್ ಎಲೆ ಮರಿಕಾಯಿಯಂತೆ ಜೊತೆಯಾಗಿ ನಿಂತು ಈ ಮಂಡಳಿಯನ್ನು ಕಟ್ಟಲು ಸಹಕರಿಸಿದ್ದಾರೆ.

ಮೊದಲನೇ ವರ್ಷ ಗಣಪತಿ 9 ಅಡಿ ಎತ್ತರದ ಯುವರಾಜ ಮಹಾರಾಜರ ಜೊತೆ ಸಿಂಹಾಸನವನ್ನು ಅಲಂಕರಿಸಿದ ವಿಘ್ನೇಶ್ವರನನ್ನು ಸ್ಥಾಪಿಸಲಾಗಿತ್ತು. 11ನೇಯ ದಿನದ ಬಳಿಕ ಶೋಭಾಯಾತ್ರೆ ನಡೆಯಿತು. ಮೊದಲನೇ ವರ್ಷ ಗಣೇಶನ ಪ್ರಯುಕ್ತವಾಗಿ ಹಲವಾರು ಧಾರ್ಮಿಕ ಚಟುವಟಿಕೆಗಳು ನಡೆದಿದ್ದವು, ಅದರಲ್ಲಿ ರಂಗೋಲಿ ಸ್ಪರ್ಧೆ, ಕ್ಯಾರಂ, ಸಂಸ್ಕೃತಿಕ ಕಾರ್ಯಕ್ರಮಗಳು, ಗಣೇಶನ ವಿಸರ್ಜನೆಯ ದಿನ ಅನ್ನ ಸಂತರ್ಪಣೆ ಮಾಡಲಾಯಿತು.

2ನೇ ವರ್ಷದ ಸಾರ್ವಜನಿಕ ಗಣಪತಿಯ ಮೂರ್ತಿ ಪ್ರತಿಸ್ಠಾಪನೆ

2ನೇ ವರ್ಷ ಒಂದು ತಿಂಗಳ ಮುಂಚಿತವಾಗಿ ಯೋಜನೆ ರೂಪಿಸಿ, ಮಹಾಮಂಡಳಿಯ ನೇತೃತ್ವದಲ್ಲಿ ಧಾರ್ಮಿಕವಾಗಿ ಅಚ್ಚುಕಟ್ಟಾಗಿ ಕಾರ್ಯಕ್ರಮಗಳು ನಡೆಯಿತು. ಮಣ್ಣಿನ ಗಣಪತಿ ಹಾಗೂ ಪರಿಸರಕ್ಕೆ ಒಂದು ಗಣೇಶನನ್ನು ಪ್ರತಿಷ್ಠಾಪನೆ ಮಾಡಬೇಕೆಂದು ಯೋಚನೆ ಮಾಡಿಕೊಂಡಿದ್ದರು. 11 ಅಡಿ ಎತ್ತರದ ಗಣೇಶನನ್ನು ಸ್ಥಾಪಿಸಿರುತ್ತಾರೆ 2ನೇ ವರ್ಷ ಗಣಪತಿ ಏನು ಸೂಚಿಸುತ್ತಿದ್ದಾರೆ ಅಂದರೆ ಶಿವನ ಆಕಾರದಲ್ಲಿ ಇರುತ್ತದೆ ಗಣೇಶನನ್ನು ತೋರಿಸುತ್ತಾರೆ. ಇದು ಹಿಂದೂ ಮಹಾ ಮಂಡಳಿಯ ಗಣಪತಿ ಹಾಗೂ ಸಾರ್ವಜನಿಕ ಗಣಪತಿ ಆಗಿರುವುದರಿಂದ ಹಿಂದೂ ಮಹಾ ಮಂಡಳಿಯವರು ಈಶ್ವರ ಪಾರ್ಕ್ ನ ಕಮಿಟಿ ಅವರ ಜೊತೆ ಮಾತುಕತೆ ನಡೆಸಿ ಪ್ರವೇಶವನ್ನು ಪಡೆದುಕೊಳ್ಳುತ್ತಾರೆ ಈಶ್ವರ್ ಪಾರ್ಕ್ ಕಮಿಟಿ ಅವರು ಕೂಡ ಪ್ರೋತ್ಸಾಹ ನೀಡುತ್ತಾರೆ. 2ನೇ ವರ್ಷದ ಗಣೇಶನ ಪ್ರಯುಕ್ತ ಸಂಸ್ಕೃತಿಕ ಕಾರ್ಯಕ್ರಮಗಳು ಹೀಗಿವೆ. ಹೊಸಪೇಟೆಯ ಅಂಜಲಿ ಭರತನಾಟ್ಯ ಅಕಾಡೆಮಿಯವರು ಬಂದು ಭರತನಾಟ್ಯ ಕಾರ್ಯಕ್ರಮವನ್ನು ನಡೆಸಿಕೊಡುತ್ತಾರೆ. ಕೊಪ್ಪಳದ ನೃತ್ಯಗಾರ್ತಿಯರು ಕಾರ್ಯಕ್ರಮವನ್ನು ಕೊಡುತ್ತಾರೆ. ಜೊತೆಗೆ ಸ್ಥಳೀಯ ಕಾಲಾವಿದರು ತಮ್ಮ ಕಲೆಯನ್ನು ತೊರಿಸುತ್ತಾರೆ. ಮೊದಲನೇ ವರ್ಷದಂತೆ 11ನೇ ದಿನದಂದು ಅನ್ನ ಸಂತರ್ಪಣೆಯೂ ಕೂಡ ಯಶಸ್ವಿಗೊಳಿಸಲಾಗುತ್ತದೆ. ಶೋಭಾಯಾತ್ರೆಯಲ್ಲಿ ವಿಶೇಷವಾಗಿ ಡೊಳ್ಳು ಕುಣಿತ ಕೂಡಾ ಮೊದಲನೇ ವರ್ಷಕ್ಕಿಂತ ವಿಜೃಂಭಣೆಯಿಂದ ನಡೆಯಿತು.

3ನೇ ವರ್ಷದ ಸಾರ್ವಜನಿಕ ಗಣಪತಿಯ ಮೂರ್ತಿ ಪ್ರತಿಸ್ಠಾಪನೆ

3ನೇ ವರ್ಷ ಪರಿಸರ ಪ್ರೇಮಿ ನಿಸರ್ಗ ಮತ್ತು ಸೌಂದರ್ಯ ಗಣಪನನ್ನು ಪ್ರತಿಷ್ಠಾಪನೆ ಮಾಡಲಾಗುತ್ತದೆ. ಹಿಂದೂ ಮಹಾ ಮಂಡಳಿ 3ನೇ ವರ್ಷಕ್ಕೆ ವಿಶೇಷವಾಗಿ ಬೆಳವಣಿಗೆಯನ್ನು ಪಡೆದುಕೊಂಡಿತ್ತು, ಹಿರಿಯರು ಸಾಕಷ್ಟು ಜನ ನಾವು ಸಹ ಕೈಜೋಡಿಸುತ್ತೇವೆ ಎಲ್ಲರೂ ಸೇರಿ ಮಾಡೋಣ ಎಂದು ಈ ಹಿಂದೂ ಮಹಾ ಮಂಡಳಿಯನ್ನು ಇನ್ನಷ್ಟು ಎತ್ತರಕ್ಕೆ ಬೆಳೆಸೋಣ ಎಂದು ಕೈಜೋಡಿಸುತ್ತಾರೆ.

ಅದಾದ ಬಳಿಕ 3ನೇ ವರ್ಷಕ್ಕೆ ಸದಸ್ಯರ ಸಂಖ್ಯೆ 250ರಿಂದ 300 ಜನ ಸದಸ್ಯರು ಸೇರಿಕೊಂಡು ಅಚ್ಚುಕಟ್ಟಾಗಿ ಮಾಡಿಕೊಂಡು ಬಂದಿದ್ದಾರೆ. 11ನೇ ದಿನದಮದು ಪ್ರತಿ ವರ್ಷ ಮಾಡಿದಂತೆ ಅನ್ನ ಸಂತರ್ಪಣೆ ಕಾರ್ಯಕ್ರಮ ಜೊತೆಗೆ ಡಿ ಜೆ ಡ್ಯಾನ್ಸ್‌ ಹಾಗೂ ಬಿಜ್ಜರ ಮನೆಯಿಂದ ಶೋಭಾಯಾತ್ರೆ ನಡೆಯಿತು.

ಗಣಪನನ್ನು ನುಂಗಿದ ಕರೊನಾ ಮಹಾಮಾರಿ

2020ರಲ್ಲಿ ಮಹಾಮಾರಿ ಕೋರನಾದಿಂದ ಇಡೀ ದೇಶವೇ ಲಾಕ್ ಡೌನ್ ಆಗಿತ್ತು. ಸರ್ಕಾರದ ಆದೇಶದಂತೆ ಗಣೇಶನನ್ನು ಯಾರು ಮೂರ್ತಿ ಪ್ರತಿಷ್ಠಾಪನೆ ಮಾಡಬಾರದು ಎಂಬ ಸುತ್ತೋಲೆ ಬರುತ್ತದೆ. ಹಿಂದೂ ಮಹಾಮಂಡಳಿಯವರು ಬಿಡಬಾರದು ಎಂದುಕೊಂಡು ಒಂದು ದಿನದ ಮಟ್ಟಿಗೆ ಆಚರಣೆ ಮಾಡುತ್ತೇವೆ ಎಂದು ಅನುಮತಿ ಅನ್ನು ಪಡೆದುಕೊಳ್ಳುತ್ತಾರೆ 2.5 ಅಡಿ ಎತ್ತರದ ಮಣ್ಣಿನ ಗಣಪತಿ ಈಶ್ವರ ಪಾರ್ಕ್ ನಲ್ಲಿ ಚಿಕ್ಕ ಮತ್ತು ಚೊಕ್ಕಎನ್ನುವ ಆಚರಿಸುತ್ತಾರೆ ಚಿಕ್ಕ ಶೇಡ್ ಮಾಡಿ, ಪೂಜೆ ಹೋಮ ಕಾನೂನು ಇಲ್ಲದ ರೀತಿಯಲ್ಲಿ 8 ರಿಂದ 10 ಕೂಡಿಕೊಂಡು ಗಣೇಶನ ಶೋಭಯಾತ್ರೆ ಮಾಡಿದರು ಗಣೇಶನ ಪ್ರತಿಷ್ಠಾಪನೆ ಮಾಡಿದ ದಿನವೇ ವಿಸರ್ಜನೆ ಮಾಡುತ್ತಾರೆ.

2021ರಲ್ಲಿ ಮತ್ತೆ ವಿಘ್ನವಿನಾಶಕನಿಗೆ ವಿಘ್ನ ಕಾಟ..!!

ಭಾರತದಲ್ಲಿ ಕರೊನ ಮತ್ತೆ ಅದೇ ಸ್ಥಿತಿಯಲ್ಲಿತ್ತು, ಭಯದ ವಾತಾವರಣವನ್ನ ಕಟ್ಟಿಟ್ಟಿತು, 2021ರಲ್ಲೂ ಕೂಡ ಗಣೇಶನಮೂರ್ತಿ ಪ್ರತಿಷ್ಠಾಪನೆ ಮಾಡಬಾರದು ಎಂಬ ಸುತ್ತೋಲೆ ಬರುತ್ತದೆ. ಎಲ್ಲಾ ಸಂಘಟನೆಗಳು ಒಂದುಗೂಡಿ ಕಾನೂನುಗಳಿಗೆ ಮನವಿ ಮಾಡಿಕೊಂಡು ಕರೋನ ಇಲ್ಲ ನಾವು ಗಣೇಶನ ಪ್ರತಿಷ್ಠಾಪನೆ ಮಾಡುತ್ತೇವೆ ಇಷ್ಟೇ ದಿನಗಳ ಕಾಲ ಕೂರಿಸುತ್ತೇವೆ ಎಂದು ಅಧಿಕಾರಿಗಳ ವಿರುದ್ಧ ಧ್ವನಿ ಎತ್ತಿ ಹಠದಿಂದ ಗಣೇಶನ ಮೂರ್ತಿ ಪ್ರತಿಷ್ಠಾಪನೆ ಮಾಡಲಾಗಿತ್ತು. 5ನೇ ವರ್ಷದ 18 ಅಡಿ ಎತ್ತರದ ಮಣ್ಣಿನ ಗಜಪಡೆ ನಾಯಕನೆಂದು ಸುಚ್ಚಿಸುತ್ತಾನೆ. ಹಿಂದೂ ಮಹಾಮಂಡಳಿಯ ಅಡಿಯಲ್ಲಿ ಕಲ್ಯಾಣನಗರದ ರಸ್ತೆಯಲ್ಲಿ 3 ದಿನದ ಗಣೇಶನ ಪ್ರತಿಷ್ಠಾಪನೆಯನ್ನು ಮಾಡುತ್ತಾರೆ ಸಿದ್ಧಿ ವಿನಾಯಕ ಮಿತ್ರ ಮಂಡಳಿಯವರು ಇವರಿಗೆ ಕೈಜೊಡಿಸುತ್ತಾರೆ.

5ನೇ ಗಣೇಶನ ಶೋಭೆಯಾತ್ರೆಗೆ ಸೇರಿದ ಗಡಿಯಾರ ಕಂಬದ ಹತ್ತಿರ ಜನರು ಸುಮಾರು 2ಲಕ್ಷ ರಿಂದ 3 ಲಕ್ಷ ಜನ ಸೇರಿದ್ದರು. ಭಾರತದಲ್ಲೇ ಅತೀ ದೊಡ್ಡ ಗಣೇಶ ಪ್ರತಿಷ್ಠಾಪನೆ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ. ಇದು ಕರ್ನಾಟಕದಲ್ಲಿ ಮೊದಲನೇಯ ಸ್ಥಾನ ಪಡೆದಿತ್ತು. ಅಂದು ಮಹಮಂಡಳಿಯಿಂದ ಪರಿಸರಕ್ಕೆ ಕೊಡುಗೆಯನ್ನು ನೀಡಬೇಕು ಎನ್ನುವ ವಿಚಾರ ಮಾಡಿ, ಬಂದ ಭಕ್ತರಿಗೆ ಪ್ರತಿಯೊಬ್ಬರಿಗೂ ಸಸಿಗಳನ್ನು ಕೊಡು ಕಾರ್ಯಕ್ರಮವನ್ನು ಹಮ್ಮಿಕೊಂಡಿರುತ್ತಾರೆ. ಇದುಅಭಿನವ ಗವಿಸಿದ್ದೇಶ್ವರ ಸ್ವಾಮಿಗಳು ಪರಿಯಾಲೋಚನೆ ಆಗಿತ್ತು ಸ್ವತಃ ಅವರೇ 1000 ಸಾವಿರ ಸಸಿಗಳನ್ನು ಸಸಿಗಳನ್ನು ವಿತರಣೆ ಮಾಡಿದ್ದರು.

6ನೇ ವರ್ಷದ ಸಾರ್ವಜನಿಕ ಗಣಪತಿಯ ಮೂರ್ತಿ ಪ್ರತಿಸ್ಠಾಪನೆ

6ನೇ ವರ್ಷ ಬರೋದ್ರಲ್ಲಿ ಚಮತ್ಕಾರ ಅಂತಾನೆ ಹೇಳಬಹುದು. ಅದು ಬರೋಬ್ಬರಿ ಸದ್ಯಸರ ಸಂಖ್ಯೆಯಲ್ಲಿ 1000 ಗಡಿ ದಾಟಿತ್ತು. ಯುವಕರಲ್ಲಿ ಬದಲಾವಣೆ ಮತ್ತು ಉತ್ಸಾಹ ತುಂಬಿಕೊಂಡಿತ್ತು ಮತ್ತು ತಾವು ಮಾಡುವ ಕೆಲಸದಲ್ಲಿ ಜವಾಬ್ದಾರಿಯಿಂದ ಕೆಲಸವನ್ನು ನಡೆಸಿಕೊಂಡು ಇಂದಿಗೂ ಹೋಗುತ್ತಿದ್ದಾರೆ. 6ನೇ ವರ್ಷದ ಗಣೇಶ ಪರಮೇಶ್ವರ ಮತ್ತು ಪಾರ್ವತಿಯ ಮಗ ಸಿಂಹಾಸವನ್ನು ಏರಿದ್ದಾನೆ ಅನ್ನು ಸೂಚನೆಯನ್ನು ಕೊಡುತ್ತಾನೆ. ಕಳೆದ ವರ್ಷ ಹಾಗೆ ಪ್ರತಿದಿನ ಪ್ರಸಾದ್ ವ್ಯವಸ್ಥೆ ಮಾಡಲಾಯಿತು ಅದಕ್ಕೆ ಕಳೆದ ವರ್ಷ ಪ್ರತಿದಿನ ಮಳೆ ಬರುವುದು ಕಾರಣದಿಂದಾಗಿ ಸಾಂಸ್ಕೃತಿಕ ಕಾರ್ಯಕ್ರಮ ಮಾಡೋದಕ್ಕೆ ಆಗಿರಲಿಲ್ಲ,

7ನೇ ವರ್ಷದ ಸಾರ್ವಜನಿಕ ಗಣಪತಿಯ ಮೂರ್ತಿ ಪ್ರತಿಸ್ಠಾಪನೆ

7ನೇ ವರ್ಷದ ಗಣೇಶನ ಮೂರ್ತಿ 17 ಅಡಿ ಎತ್ತರ ವಿದೆ. ಬಾಲ ಗಂಗಾಧರ ತಿಲಕ್ ರವರ ಗಮನದಲ್ಲಿ ಇಟ್ಟುಕೊಂಡು ಪ್ರತಿವರ್ಷವೂ ಕೂಡ ಬದಲಾವಣೆಯನ್ನು ಮಾಡಿಕೊಳ್ಳುತ್ತಾ ಬಂದಿದ್ದಾರೆ. ಗಣೇಶನ ಹಬ್ಬ ಹೇಗೆ ಮತ್ತು ಯಾರಿಂದ ಶುರುವಾಗಿದ್ದು, ಜನರಿಗೆ ಗೊತ್ತಾಗಬೇಕು ಹಾಗೂ ಶಿವ ತನ್ನ ಮಗನನ್ನು ಕೊಂದ ಅದಕ್ಕೆ ಆನೆ ಮುಖವನ್ನು ತಂದಿಟ್ಟ ಅದಕ್ಕೆ ಗಣೇಶ ಹಬ್ಬನ ಆಚರಿಸುತ್ತಾರೆ ಅನ್ನೋದು ತಪ್ಪು ಕಲ್ಪನೆ ಇಟ್ಟುಕೊಂಡಿದ್ದಾರೆ ಸಾರ್ವಜನಿಕರರು ಮೂಢನಂಬಿಕೆಗಳನ್ನು ಹೋಗಲಾಡಿಸಬೇಕೆಂದು ಈ ಗಣೇಶನನ್ನು ಪ್ರತಿಷ್ಠಾಪನೆ ಮಾಡಿದ್ದಾರೆ. ಸ್ವಾತಂತ್ರ ಸಂಗ್ರಾಮದ ವೇಳೆ ಬ್ರಿಟಿಷರ ಆಳ್ವಿಕೆಯಲ್ಲಿ ಇದ್ದಾಗ ಭಾರತವನ್ನು ಸ್ವಾತಂತ್ರ ಪಡಿಸಿಕೊಳ್ಳಬೇಕು ಎನ್ನುವ ನಿಟ್ಟಿನಲ್ಲಿ ಬಾಲ ಗಂಗಾಧರ ತಿಲಕ್ ರವರು ಗಣೇಶ ಚತುರ್ಥಿಯನ್ನು ಆರಂಭ ಮಾಡುತ್ತಾರೆ. ಆ ಸಮಯದಲ್ಲಿ 10 ಜನ ಒಂದೇ ಕಡೆ ಗುಂಪಾಗಿ ಕೊಡುತ್ತಿರಲಿಲ್ಲ ಬರೀ ಚಾಟಿ ಏಟು ಬೀಳುತ್ತಿದ್ದು, ಹಾಗಾಗಿ ಬಾಲ್ ಗಂಗಾಧರ್ ತಿಲಕ್ ರವರು ಗಣೇಶ ಚತುರ್ಥಿಯನ್ನು ಆರಂಭ ಮಾಡಿದರು ಅವರ ನೆನಪಿಗಾಗಿ ಸಂಸ್ಕೃತಿಕವಾಗಿ ಮತ್ತು ಧಾರ್ಮಿಕವಾಗಿ ನಡೆದುಕೊಂಡು ಬಂದಿದೆ.

7ನೇ ವರ್ಷದ ಪ್ರಯುಕ್ತ ಕೋಲವರ್ಸಿ ವ್ಯಾಯಾಮಾ ನಾಟಕಗಳು ಕೋಲಾಟ ಇನ್ನು ಹಲವಾರು ಕೊಪ್ಪಳದ ಜಿಲ್ಲೆಯಲ್ಲಿ ಕಲಾವಿದರನ್ನು ಹೊರಗಡೆ ತರುವಂತಹ ಕೆಲಸವನ್ನು ಮಾಡುತ್ತದೆ. ನಮ್ಮ ಕೊಪ್ಪಳದ ಹಿಂದೂ ಮಹಾ ಮಂಡಳಿಯ ಸಂಘಟನೆ.

7ನೇ ವರ್ಷದ ಗಣೇಶೋತ್ಸವ.
ಮೂರ್ತಿ ಪ್ರತಿಷ್ಠಾಪನೆಯಾದ ದಿನ ಯುವಕರು ಸ್ವಯಂ ಪ್ರೇರಿತ ರಾಗಿ ರಕ್ತದಾನ ಮಾಡಿ ಬೇರೊಂದು ಜೀವಗಳನ್ನು ಉಳಿಸುವುದಕ್ಕೆ ತುಂಬಾ ಒಳ್ಳೆಯ ಕೆಲಸ ಮಾಡಿದ್ದಾರೆ. ಈ ರಕ್ತದಾನ ಶಿಬಿರ 2ನೇ ವರ್ಷದಿಂದಲೂ ನಡೆಸಿಕೊಂಡು ಬಂದಿದೆ. ಇಂದು ಗಣೇಶನ ವಿಸರ್ಜನೆಯ ದಿನ ಬೆಳಗ್ಗೆ 10 ಗಂಟೆಯಿಂದ ಕೋಲುವರಸೆ ಜಾನ್ಜು ಮೇಳ ಡೊಳ್ಳು ಕುಣಿತ ಕರಡಿ ಕುಣಿತ ಇನ್ನು ಹಲವಾರು ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆದವು, ಈ ವರ್ಷ ಹಿಂದೂ ಮಹಾ ಮಂಡಳಿಯಿಂದ ಯುವತಿಯರು ಕೂಡ ಹೊಸದಾಗಿ ಗಣೇಶನ ಮುಂಭಾಗದೊಳಗಡೆ ಡಿಜೆ ವ್ಯವಸ್ಥೆಯನ್ನು ಮಾಡಲಾಗಿದೆ ಸಾರ್ವಜನಿಕ ಯುವತಿಯರು ಭಾಗವಹಿಸಿದ್ದಾರೆ. ಇಂದು ಬೆಳಗ್ಗೆಯಿಂದ ಸಾಯಂಕಾಲದವರೆಗೂ ನಡೆಯತ್ತಿದೆ. ಸಂಜೆ 5:00 ಗಂಟೆಗೆ ಹರಾಜಿನ ಪ್ರಕ್ರಿಯೆ ನಡೆಯುವುದು ತದನಂತರ ಭವ್ಯ ಮೆರವಣಿಗೆಯೊಂದಿಗೆ ಉತ್ಸಾಹದಿಂದ ಡಿಜೆ ಸದ್ದಿಗೆ ಹೆಚ್ಚಾಗುತ್ತಿದ್ದ ಯುವಕರೊಂದಿಗೆ ವಿಜೃಂಭಣೆಯಿಂದ ಗಣೇಶ ವಿಸರ್ಜನೆ ಮಾಡಲಾಗುವುದು.

“ಎಲ್ಲಾ ಕಾರ್ಯಕ್ರಮಗಳಲ್ಲಿ ಸಕಲ ಸದ್ಭಕ್ತರು ತನು ಮನದಿಂದ ಭಾಗವಹಿಸಿ ಗಣೇಶನ ಮಹೋತ್ಸವವನ್ನು ಯಶಸ್ವಿಗೊಳಿಸಬೇಕು” ಎಂದು ಮಂಡಳಿಯವರು ಮನವಿ ಮಾಡಿಕೊಂಡಿದ್ದಾರೆ.

ಸಾರ್ವಜನಿಕ ಗಣೇಶನ ಉತ್ಸವದ ಸಮಿತಿ ಇದ್ದು ಅದರ ಸದಸ್ಯರುಗಳು ಹೀಗಿದ್ದಾರೆ.

ಗೌರವ ಅಧ್ಯಕ್ಷರು
ಸಂಗಣ್ಣ ಕರಡಿ
ಸಂಸದರು ಕೊಪ್ಪಳ

ಅಧ್ಯಕ್ಷರು
ಕೆ. ರಾಘವೇಂದ್ರ ಹಿಟ್ನಾಳ್
ಶಾಸಕರು ಕೊಪ್ಪಳ

ಉಪಾಧ್ಯಕ್ಷರು
ಶಿವಗಂಗಾ ಶಿವರೆಡ್ಡಿ ಭೂಮಕ್ಕನವರ
ನಗರಸಭಾ ಅಧ್ಯಕ್ಷರು ಕೊಪ್ಪಳ

ಹಿಂದೂ ಮಹಾಮಂಡಳಿ ಕೊಪ್ಪಳ
ಸರ್ವ ಕಾರ್ಯಕರ್ತರು ಹಾಗೂ ಮಂಡಳಿ ಸರ್ವ ಸದಸ್ಯರು ಕೊಪ್ಪಳ

ವಿಶೇ‍ಷ ವರದಿ : ರಾಧಿಕಾ ಕರ್ಕಿಹಳ್ಳಿ, ಕೊಪ್ಪಳ

Leave a Reply

error: Content is protected !!