BIG NEWS : ಬರ ಪರಿಹಾರದ ಹಣ ಖಾತೆಗೆ : ಇಲ್ಲಿದೆ ಮಾಹಿತಿ…!!

You are currently viewing BIG NEWS : ಬರ ಪರಿಹಾರದ ಹಣ ಖಾತೆಗೆ : ಇಲ್ಲಿದೆ ಮಾಹಿತಿ…!!

ಪ್ರಜಾ ವೀಕ್ಷಣೆ ಸುದ್ದಿಜಾಲ : ರಾಜ್ಯ ಸರ್ಕಾರದಿಂದ ರೈತರಿಗೆ ಮಹತ್ವದ ಮಾಹಿತಿ ನೀಡಿದ್ದು, ಅದೇನೆಂದರೆ, ಬೆಳೆ ಪರಿಹಾರದ ಹಣ ಖಾತೆಗೆ ಜಮಾ ಆಗದ ಬೆಳೆ ಹಾನಿ, ಬೆಳೆ ಪರಿಹಾರ ಜಮೆ ಅಗದೆ ಇರುವ ಎಲ್ಲಾ ವರ್ಗದ ರೈತರು ತಾವು ಖಾತೆ ಹೊಂದಿರುವ ಬ್ಯಾಂಕಗೆ ಭೇಟಿ ನೀಡಿ, ಖಾತೆ ಚಾಲ್ತಿ ಇರುವ ಬಗ್ಗೆ, ಇ-ಕೆವೈಸಿ ಅಪಡೆಟ್ ಆಗಿರುವ ಬಗ್ಗೆ ಮತ್ತು ಪ್ರೂಟ್ಸ್ ಸಂಖ್ಯೆ ಹೊಂದಿರುವ ಬಗ್ಗೆ ಪರಿಶೀಲಿಸಿ, ಖಾತರಿ ಮಾಡಿಕೊಳ್ಳಿ ಎಂದು ಸೂಚನೆ ನೀಡಿದೆ.

ಈ ಕುರಿತು ಪ್ರಕಟಣೆ ಹೊರಡಿಸಿದ್ದು, ‘ಅಕೌಂಟ್‍ಗಳನ್ನು ನಿರ್ಬಂಧಿಸಿರುವುದು ಅಥವಾ ಫ್ರೀಜ್ ಮಾಡಿರುವುದು ಹಾಗೂ ಯಾವ ರೈತರ ಖಾತೆಯನ್ನು ಮುಚ್ಚಲಾಗಿದೆಯೋ ಅಂತಹ ಫಲಾನುಭವಿಗಳು ಬ್ಯಾಂಕ್‍ಗೆ ಭೇಟಿ ನೀಡಿ, ಅಕೌಂಟ್ ರಿ ಓಪನ್ ಮಾಡಿಸಬೇಕು. ಫ್ರೂಟ್ಸ್ ಅಪ್‍ಡೇಟ್‍ನಲ್ಲಿ ಆಧಾರ್ ಹೆಸರು ಹೊಂದಿಕೆಯಾಗುತ್ತಿಲ್ಲ ಎನ್ನುವ ಆ ರೈತರು ಫ್ರೂಟ್ಸ್ ತಂತ್ರಾಂಶದಲ್ಲಿ ಹೆಸರು ಅಪ್ಡೇಟ ಮಾಡಿಸಬೇಕು. ಆಧಾರ್ ಅನ್ನು ಬ್ಯಾಂಕ್‍ನೊಂದಿಗೆ ಸೀಡ್, ಖಾತೆಗೆ ಆಧಾರ್ ಮ್ಯಾಪ್, ಕುಸಿದ ಪಾವತಿ ಹಾಗೂ ಎನ್.ಪಿ.ಸಿ.ಐ ಸೀಡಿಂಗ್ ಸಮಸ್ಯೆ ಇರುವಂತ ಫಲಾನುಭವಿಗಳು ಬ್ಯಾಂಕ್‍ಗೆ ಹೋಗಿ ಎನ್.ಪಿ.ಸಿ.ಐ (NPCI) ಮಾಡಿಸಬೇಕು. ಅಮಾನ್ಯ ಸ್ವೀಕೃತ ಐ.ಎಫ್.ಎಸ್.ಸಿ ಕೋಡ್ ಹೊಂದಿರುವ ಫಲಾನುಭವಿಗಳು ಬ್ಯಾಂಕ್‍ಗೆ ಭೇಟಿ ನೀಡಿ ಐ.ಎಫ್.ಎಸ್.ಸಿ ಕೋಡ್ ಅಪ್ಡೇಟ್ ಮಾಡಿಸಿ ಎನ್.ಪಿ.ಸಿ.ಐ ಮಾಡಿಸಬೇಕು.

ಹೆಚ್ಚಿನ ಮಾಹಿತಿಗಾಗಿ, ರೈತರು ಆಯಾ ತಾಲೂಕಿನ ತಹಶಿಲ್ದಾರ ಕಚೇರಿಯಲ್ಲಿ ತೆರೆದಿರುವ ಬರಪರಿಹಾರ ಕೇಂದ್ರಕ್ಕೆ ಭೇಟಿ ನೀಡಿ, ಅಥವಾ ಅಲ್ಲಿನ ಸಹಾಯವಾಣಿಗೆ ಕರೆ ಮಾಡಿ, ಸಮಸ್ಯೆ ಪರಿಹರಿಸಿಕೊಳ್ಳಬೇಕೆಂದು ಸೂಚನೆ ನೀಡಲಾಗಿದೆ.

Leave a Reply

error: Content is protected !!