ಹುಬ್ಬಳ್ಳಿ : ಹುಬ್ಬಳ್ಳಿ ನಗರದ ವೀರಾಪುರ ಓಣಿಯಲ್ಲಿ ನಡೆದ ಅಂಜಲಿ ಅಂಬಿಗೇರ ಕೊಲೆ ಆರೋಪಿ ವಿಶ್ವ ಅಲಿಯಾಸ್ ಗಿರೀಶ್ ಇದೀಗ CID ಅಧಿಕಾರಿಗಳ ಮುಂದೆ ಕೊಲೆಯ ರಹಸ್ಯವನ್ನು ಬಿಚ್ಚಿಟ್ಟಿದ್ದಾನೆ. ಈತನು ಕೊಲೆ ಮಾಡಿ ಪರಾರಿಯಾಗಲು ರೈಲಿನಿಂದ ಜಿಗಿದು ಗಾಯಗೊಂಡು ಕಿಮ್ಸ್ನಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಈ ವೇಳೆಯಲ್ಲಿ ಅಧಿಕಾರಿಗಳ ಮುಂದೆ ಈ ಸತ್ಯವನ್ನು ಹೇಳಿದ್ದಾನೆ ಎಂದು ಮಾಹಿತಿ ತಿಳಿದು ಬಂದಿದೆ.
ಹೌದು, ಈ ಪ್ರಕರಣವನ್ನು CID ಗೆ ವಹಿಸಲಾಗುವುದು ಎಂದು ಕಳೆದ 2 ದಿನಗಳ ಹಿಂದೆ ಗೃಹ ಸಚಿವ ಜಿ.ಪರಮೇಶ್ವರ್ ತಿಳಿಸಿದ್ದರು. ಇದೀಗ ಸಿಐಡಿ ಅಧಿಕಾರಗಳ ಮುಂದೆ ಕೊಲೆಯ ಬಗ್ಗೆ ಹೇಳಿರುವ ಗಿರೀಶ್ ಆಲಿಯಾಸ್ ವಿಶ್ವ, ಮೈಸೂರಿಗೆ ಬರಲು ಯುವತಿ ಅಂಜಲಿ ಒಪ್ಪದಿದ್ದಕ್ಕೆ ಕೊಲೆಯ ಹಿಂದಿನ ದಿನ ಯುವತಿಗೆ ಒಂದು ಸಾವಿರ ಕಳುಹಿಸಿದ್ದ ಎನ್ನಲಾಗಿದೆ.
ಫೋನ್ ಪೇ ಮೂಲಕ ಆರೋಪಿ ವಿಶ್ವ 1,000 ರೂಪಾಯಿ ಕಳುಹಿಸಿದ್ದ. 1,000 ಹಣ ಪಡೆದು ಅಂಜಲಿ ಪೋನ್ ನಂಬರ್ ಬ್ಲಾಕ್ ಮಾಡಿದ್ದಳು. ಈ ಒಂದು ಕಾರಣಕ್ಕೆ ಸಿಟ್ಟಿಗೆ ಬಂದು ಕೊಲೆ ಮಾಡಿದ್ದಾಗಿ ಹೇಳಿಕೆ ನೀಡಿದ್ದಾನೆ. ಸಿಐಡಿ ಅಧಿಕಾರಿಗಳ ಬಳಿ ಆರೋಪಿ ವಿಶ್ವ ಕೊಲೆಯ ರಹಸ್ಯವನ್ನು ಎಳೆ ಎಳೆಯಾಗಿ ಬಾಯಿ ಬಿಟ್ಟಿದ್ದಾನೆ. ಇದೀಗ ಕಿಮ್ಸ್ ಆಸ್ಪತ್ರೆಯಲ್ಲಿ ಸಿಐಡಿ ಅಧಿಕಾರಿಗಳು ಆರೋಪಿ ಗಿರೀಶ್ ನನ್ನ ವಿಚಾರಣೆ ನಡೆಸಿದ್ದಾರೆ ಎಂದು ಬಲ್ಲ ಮೂಲಗಳಿಂದ ಮಾಹಿತಿ ತಿಳಿದು ಬಂದಿದೆ.