LOCAL NEWS : ಕಸ ವಿಲೇವಾರಿಗೆ ಉಚಿತ ಡಸ್ಟ್‌ಬೀನ್ ವಿತರಣೆಯಲ್ಲಿ ಪುರಸಭೆ ವಿಳಂಬ..!
ಮುದಗಲ್ಲ : ಪಟ್ಟಣದಲ್ಲಿರುವ ಮನೆಗಳಿಗೆ ತಲಾ ಎರಡು ಕಸ ಸಂಗ್ರಹಣೆ ಬಕೆಟ್‌ಗಳನ್ನು ನೀಡುವ ಕಾರ್ಯಕ್ಕೆ ಮುದಗಲ್ಲ ಪುರಸಭೆ ಅಧ್ಯಕ್ಷರಾದ ಮಹಾದೇವಮ್ಮ ಗುತ್ತೆದಾರ ಅವರು ಸಂಕೇತವಾಗಿ ದಿನಾಂಕ 15 -08-25 ಚಾಲನೆ ನೀಡಿದರು ಆದರೆ ಜನರಿಗೆ ವಿತರಣೆ ಮಾಡದೇ ಗೋದಾಮಿನಲ್ಲಿ ಸಂಗ್ರಹಿಸಿಟ್ಟಿದೆ ವಿತರಣೆ ಮಾಡದೆ ಪುರಸಭೆ ನಿಲಷ್ಯ ತೋರಿದೆ.
ಮನೆಗಳಲ್ಲಿ ಸಂಗ್ರಹವಾಗುವ ಹಸಿ ಮತ್ತು ಒಣ ಕಸ ಪ್ರತ್ಯೇಕವಾಗಿಸಲು ಮತ್ತು ಕಸವನ್ನು ಸಂಗ್ರಹಿಸಲು ಅನುಕೂಲ ಆಗುವ ನಿಟ್ಟಿನಲ್ಲಿ ಪ್ರತಿ ಮನೆಗೂ ಕಸದ ಡಬ್ಬಿಗಳನ್ನು ವಿತರಿಸಲು ಸ್ಥಳೀಯ ಪುರಸಭೆ ಬಕೆಟ್‌ಗಳನ್ನು ನೀಡುವ ಕಾರ್ಯಕ್ಕೆ ಮುದಗಲ್ಲ ಪುರಸಭೆ ಅಧ್ಯಕ್ಷ ರಾದ ಮಹಾದೇವಮ್ಮ ಗುತ್ತಿಗೆದಾರ ಸಂಕೇತವಾಗಿ ಚಾಲನೆ ನೀಡಿದರು ಪ್ಲಾಸ್ಟಿಕ್ ಡಬ್ಬಿಗಳನ್ನು ಇವುಗಳನ್ನು ಜನರಿಗೆ ವಿತರಣೆ ಇನ್ನೂ ಆಗಿಲ್ಲ.
ಪುರಸಭೆಯು ಡಸ್ಟ್‌ಬಿನ್‌ಗಳನ್ನು ಕೊಡದ ಕಾರಣ ಮನೆಗಳಲ್ಲಿ ಕಸ ಪ್ರತ್ಯೇಕಿಸಲು ಸಾಧ್ಯವಾಗುತ್ತಿಲ್ಲ. ಪ್ಲಾಸ್ಟಿಕ್ ಕವರ್‌ನಲ್ಲಿ ನಿತ್ಯ ಕಸ ತುಂಬಿಡುತ್ತಿದ್ದೇವೆ. ಹಸಿ ಮತ್ತು ಒಣಕಸವನ್ನು ಒಟ್ಟಿಗೇ ತುಂಬಿ ಕೊಡುತ್ತಿದ್ದೇವೆ. ಕಸ ತೆಗೆದುಕೊಂಡು ಹೋಗಲು ತಡವಾದರೆ ಮನೆಯಲ್ಲೇ ಹಸಿ ಕಸ ಕೊಳೆತು ದುರ್ನಾತ ಬೀರುತ್ತದೆ’ ಎಂದು ಗೃಹಿಣಿಯರು ಸಮಸ್ಯೆ ತೋಡಿಕೊಂಡರು.
ಒಣಕಸ ಸಂಗ್ರಹಕ್ಕೆ ಹಸಿರು, ಹಸಿಕಸಕ್ಕೆ ನೀಲಿ ಬಣ್ಣದ ಪ್ಲಾಸ್ಟಿಕ್ ಡಬ್ಬಿಗಳನ್ನು ಗುರುತಿಸಿ ಪ್ರತಿ ಮನೆಗೆ 2 ಡಬ್ಬಿಗಳಂತೆ ಮೊದಲ ಹಂತದಲ್ಲಿ ವಿತರಣೆ ಮಾಡುವ ಯೋಜನೆ ಇದಾಗಿದೆ. ಈ ಹಿನ್ನೆಲೆಯಲ್ಲಿ ಫಲಾನುಭವಿಗಳನ್ನು ಗುರುತಿಸಿ ಪಟ್ಟಿ ಮಾಡಿ ವಿತರಣೆ ಮಾಡಿದರೆ ಸ್ವಚ್ಛತೆಯತ್ತ ದಿಟ್ಟ ಹೆಜ್ಜೆ ಇಟ್ಟಂತಾಗುತ್ತದೆ. ಆದರೆ ಪುರಸಭೆ ಅಧಿಕಾರಿಗಳ ನಿರ್ಲಕ್ಷ್ಯದಿಂದ ಕಸದ ಬುಟ್ಟಿಗಳು ಜನರ ಉಪಯೋಗಕ್ಕೆ ಬಾರದೆ ಆಗಿವೆ.
ಕಸ ಪ್ರತ್ಯೇಕಿಸುವ ಸವಾಲು:
‘ಮನೆ–ಮನೆಗಳಿಂದ ಕಸ ಸಂಗ್ರಹಿಸುವ ಆಟೊ ಟಿಪ್ಪರ್‌ಗಳಲ್ಲಿ ಸ್ವಚ್ಛತೆ ಜಾಗೃತಿಯ ಹಾಡುಗಳನ್ನು ನಿತ್ಯ ಪ್ರಸಾರ ಮಾಡಲಾಗುತ್ತದೆ. ಘನತ್ಯಾಜ್ಯವನ್ನು ಮೂಲದಲ್ಲೇ ಬೇರ್ಪಡಿಸಿ ಕೊಡುವುದರಿಂದ ಕಸದ ವಿಲೇವಾರಿ ಸುಲಭವಾಗುತ್ತದೆ. ಆದರೆ ಡಬ್ಬಿಗಳ ಕೊರತೆಯಿಂದ ಬಹುತೇಕ ಮನೆಯವರು ಹಸಿ ಮತ್ತು ಒಣ ಕಸವನ್ನು ಒಟ್ಟಿಗೆ ಕೊಡುವುದರಿಂದ ಅದನ್ನು ವಿಲೇವಾರಿ ಮಾಡಲು ಪೌರಕಾರ್ಮಿಕರು ಪರದಾಡುತ್ತಿದ್ದಾರೆ. ಕೂಡಲೇ ಕಸದ ಡಬ್ಬಿಗಳನ್ನು ಸಾರ್ವಜನಿಕರಿಗೆ ವಿತರಿಸಬೇಕು ಎಂದು ಸಾರ್ವಜನಿಕರು ಒತ್ತಾಯಿಸಿದ್ದಾರೆ.
ಡಬ್ಬಿಗಳು ಇಲ್ಲದ ಕಾರಣ ಪ್ಲಾಸ್ಟಿಕ್ ಚೀಲಗಳಲ್ಲಿ ಒಣ ಹಾಗೂ ಹಸಿಕಸ ಒಟ್ಟಿಗೆ ತುಂಬಿ ಇಡುತ್ತಿದ್ದು ಸಮಸ್ಯೆ ಉಂಟಾಗುತ್ತಿದೆ. ಸಾರ್ವಜನಿಕ ವಿತರಣೆಗೆ ಬಂದಿರುವ ಡಬ್ಬಿಗಳನ್ನು ಕೂಡಲೇ ವಿತರಿಸಬೇಕು ಎಂದು ಮಲ್ಲಮ್ಮ 12ನೇ ವಾರ್ಡ್ ನಿವಾಸಿಹೇಳಿದರು.