You are currently viewing BREAKING : ಅಲೆಮಾರಿ ಸಮುದಾಯಕ್ಕೆ 1% ಮೀಸಲಾತಿ..! : ಶಾಸಕ ಬಸವರಾಜ ರಾಯರೆಡ್ಡಿ 

BREAKING : ಅಲೆಮಾರಿ ಸಮುದಾಯಕ್ಕೆ 1% ಮೀಸಲಾತಿ..! : ಶಾಸಕ ಬಸವರಾಜ ರಾಯರೆಡ್ಡಿ 

ಪ್ರಜಾ ವೀಕ್ಷಣೆ ಸುದ್ದಿ : 

BREAKING : ಅಲೆಮಾರಿ ಸಮುದಾಯಕ್ಕೆ 1% ಮೀಸಲಾತಿ..! : ಶಾಸಕ ಬಸವರಾಜ ರಾಯರೆಡ್ಡಿ

ಕುಕನೂರು : ರಾಜ್ಯದಲ್ಲಿ ಒಳ ಮೀಸಲಾತಿ ವಿಷಯವಾಗಿ ಅಲೆಮಾರಿ ಸಮುದಾಯಕ್ಕೆ ಅನ್ಯಾಯವಾಗುತ್ತಿದೆ ಅವರಿಗೆ ಒಳ ಮೀಸಲಾತಿಯಲ್ಲಿ 1% ನೀಡಲು ಸರ್ಕಾರಕ್ಕೆ ತಿಳಿಸುವೆ ಎಂದು ಮುಖ್ಯಮಂತ್ರಿಗಳ ಆರ್ಥಿಕ ಸಲಹೆಗಾರ ಬಸವರಾಜ ರಾಯರೆಡ್ಡಿ ಹೇಳಿದರು.

 ಇಂದು ಕುಕನೂರು ಪಟ್ಟಣದ ಕುಂತಳನಗರದಲ್ಲಿ ಸುಡುಗಾಡು ಸಿದ್ಧರ ನೂತನ ಸಮುದಾಯ ಭವನದ ಅಡಿಗಲ್ಲು ಸಮಾರಂಭ ವೇದಿಕೆ ಕಾರ್ಯಕ್ರಮ ನಂತರ ತೆರಳುತ್ತಿರುವ ವೇಳೆ ಅಲೆಮಾರಿಗಳ ಸಮುದಾಕ್ಕೆ ಮೀಸಲಾತಿಯಲ್ಲಿ ತಮಗೆ ಅನ್ಯಾಯವಾಗುತ್ತಿದೆ ಎಂದು ಹೇಳುತ್ತಿದ್ದಂತೆ ತಮಗೆ 1% ಮೀಸಲಾತಿ ನೀಡಲು ಪ್ರಾಮಾಣಿಕ ಪ್ರಯತ್ನ ಮಾಡಲಾಗುವುದು ತಮಗೆ ಅನ್ಯಾಯವಾಗಲು ಬಿಡುವುದಿಲ್ಲ, ಈ ವಿಚಾರ ಮುಖ್ಯಮಂತ್ರಿಗಳ ಗಮನಕ್ಕೆ ಬಂದಿದ್ದು, ತಮಗೆ ಸರ್ಕಾರದ ಸೌಲಭ್ಯ ಒದಗಿಸುವ ಚಿಂತನೆ ನಡೆದಿದ್ದು, ಸದ್ಯದಲ್ಲೇ ಘೋಷಣೆ ಮಾಡಲಾಗುವುದು ಎಂದು ಹೇಳಿದರು.

Prajavikshane

Chandru R Bhanapaur

Leave a Reply

error: Content is protected !!