LOCAL NEWS : “ಕೊಪ್ಪಳ| ಚುಕ್ಕನಕಲ್ಲು ಗ್ರಾಮದ ಎಸ್ಸಿ ಕಾಲೋನಿಗೆ  ಮೂಲಸೌಕರ್ಯಕ್ಕಾಗಿ ಡಿಎಸ್‌ಎಸ್‌  (ಅಂಬೇಡ್ಕರ್ ಧ್ವನಿ) ಚಂದ್ರಕಾಂತ ಎಸ್ ಕಾದ್ರೋಳ್ಳಿ ಬಣ ಒತ್ತಾಯ”

You are currently viewing LOCAL NEWS : “ಕೊಪ್ಪಳ| ಚುಕ್ಕನಕಲ್ಲು ಗ್ರಾಮದ ಎಸ್ಸಿ ಕಾಲೋನಿಗೆ  ಮೂಲಸೌಕರ್ಯಕ್ಕಾಗಿ ಡಿಎಸ್‌ಎಸ್‌  (ಅಂಬೇಡ್ಕರ್ ಧ್ವನಿ) ಚಂದ್ರಕಾಂತ ಎಸ್ ಕಾದ್ರೋಳ್ಳಿ ಬಣ ಒತ್ತಾಯ”

“ಕೊಪ್ಪಳ| ಚುಕ್ಕನಕಲ್ಲು ಗ್ರಾಮದ ಎಸ್ಸಿ ಕಾಲೋನಿಗೆ  ಮೂಲಸೌಕರ್ಯಕ್ಕಾಗಿ ಡಿಎಸ್‌ಎಸ್‌  (ಅಂಬೇಡ್ಕರ್ ಧ್ವನಿ) ಚಂದ್ರಕಾಂತ ಎಸ್ ಕಾದ್ರೋಳ್ಳಿ ಬಣ ಒತ್ತಾಯ”

• ಪ್ರಜಾ ವೀಕ್ಷಣೆ ಡೆಸ್ಕ್‌ ನ್ಯೂಸ್‌ :

ಕೊಪ್ಪಳ : ತಾಲ್ಲೂಕಿನ ಬಹದ್ದೂರ್ ಬಂಡಿ ಗ್ರಾ. ಪಂ. ವ್ಯಾಪ್ತಿಯ ಚುಕ್ಕನಕಲ್ಲು ಗ್ರಾಮದ ಎಸ್ಸಿ ಕಾಲೋನಿಗೆ  ಶುದ್ದವಾದ ಕುಡಿಯುವ ನೀರು, ರಸ್ತೆ ಮತ್ತು ಒಳ ಚರಂಡಿ ವ್ಯವಸ್ಥೆ ನಿರ್ಮಿಸಲು  ಸೇರಿದಂತೆ ಹಲವು ಮೂಲಭೂತ ಸೌಕರ್ಯ ಒದಗಿಸಲು ಒತ್ತಾಯಿಸಿ  ದಲಿತ ಸಂಘರ್ಷ ಸಮಿತಿ (ಅಂಬೇಡ್ಕರ್ ಧ್ವನಿ) ಚಂದ್ರಕಾಂತ ಎಸ್ ಕಾದ್ರೋಳ್ಳಿ ಬಣ ಜಿಲ್ಲಾ ಸಮಿತಿ ವತಿಯಿಂದ  ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ  ವರ್ಣೀತ ನೇಗಿ ಅವರಿಗೆ ಶುಕ್ರವಾರ ಮನವಿ ಪತ್ರ ಸಲ್ಲಿಸಿದರು. 

ಈ ವೇಳೆ  ದಸಂಸ (ಅಂಬೇಡ್ಕರ್ ಧ್ವನಿ) ಕಾದ್ರೋಳ್ಳಿ ಬಣ ದ ಜಿಲ್ಲಾಧ್ಯಕ್ಷ  ನಿಂಗಪ್ಪ ಜಿ.ಎಸ್. ಬೆಣಕಲ್ ಅವರು ಮಾತನಾಡಿ, ಚುಕ್ಕನಕಲ್ಲು ಗ್ರಾಮದ ಎಸ್ಸಿ ಕಾಲೋನಿಗೆ ಹಲವಾರು ವರ್ಷಗಳಿಂದ ಶುದ್ದವಾದ ಕುಡಿಯುವ ನೀರಿಲ್ಲ, ಓಡಾಡಲು ಜನರಿಗೆ ಸರಿಯಾದ ರಸ್ತೆಯಿಲ್ಲ ಮತ್ತು  ಒಳಚರಂಡಿ  ವ್ಯವಸ್ಥೆಯಿಲ್ಲದೇ  ಚರಂಡಿ ನೀರು ರಸ್ತೆ ಮೇಲೆ ಹರಿದು ಸಾರ್ವಜನಿಕರಿಗೆ ತೊಂದರೆ ಆಗುತ್ತಿದೆ. ಸೊಳೆಗಳ ಕಾಟ ಹೆಚ್ಚಾಗಿದೆ, ಅಲ್ಲದೇ ರೋಗರುಜಿನಗಳ ಭೀತಿ ಉಲ್ಬಣಗೊಂಡಿದೆ. ಹೀಗೆ ಹಲವು ಸಮಸ್ಯೆಗಳಿಂದ ಜನರು ತತ್ತರಿಸಿ  ಹೋಗಿದ್ದಾರೆ ಎಂದು ಆಗ್ರಹಿಸಿ ಎರಡು ಹಿಂದೆ ಹಲವು ಬಾರಿ  ಬಹದ್ದೂರ್ ಬಂಡಿ ,ಪಿಡಿಒ ಮತ್ತು  ತಾಲ್ಲೂಕು ಪಂಚಾಯಿತಿ ಇಓ ಅವರಿಗೆ ಮನವಿ ಪತ್ರ ನೀಡಿದರೂ ಯಾವದೇ ಪ್ರಯೋಜನ ಆಗಿಲ್ಲ ಮತ್ತು ಎಂದೂ ಆಕ್ರೋಶ ವ್ಯಕ್ತಪಡಿಸಿದರು.

ಹೀಗಾಗಿ  ಸ್ಥಳಿಯ ಅಧಿಕಾರಿಗಳು ಯಾವುದೇ ರೀತಿಯ ಸ್ಪಂದನೆ ನೀಡದ ಕಾರಣ, ಚುಕ್ಕನಕಲ್ಲು ಗ್ರಾಮದ  ಮೂಲಭೂತ ಸಮಸ್ಯೆಗಳ ಪರಿಹಾರಕ್ಕಾಗಿ ಕ್ರಮ ಕೈಗೊಳ್ಳಲು  ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ವರ್ಣೀತ ವೇಗಿ ಅವರಿಗೆ  ಮನವಿ ಪತ್ರ ನೀಡಿದ್ದೆವು ಎಂದರು. ಈ ಮನವಿಗೆ ಸ್ಪಂದಿಸಿ ಕೂಡಲೇ ಸಮಸ್ಯೆ ಬಗೆಹರಿಸಲು ಭರವಸೆ ನೀಡಿದರು ಎಂದು ಹೇಳಿದರು. 

ನಿಯೋಗದಲ್ಲಿ ಸಂಘಟನೆಯ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಕರಿಯಪ್ಪ ಮಣ್ಣಿನವರ, ಜಿಲ್ಲಾ ಸಂಚಾಲಕ ಮೈಲಪ್ಪ ಮಾದಿನೂರು, ಮಹಿಳಾ ಘಟಕ ಜಿಲ್ಲಾಧ್ಯಕ್ಷೆ  ಶಶಿಕಲಾ ಮಠದ, ಯಲಬುರ್ಗಾ ತಾಲ್ಲೂಕು ಉಪಾಧ್ಯಕ್ಷ   ವೀರೇಶ್ ದೊಡ್ಡಮನಿ,  ಚೈತ್ರಾ ಚುಕ್ಕನಕಲ್ಲು, ವಿದ್ಯಾಶ್ರೀ ಚುಕ್ಕನಕಲ್ಲು ಮತ್ತು ಲಕ್ಷ್ಮೀ ಚುಕ್ಕನಕಲ್ಲು ಸೇರಿದಂತೆ ಹಲವರು ಹಾಜರಿದ್ದರು.

Leave a Reply

error: Content is protected !!