ಪ್ರಜಾವೀಕ್ಷಣೆಯ ಸೂಕ್ಷ್ಮ ನೋಟ :
LOCAL EXPRESS : ಶೀತಲಾವಸ್ಥೆಗೊಂಡ ಮಂಗಳೂರು ನಾಡ ಕಾರ್ಯಾಲಯ ಕಟ್ಟಡ : ಸಿಬ್ಬಂದಿ & ಸಾರ್ವಜನಿಕರ ಗೋಳು ಕೇಳುವರ‍್ಯಾರು?

ಕುಕನೂರು : ತಾಲೂಕಿನ ಹೋಬಳಿ ಕೇಂದ್ರವಾಗಿರುವ ಮಂಗಳೂರು ಗ್ರಾಮದಲ್ಲಿ ಕಾರ್ಯನಿರ್ವಹಿಸುತ್ತಿರುವ ಉಪತಹಸಿಲ್ದಾರರ ನಾಡ ಕಾರ್ಯಾಲಯದ ಕಟ್ಟಡ ಸಂಪೂರ್ಣ ಶಿತಲಾವಸ್ಥೆಗೊಂಡಿದ್ದು ಕಾರ್ಯಾಲಯದ ಸಿಬ್ಬಂದಿಗಳು ಅಂಗೈಯಲ್ಲಿ ಪ್ರಾಣ ಹಿಡಿದುಕೊಂಡು ಕಾರ್ಯನಿರ್ವಹಿಸುವ ಪರಿಸ್ಥಿತಿ ಎದುರಾಗಿದೆ.
ಮಂಗಳೂರು ಕಂದಾಯ ಹೋಬಳಿಗೆ ಸುಮಾರು 22 ಗ್ರಾಮಾ ಗಳು ಒಳಪಡುತ್ತಿದ್ದು ಹೋಬಳಿಯಾಗಿ ಅರ್ಧ ಶತಮಾನಗಳ ಕಳೆದು ಹೋಗಿದೆ. ಗ್ರಾಮದಲ್ಲಿ ಉಪತಹಸಿಲ್ದಾರರ ಕಾರ್ಯಾಲಯ ಪ್ರಾರಂಭವಾಗಿ 13 ವರ್ಷ ಗತಿಸಿದ್ದರು ಸಹ ಇದುವರೆಗೂ ಹೋಬಳಿ ಕೇಂದ್ರದಲ್ಲಿ ಕಂದಾಯ ಇಲಾಖೆ ಕಾರ್ಯಾಲಯಕ್ಕೆ ಸಂಬಂಧಿಸಿದಂತೆ ಸುಸಜ್ಜಿತ ಕಟ್ಟಡ ಲಭ್ಯವಾಗಿರುವುದಿಲ್ಲ.
ಪ್ರಸಕ್ತವಾಗಿ ಕಾರ್ಯನಿರ್ವಹಿಸುತ್ತಿರುವ ನಾಡ ಕಾರ್ಯವು ಸಂಪೂರ್ಣವಾಗಿ ಬೀಳುವ ಹಂತ ತಲುಪಿದ್ದು ಜೊತೆಗೆ ಕಾರ್ಯಾಲಯದಲ್ಲಿ ಯಾವುದೇ ಮೂಲಸೌಕರ್ಯಗಳಿಲ್ಲ ಸೌಲಭ್ಯ ಹೊಂದಿರುವುದಿಲ್ಲ ಸಾರ್ವಜನಿಕರಿಗೆ ಪೂರಕವಾದ ಅಂತಹ ವಾತಾವರಣವು ಸಹ ಇಲ್ಲದೆ ದಿನನಿತ್ಯದ ಕಾರ್ಯಗಳಿಗೆ ಕಾರ್ಯ ಇಲಾಖೆ ಆಗಮಿಸುವ ಸಾರ್ವಜನಿಕರು ಭಯದ ವಾತಾವರಣದಲ್ಲಿಯೇ ಕಾರ್ಯಾಲಯದ ಒಳಗೆ ಹೋಗಿ ತಮ್ಮ ಕೆಲಸ ಕಾರ್ಯಗಳನ್ನು ಮುಗಿಸಿಕೊಂಡು ಬರುವ ಪರಿಸ್ಥಿತಿ ನಿರ್ಮಾಣಗೊಂಡಿರುತ್ತದೆ.
ಮಂಗಳೂರು ಗ್ರಾಮದಲ್ಲಿ ನಾಡ ಕಾರ್ಯಾಲಯ ಕಾರ್ಯನಿರ್ವಹಿಸುತ್ತಿರುವ ಕಟ್ಟಡದಲ್ಲಿ ಎಪ್ಪತ್ತು ವರ್ಷಗಳ ಹಳೆಯ ಕಟ್ಟಡವಾಗಿದ್ದು ಮೊದಲು ಪ್ರಾಥಮಿಕ ಆರೋಗ್ಯ ಕೇಂದ್ರ ಅಸ್ತಿತ್ವದಲ್ಲಿತ್ತು. ಆಸ್ಪತ್ರೆಗೆ ಸುಸಜ್ಜಿತ ನೂತನವಾದ ಕಟ್ಟಡ ಲಭ್ಯವಾದ್ದರಿಂದ ನೂತನ ಕಟ್ಟಡಕ್ಕೆ ಆರೋಗ್ಯ ಕೇಂದ್ರ ಸ್ಥಳಾಂತರ ಗೊಂಡಿದ್ದು. ಖಾಲಿ ಇರುವ ಕಟ್ಟಡದಲ್ಲಿಯೇ ನಾಡ ಕಾರ್ಯಾರಂಭ ಮಾಡಲಾಯಿತು. ಕಟ್ಟಡದ ಮೇಲ್ಚಾವಣಿ ಸಂಪೂರ್ಣ ಶೀತಲಾವಸ್ತೆಗೊಂಡಿದ್ದು ಮೇಲ್ಚಾವಣಿಯಿಂದ ಪ್ರತಿದಿನ ಜಲ್ಲಿಕಲ್ಲು, ಉಸುಕು ಹಾಕು ಸಿಮೆಂಟ್ ಉದುರುತ್ತಿದ್ದು ಮೇಲ್ಚಾವಣಿಗೆ ಬಳಸಲಾಗಿದ್ದ ಕಬ್ಬಿಣವು ಹೊರಗಡೆ ಕಾಣಲಾರಂಭಿಸಿದ್ದು ಕಟ್ಟಡ ಕೃಷಿಯು ಹಂತಕ್ಕೆ ತಲುಪಿದೆ.
ರಾಜ್ಯದಲ್ಲಿಯೇ ಅಭಿವೃದ್ಧಿ ಹರಿಕಾರ ಎಂದು ಪ್ರಸಿದ್ದು ಹೊಂದಿರುವ ಶಾಸಕ ಬಸವರಾಜ ರಾಯರೆಡ್ಡಿ ಪ್ರತಿನಿಧಿಸುವ ಕ್ಷೇತ್ರದಲ್ಲಿಯೇ ಇಂತಹ ಕಟ್ಟಡದಲ್ಲಿ ಸರ್ಕಾರಿ ಕಾರ್ಯಾಲಯ ಸಾರ್ವಜನಿಕ ಸೇವೆ ನೀಡುತ್ತಿರುವುದು ನಿಜಕ್ಕೂ ಆಶ್ಚರ್ಯಕರ ಸಂಗತಿಯಾಗಿದ್ದು ಇನ್ನು ಮುಂದೆಯಾದರೂ ಸಂಬಂಧಪಟ್ಟ ಅಧಿಕಾರಿಗಳು ಹಾಗೂ ಜನಪ್ರತಿನಿಧಿಗಳು ಎಚ್ಚೆತ್ತುಕೊಂಡು ಸುಸಜ್ಜಿತ ಕಟ್ಟಡಕ್ಕೆ ಕಾರ್ಯಾಲಯ ಸ್ಥಳಾಂತರ ಗೊಳಿಸುವರೇ ಎಂಬುದು ಸಾರ್ವಜನಿಕರ ಯಕ್ಷಪ್ರಶ್ನೆಯಾಗಿದೆ.
“ಯಲಬುರ್ಗಾ ವಿಧಾನಸಭಾ ಕ್ಷೇತ್ರದ ಮಂಗಳೂರು ಗ್ರಾಮದ ಉಪತಹಸಿಲ್ದಾರರ ಕಾರ್ಯಾಲಯಕ್ಕೆ ಹೋಗಬೇಕೆಂದರೆ ಜೀವ ಕೈಯಲ್ಲಿ ಹಿಡಿದುಕೊಂಡು ಭಯದ ವಾತಾವರಣದಿಂದ ಹೋಗುವ ಅನಿವಾರ್ಯತೆ ಎದುರಾಗಿದ್ದು ರಾಜ್ಯದಲ್ಲಿಯೇ ಅಭಿವೃದ್ಧಿ ಹರಿಕಾರ ಎಂಬ ಕೀರ್ತಿ ಮೂಡಿಗೇರಿಸಿಕೊಂಡ ಮುಖ್ಯಮಂತ್ರಿಗಳ ಆರ್ಥಿಕ ಸಲಹೆಗಾರ, ಶಾಸಕರು ಇತ್ತ ಕಡೆ ಗಮನಹರಿಸಿ ಶೀಘ್ರದಲ್ಲಿ ಸೂಕ್ತ ಕ್ರಮ ಕೈಗೊಳ್ಳಲಿ ಎಂದು ಆಗ್ರಹ ಪಡಿಸುವೆ”
ಮಲ್ಲನಗೌಡ ಕೋನನಗೌಡ್ರು, ಜಿಲ್ಲಾ ವಕ್ತಾರರು, ಜೆಡಿಎಸ್ ಪಕ್ಷ ಕೊಪ್ಪಳ
“ಮಂಗಳೂರು ಗ್ರಾಮದ ನಾಡ ಕಾರ್ಯಾಲಯ ಕಾರ್ಯನಿರ್ವಹಿಸುತ್ತಿರುವ ಕಟ್ಟಡ ಮೂಲತಹ ಆರೋಗ್ಯ ಇಲಾಖೆಗೆ ಸಂಬಂಧಪಟ್ಟದ್ದು ನಾಡ ಕಾರ್ಯಾಲಯಕ್ಕಾಗಿ ನೂತನ ಕಟ್ಟಡ ನಿರ್ಮಾಣ ಕುರಿತು ಹಾಲಪ್ಪ ಆಚಾರ್ ಅವರ ಆಡಳಿತ ಅವಧಿಯಲ್ಲಿ ಪರಿಶೀಲನೆ ನಡೆಸಿ ರೂಪರೇಷೆಗಳು ಸಿದ್ಧಗೊಂಡಿದ್ದು ಸರ್ಕಾರದಿಂದ ಅನುದಾನ ಬರುವುದು ವಿಳಂಬವಾಗಿದ್ದು ಹಾಲಪ್ಪ ಆಚಾರ್ ಅವರ ಆಡಳಿತವಾಗಿ ಪೂರ್ಣಗೊಂಡ ಪರಿಣಾಮ ರೂಪರೇಶ ಸ್ಥಗಿತಗೊಂಡಿದ್ದು ನಂತರ ಯಾವುದೇ ಬೆಳವಣಿಗೆಗಳು ನಡೆದರ ಪರಿಣಾಮ ಹಳೆಯ ಕಟ್ಟಡದಲ್ಲೇ ಕಾರ್ಯಾಲಯ ಮುಂದುವರಿಯಬೇಕಾದ ಪರಿಸ್ಥಿತಿ ನಿರ್ಮಾಣಗೊಂಡಿದೆ “
ವಿಶ್ವನಾಥ ಮರಿಬಸಪ್ಪನವರ್
ತಾಲೂಕ ಪಂಚಾಯಿತಿ ಮಾಜಿ ಉಪಾಧ್ಯಕ್ಷ.
“ಕಂದಾಯ ಹೋಬಳಿ ಕೇಂದ್ರ ಮಂಗಳೂರಿನಲ್ಲಿ ಇರುವ ನಾಡಕಚೇರಿ ಸಂಪೂರ್ಣವಾಗಿ ಬೀಳುವ ಹಂತ ತಲುಪಿದ್ದು, 2022 ರಿಂದ ಶಾಸಕರು ಸೇರಿದಂತೆ ಅಧಿಕಾರಿಗಳಿಗೂ ಹಾಗೂ ಜನಪ್ರತಿನಿಧಿಗಳಿಗೂ ನೂತನ ಕಟ್ಟಡದ ಬೇಡಿಕೆ ಸಲ್ಲಿಸಿದ್ದರು ಸಹ ಇದುವರೆಗೂ ಯಾವುದೇ ಪರಿಹಾರ ದೊರೆತಿರುವುದಿಲ್ಲ ಶಾಸಕರು ಇದರ ಕಡೆ ಗಮನಹರಿಸುವರು ಎಂಬ ನಂಬಿಕೆಯಿಂದ ಎದುರು ನೋಡುತ್ತಿದ್ದೇವೆ “
*ಆನಂದ ಬಂಡಿ, ಅಧ್ಯಕ್ಷರು ಕರುನಾಡ ಯುವ ಸೇನೆ ಮಂಗಳೂರು*