LOCAL EXPRESS : ಅಭಿವೃದ್ಧಿ ಹರಿಕಾರ ಶಾಸಕ ಬಸವರಾಜ ರಾಯರೆಡ್ಡಿಯವರ ಕ್ಷೇತ್ರದಲ್ಲಿ ರಸ್ತೆಗಳಿಗಿಲ್ಲ ಅಭಿವೃದ್ಧಿ..!!

You are currently viewing LOCAL EXPRESS : ಅಭಿವೃದ್ಧಿ ಹರಿಕಾರ ಶಾಸಕ ಬಸವರಾಜ ರಾಯರೆಡ್ಡಿಯವರ ಕ್ಷೇತ್ರದಲ್ಲಿ ರಸ್ತೆಗಳಿಗಿಲ್ಲ ಅಭಿವೃದ್ಧಿ..!!

ಪ್ರಜಾವೀಕ್ಷಣೆ ಸೂಕ್ಷ್ಮ ನೋಟ :

LOCAL EXPRESS : ಅಭಿವೃದ್ಧಿ ಹರಿಕಾರ ಶಾಸಕ ಬಸವರಾಜ ರಾಯರೆಡ್ಡಿಯವರ ಕ್ಷೇತ್ರದಲ್ಲಿ ರಸ್ತೆಗಳಿಗಿಲ್ಲ ಅಭಿವೃದ್ಧಿ..!!

ಕುಕನೂರು : ಅಭಿವೃದ್ಧಿ ಹರಿಕಾರ ಎಂದು ಪ್ರಸಿದ್ಧಿ ಹೊಂದಿರುವ ಬಸವರಾಜ ರಾಯರೆಡ್ಡಿ ಪ್ರತಿನಿಧಿಸುವ ಯಲಬುರ್ಗಾ ವಿಧಾನಸಭಾ ಕ್ಷೇತ್ರದಲ್ಲಿ ತಗ್ಗು ಗುಂಡಿಗಳಿಂದ ತುಂಬಿರುವ ರಸ್ತೆಗಳು ಜನರ ಪರದಾಟಕ್ಕೆ ಸಾಕ್ಷಿಯಾಗಿವೆ.

ಒಂದೆಡೆ ಸ್ವತಃ ರಾಜ್ಯದ ಮುಖ್ಯಮಂತ್ರಿಗಳೇ ಯಲಬುರ್ಗಾ ಕ್ಷೇತ್ರದಲ್ಲಿ ಆದಂತಹ ಅಭಿವೃದ್ಧಿಗಳು ನನ್ನ ಕ್ಷೇತ್ರದಲ್ಲಿಯೂ ಆಗಿಲ್ಲ ಎಂದು ಹೇಳಿಕೊಳ್ಳುತ್ತಿದ್ದರೆ ಇಂತ ಕಡೆ ಅಭಿವೃದ್ಧಿ ಕಾಣದೆ ಇರುವ ತಗ್ಗು ಗುಂಡಿಗಳಿಂದ ತುಂಬಿರುವ ರಸ್ತೆಯಿಂದ ಸಾರ್ವಜನಿಕರು ಗೋಳಾಡುತ್ತಿರುವ ಪರಿಸ್ಥಿತಿ ನಿರ್ಮಾಣಗೊಂಡಿದ್ದು ಯಾವ ಜನಪ್ರತಿನಿಧಿಗಳು ಹಾಗೂ ಅಧಿಕಾರಿಗಳು ನಮಗೆ ಸಂಬಂಧವಿಲ್ಲ ಎಂಬಂತೆ ಜಾಣ ಕುರುಡ ರಾಗಿರುವ ಪರಿಸ್ಥಿತಿ ಕುಕನೂರು ತಾಲೂಕಿನ ನೆಲಗೇರಿಯಿಂದ ವಟಪರವಿ ಗ್ರಾಮಕ್ಕೆ ಸಂಪರ್ಕ ಕಲ್ಪಿಸುವ ರಸ್ತೆ ನಿರ್ಮಾಣಗೊಂಡಿದ್ದು ಈ ರಸ್ತೆಯಲ್ಲಿ ಸಂಚರಿಸುವ ಪ್ರತಿಯೊಬ್ಬರು ಸರ್ಕಾರ, ಜನಪ್ರತಿನಿಧಿಗಳು ಹಾಗೂ ಅಧಿಕಾರಿಗಳಿಗೆ ಇಡಿ ಶಾಪ ಹಾಕುತ್ತಾ ಸಾಗುವುದು ಸರ್ವೇಸಾಮಾನ್ಯವಾದ ಸಂಗತಿಯಾಗಿದೆ.

ಈ ರಸ್ತೆಯಲ್ಲಿ ಸಾಕಷ್ಟು ಜನ ವಿದ್ಯಾರ್ಥಿಗಳು ಹಾಗೂ ವ್ಯಾಪಾರಸ್ಥರು ಸೇರಿದಂತೆ ಅನೇಕ ಸಾರ್ವಜನಿಕರು ದಿನನಿತ್ಯ ಓಡಾಡುತ್ತಿದ್ದು ಪ್ರತಿದಿನವೂ ರಸ್ತೆಯಲ್ಲಿ ಚಲಿಸಬೇಕಾದರೆ ಆ ಭಗವಂತನ ಹೆಸರು ಹೇಳಿಕೊಂಡು ವಾಹನ ಚಲಾಯಿಸಬೇಕಾದ ಪರಿಸ್ಥಿತಿ ನಿರ್ಮಾಣಗೊಂಡಿದ್ದು ಸಂಬಂಧಪಟ್ಟ ಅಧಿಕಾರಿಗಳು ಯಾವಾಗ ಈ ಕಡೆ ಕಣ್ಣು ತೆರೆಯುತ್ತಾರೋ ಎಂದು ಎದುರು ನೋಡುತ್ತಿದ್ದಾರೆ.

ತಾಲೂಕಿನ ವಟಪರ್ವಿ ಗ್ರಾಮದಿಂದ ಶಾಲಾಕಾಲೇಜು ಹಾಗೂ ಇತರ ಉದ್ದೇಶದಿಂದ ವಿದ್ಯಾರ್ಥಿಗಳು ಹಾಗೂ ಸಾರ್ವಜನಿಕರು ತೆರಳುವ ವೇಳೆ ಈ ತಗ್ಗು ಗುಂಡಿಗಳು ಎದುರಾಗುತ್ತಿದ್ದು ಇದಕ್ಕೆಲ್ಲ ವಟಪರವಿ ಗ್ರಾಮದ ಚರಂಡಿ ನೀರು ಮುಂದೆ ಸಾಗದೆ ನಿಂತಿರುವುದು ರಸ್ತೆ ಹಾಳಾಗಲು ಪ್ರಮುಖ ಕಾರಣ ಎಂದು ಹೇಳಲಾಗುತ್ತಿದ್ದು ಗ್ರಾಮದ ಹೊರವಲಯದಲ್ಲಿ ಕೃಷಿ ಜಮೀನಿನ ರೈತರು ಚರಂಡಿ ನೀರನ್ನು ಮುಂದೆ ಸಾಗದಂತೆ ಅಡ್ಡಲಾಗಿ ವಡ್ಡು ನಿರ್ಮಾಣ ಮಾಡಿರುವುದೇ ಇದಕ್ಕೆಲ್ಲ ಪ್ರಮುಖ ಕಾರಣ ಎಂದು ಸಾರ್ವಜನಿಕರು ಹೇಳುತ್ತಿದ್ದು ಇದಕ್ಕೆ ಸಂಬಂಧಪಟ್ಟ ಅಧಿಕಾರಿಗಳು ಕ್ರಮ ವಹಿಸದೇ ಇರುವುದು ಸಾರ್ವಜನಿಕರ ಪರದಾಟಕ್ಕೆ ಕಾರಣವಾಗಿದೆ ಎಂದು ಗ್ರಾಮಸ್ಥರು ಆರೋಪ ಮಾಡಿರುತ್ತಾರೆ.

ಸಮಸ್ತೆ ಯಾವುದೇ ಕಾರಣದಿಂದ ಅಥವಾ ಯಾರಿಂದಲೇ ಸೃಷ್ಟಿಯಾಗಿರಲಿ, ಸಮಸ್ಯೆಯನ್ನು ನಿವಾರಣೆಗೊಳಿಸಿ ಸಾರ್ವಜನಿಕರಿಗೆ ಸುಗಮ ಸಂಚಾರಕ್ಕೆ ಅನುಕೂಲ ಮಾಡಿಕೊಡಬೇಕಾದ ಇಲಾಖೆಗಳು ಜಾಣ ಕೂಡುತನ ಅನುಸರಿಸುತ್ತಿರುವುದು ಸಾರ್ವಜನಿಕರ ಆಕ್ರೋಶಕ್ಕೆ ಕಾರಣವಾಗಿದ್ದು, ಸಮಸ್ಯೆ ಪರಿಹಾರಕ್ಕೆ ಅಧಿಕಾರಿಗಳು ಕಾರ್ಯಪ್ರವೃತ್ತರಾಗುವುದನ್ನು ಎದುರು ನೋಡುತ್ತಿದ್ದಾರೆ.

“ಪಟಪರವಿ ಗ್ರಾಮದಿಂದ ನೆಲಜೇರಿ ಗ್ರಾಮಕ್ಕೆ ಸಂಪರ್ಕ ಕಲ್ಪಿಸುವ ರಸ್ತೆ ಪಕ್ಕದಲ್ಲಿರುವ ಕೃಷಿ ಜಮೀನಿನ ಮಾಲೀಕರಾದ ರೈತರು ಚರಂಡಿ ನೀರು ಹರಿದುಹೋಗುವ ಮಾರ್ಗಕ್ಕೆ ಅಡ್ಡಲಾಗಿ ಒಡ್ಡು ಹಾಕಿರುವುದರ ಪರಿಣಾಮ ಚರಂಡಿ ನೀರೆಲ್ಲ ರಸ್ತೆಗೆ ಬಂದು ರಸ್ತೆ ಹಾಳಾಗಲು ಕಾರಣವಾಗಿದೆ. ಸಂಬಂಧಪಟ್ಟ ಅಧಿಕಾರಿಗಳಾದ ತಾಸಿಲ್ದಾರರು ಹಾಗೂ ಲೋಕೋಪಯೋಗಿ ಇಲಾಖೆ ಅಧಿಕಾರಿಗಳಿಗೆ ಮನವಿ ಸಲ್ಲಿಸಿದರು ಸಹ ಕಾರ್ಯಪ್ರವೃತ್ತರಾಗದೇ ಇರುವುದು ಆಶ್ಚರ್ಯವನ್ನುಂಟು ಮಾಡಿದೆ”

ಶೇಖರಪ್ಪ ಕೊಳಜಿ ಹಾಗೂ ಹನುಮಂತಪ್ಪ ಬಡಿಗೇರ, ವಟಪರ್ವಿ ಗ್ರಾಮದ ಸದಸ್ಯರು, ಗ್ರಾಮ ಪಂಚಾಯಿತಿ ಕಾರ್ಯಾಲಯ ನೆಲಜೇರಿ

“ಚರಂಡಿ ನೀರು ಮುಂದೆ ಸಾಗದೆ ಶೇಖರಣೆಗೊಂಡ ರಸ್ತೆ ಜಲಾವೃತಗೊಂಡಿದ್ದು, ರಸ್ತೆ ತಗ್ಗು ಗುಂಡಿಗಳಿಂದ ನಿರ್ಮಾಣಗೊಂಡಿದೆ, ಚರಂಡಿ ನೀರು ಮುಂದೆ ಸಾಗದಂತೆ ಚರಂಡಿಗೆ ಒಡ್ಡು ಹಾಕಿರುವ ರೈತರೊಂದರಿಗೆ ಹಲವು ಬಾರಿ ಮಾತನಾಡಿದ್ದರೂ ಸಹ ರೈತರು ಸ್ಪಂದಿಸದೆ ಯಾವುದೇ ರೀತಿಯ ಪ್ರಯೋಜನವಾಗುತ್ತಿಲ್ಲ ಜೊತೆಗೆ ಲೋಕೋಪಯೋಗಿ ಇಲಾಖೆ ಹಾಗೂ ಉಪತಹಸಿಲ್ದಾರರಿಗೆ ಮನವಿ ಸಲ್ಲಿಸಲಾಗಿದ್ದು ಶೀಘ್ರದಲ್ಲಿ ಸಮಸ್ಯೆ ಇತ್ಯರ್ಥ ಗೊಳಿಸುವ ಪ್ರಯತ್ನ ನಿರಂತರವಾಗಿ ಮಾಡುತಿದ್ದೇವೆ” 

ಪರಶುರಾಮ ನಾಯಕ
ಅಭಿವೃದ್ಧಿ ಅಧಿಕಾರಿಗಳು ಗ್ರಾಮ ಪಂಚಾಯತಿ ಕಾರ್ಯಾಲಯ ನೆಲಜೇರಿ

Leave a Reply

error: Content is protected !!