RCB vs PBKS : ಪಂಜಾಬ್ ಕಿಂಗ್ಸ್‌ ವಿರುದ್ಧ ಆರ್‌ಸಿಬಿಗೆ 24 ರನ್‌ಗಳ ಜಯ..!

You are currently viewing RCB vs PBKS : ಪಂಜಾಬ್ ಕಿಂಗ್ಸ್‌ ವಿರುದ್ಧ ಆರ್‌ಸಿಬಿಗೆ 24 ರನ್‌ಗಳ ಜಯ..!

ಇಂದು ಐಪಿಎಲ್‌ನ 27 ನೇ ಪಂದ್ಯವು ಪಂಜಾಬ್ ಕಿಂಗ್ಸ್‌ ವಿರುದ್ಧ ರಾಯಲ್ ಚಾಲೆಂಜರ್ಸ್ ಬೆಂಗಳೂರು ರನ್‌ಗಳ ಜಯ ಸಾಧಿಸಿದೆ. ಮೊದಲು ಬ್ಯಾಟ್ ಮಾಡಿದ ರಾಯಲ್ ಚಾಲೆಂಜರ್ಸ್ ಬೆಂಗಳೂರು 174 ರನ್‌ ಬಾರಿಸಿ, ಪಂಜಾಬ್ ಕಿಂಗ್ಸ್‌ಗೆ 175 ರನ್‌ಗಳ ಗುರಿ ನೀಡಿತ್ತು. ಈ ಗುರಿ ಬೆನ್ನತ್ತಿದ ಪಂಬಾಬ್‌ ನಿಗದಿತ ಓವರ್‌ನಲ್ಲಿ ತನ್ನಲ್ಲಾ ವಿಕೆಟ್‌ ಕಳೆದುಕೊಂಡು 154 ರನ್‌ ಗಳಿಸಲಷ್ಟೆ ಶಕ್ತವಾಯಿತು. ಪಂಜಾಬ್ ಕಿಂಗ್ಸ್‌ ಪರ ಪ್ರಭಾಸಿಮ್ರಾನ್ 46, ಜಿತೇಶ್‌ 41, ರನ್‌ಗಳಿಸಿದ್ದಾರೆ. ಬೌಲಿಂಗ್‌ನಲ್ಲಿ ಪಂಜಾಬ್ ಕಿಂಗ್ಸ್‌ ಪರ ಹರ್‌ಪ್ರೀತ್ 2, ನಾಥನ್ 1 ವಿಕೆಟ್‌ ಪಡೆದರು. ರಾಯಲ್ ಚಾಲೆಂಜರ್ಸ್ ಬೆಂಗಳೂರು ಪರ ಬ್ಯಾಟಿಂಗ್‌ನಲ್ಲಿ ಫಾಫ್ ಡು ಪ್ಲೆಸಿಸ್ 84, ವಿರಾಟ್ ಕೊಹ್ಲಿ, 59 ರನ್‌ ಗಳಿಸಿದರು. ಅದೇ ರೀತಿಯಲ್ಲಿ ಬೌಲಿಂಗ್‌ ಅದ್ಬುತ್ ದಾಳಿ ಮಾಡಿದ ರಾಯಲ್ ಚಾಲೆಂಜರ್ಸ್ ಬೆಂಗಳೂರು ಬೌಲರ್ಸ್‌ಗಳು ಸಿರಾಜ್ 4, ಹಸರಂಗ 2, ಹರ್ಷಲ್ ಪಟೇಲ್ 1 ವಿಕೆಟ್‌ ಪಡೆದರು.

RCB vs PBKS

ಪಂಜಾಬ್ ಕಿಂಗ್ಸ್‌ ಪ್ಲೇಯಿಂಗ್‌ 11 :ಅರ್ಥವ್ ಟೈಡೆ, ಮ್ಯಾಥ್ಯೂ ಶಾರ್ಟ್, ಹರ್‌ಪ್ರೀತ್ ಸಿಂಗ್ , ಲಿವಿಂಗ್‌ಸ್ಟನ್, ಸ್ಯಾಮ್ ಕರನ್, ಜಿತೇಶ್ ಶರ್ಮಾ, ಶಾರುಖ್ ಖಾನ್, ಹರ್‌ಪ್ರೀತ್ ಬ್ರಾರ್, ನಾಥನ್ ಎಲ್ಲಿಸ್, ರಾಹುಲ್ , ಅರ್ಷ್‌ದೀಪ್.

ರಾಯಲ್ ಚಾಲೆಂಜರ್ಸ್ ಬೆಂಗಳೂರು ಪ್ಲೇಯಿಂಗ್‌ 11 : ಫಾಫ್ ಡು ಪ್ಲೆಸಿಸ್, ವಿರಾಟ್ ಕೊಹ್ಲಿ, ಮಹಿಪಾಲ್ ಲೋಮ್ರೋರ್, ಗ್ಲೆನ್ ಮ್ಯಾಕ್ಸ್‌ವೆಲ್, ಶಹಬಾಜ್ ಅಹ್ಮದ್, ದಿನೇಶ್ ಕಾರ್ತಿಕ್, ಸುಯಶ್, ಪಾರ್ನೆಲ್, ಹಸರಂಗ, ಹರ್ಷಲ್ ಪಟೇಲ್, ಸಿರಾಜ್.

Leave a Reply

error: Content is protected !!