BREKING NEWS: “ಬಿಗ್‌ ಬಾಸ್‌ ವೀಕ್ಷಕರಿಗೆ ಗುಡ್‌ ನ್ಯೂಸ್‌ : ಜಾಲಿವುಡ್​​​ ಸ್ಟುಡಿಯೋ ಬೀಗ ತೆರೆಯಲು ಡಿಸಿಎಂ ಡಿಕೆಶಿ ಬೆಂ.ದಕ್ಷಿಣ ಡಿಸಿಗೆ ಸೂಚನೆ”

You are currently viewing BREKING NEWS: “ಬಿಗ್‌ ಬಾಸ್‌ ವೀಕ್ಷಕರಿಗೆ ಗುಡ್‌ ನ್ಯೂಸ್‌ : ಜಾಲಿವುಡ್​​​ ಸ್ಟುಡಿಯೋ ಬೀಗ ತೆರೆಯಲು ಡಿಸಿಎಂ ಡಿಕೆಶಿ ಬೆಂ.ದಕ್ಷಿಣ ಡಿಸಿಗೆ ಸೂಚನೆ”

“ಬಿಗ್‌ ಬಾಸ್‌ ವೀಕ್ಷಕರಿಗೆ ಗುಡ್‌ ನ್ಯೂಸ್‌ : ಜಾಲಿವುಡ್​​​ ಸ್ಟುಡಿಯೋ ಬೀಗ ತೆರೆಯಲು ಡಿಸಿಎಂ ಡಿಕೆಶಿ ಬೆಂ.ದಕ್ಷಿಣ ಡಿಸಿಗೆ ಸೂಚನೆ”

•ಪ್ರಜಾ ವೀಕ್ಷಣೆ  ಡೆಸ್ಕ್‌ ನ್ಯೂಸ್:

ಬೆಂಗಳೂರು : ಕನ್ನಡದ ಅತ್ಯಂತ ಜನಪ್ರಿಯ ರಿಯಾಲಿಟಿ ಶೋ ಬಿಗ್‌ ಬಾಸ್‌ಗೆ ವೀಕ್ಷಕರಿಗೆ ರಾತ್ರೋ ರಾತ್ರಿ ಸಿಹಿ ಸುದ್ದಿ ಸಿಕ್ಕಿದೆ. ಕಳೆದ ಎರಡು ದಿನಗಳಿಂದ ನಡೀಯುತ್ತಿದ್ದ ಬಿಗ್​ ಡ್ರಾಮಾಕ್ಕೆ ಇಂದು ಬ್ರೇಕ್​ ಬಿದ್ದಿದೆ. ಜಾಲಿವುಡ್​​​ ಸ್ಟುಡಿಯೋ ಬೀಗ ತೆರೆಯಲು ಸೂಚಿಸಿದ ಡಿಸಿಎಂ ಡಿಕೆಶಿ ಸೂಚಿಸಿದ್ದಾರೆ. ಈಗಲ್‌ಟನ್‌ ರೆಸಾರ್ಟ್‌ನಿಂದ ಬಿಗ್‌ಬಾಸ್‌ ಮನೆಗೆ 17 ಸ್ಪರ್ಧಿಗಳು ಇಂದೇ ಶಿಫ್ಟ್‌  ಗ್ರೀನ್‌ ಸಿಗ್ನಲ್‌ ಸಿಕ್ಕಂತಾಗಿದೆ.

ಡಿಸಿಎಂ ಎಕ್ಸ್‌ ಪೋಸ್ಟ್‌ನಲ್ಲೇನಿದೆ?

ಈ ಕುರಿತು ಎಕ್ಸ್‌ ಖಾತೆಯಲ್ಲಿ ಪೋಸ್ಟ್‌ ಹಂಚಿಕೊಂಡಿರುವ ಡಿಕೆಶಿ, ಬಿಗ್‌ಬಾಸ್ ಕನ್ನಡ ಚಿತ್ರೀಕರಣ ನಡೆಯುತ್ತಿರುವ ಬಿಡದಿಯಲ್ಲಿರುವ ಜಾಲಿವುಡ್ ಆವರಣದ ಸೀಲ್ ಅನ್ನು ತೆಗೆದುಹಾಕಲು ಬೆಂಗಳೂರು ದಕ್ಷಿಣ ಜಿಲ್ಲೆಯ ಜಿಲ್ಲಾಧಿಕಾರಿಗೆ ನಾನು ನಿರ್ದೇಶನ ನೀಡಿದ್ದೇನೆ. ಪರಿಸರ ಅನುಸರಣೆ ಪ್ರಮುಖ ಆದ್ಯತೆಯಾಗಿ ಉಳಿದಿದ್ದರೂ, ಕರ್ನಾಟಕ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿಯು ನಿಗದಿಪಡಿಸಿದ ಮಾನದಂಡಗಳಿಗೆ ಅನುಗುಣವಾಗಿ ಉಲ್ಲಂಘನೆಗಳನ್ನು ಪರಿಹರಿಸಲು ಸ್ಟುಡಿಯೋಗೆ ಸಮಯ ನೀಡಲಾಗುವುದು.

ಕನ್ನಡ ಮನರಂಜನಾ ಉದ್ಯಮವನ್ನು ಬೆಂಬಲಿಸಲು ನಾನು ಬದ್ಧನಾಗಿರುತ್ತೇನೆ, ಜೊತೆಗೆ ಪರಿಸರ ಸಂರಕ್ಷಣೆಯ ಬಗ್ಗೆ ನಮ್ಮ ಜವಾಬ್ದಾರಿಯನ್ನು ಎತ್ತಿಹಿಡಿಯುತ್ತೇನೆ ಎಂದು ಡಿ.ಕೆ.ಶಿವಕುಮಾರ್‌ ತಿಳಿಸಿದ್ದಾರೆ.

Leave a Reply

error: Content is protected !!