ಪ್ರಜಾ ವೀಕ್ಷಣೆ ಸುದ್ದಿ :
BREAKING : ಘೋರ ದುರಂತ : ಮಕ್ಕಳೊಂದಿಗೆ ತಾಯಿ ಅನುಮಾನಸ್ಪದವಾಗಿ ನೇಣಿಗೆ ಶರಣು..!!

ಕುಕನೂರು : ತಾಲೂಕಿನ ಬೆಣಕಲ್ ಗ್ರಾಮದಲ್ಲಿ ಇಂದು ಘೋರ ದುರಂತ ಒಂದು ನಡೆದಿದ್ದು, ಇಬ್ಬರು ಮಕ್ಕಳ ಜೊತೆಗೆ ತಾಯಿ ಓರ್ವಳು ಅನುಮಾನಸ್ಪದವಾಗಿ ನೇಣಿಗೆ ಶರಣಾಗಿದ್ದಾಳೆ ಎಂದು ತಿಳಿದು ಬಂದಿದೆ.
ಈ ಘಟನೆ ಮದ್ಯಾಹ್ನ 3 ಗಂಟೆಗೆ ಸುಮಾರಿಗೆ ತಮ್ಮ ಸ್ವಗೃಹದಲ್ಲಿ ನೇಣು ಬಿಗಿದ ಸ್ಥಿತಿಯಲ್ಲಿ ಮೂವರು ದೇಹಗಳು ಪತ್ತೆಯಾಗಿದೆ ಎಂದು ತಿಳಿದು ಬಂದಿದೆ.
ಹೌದು, ತಾಲೂಕಿನ ಬೆಣಕಲ್ ಗ್ರಾಮದ ಮೃತರಾದ ಲಕ್ಷ್ಮಮ್ಮ ಹನುಮೇಶ್ ಬಜೇಂತ್ರಿ (ವಯಸ್ಸು-30ವರ್ಷ), ಮೂರು ವರ್ಷದ ರಮೇಶ್ ಹಾಗೂ ಒಂದು ವರ್ಷದ ಹೆಣ್ಣು ಮಗು ಜಾನ್ವಿ ಎಂದು ಗುರುತಿಸಲಾಗಿದೆ. ಇವರ ಈ ಸಾವಿಗೆ ನಿಖರ ಕಾರಣ ತಿಳಿದುಬಂದಿಲ್ಲ, ಹೆಚ್ಚಿನ ಮಾಹಿತಿಗಾಗಿ ಈಗಾಗಲೇ ಪೊಲೀಸರು ತನಿಖೆ ಆರಂಭಿಸಿದ್ದಾರೆ ಎಂದು ಮಾಹಿತಿ ಲಭ್ಯವಾಗಿದೆ.
