You are currently viewing LOCAL NEWS : ತಾಲೂಕು ಆಡಳಿತ ಕಛೇರಿಗಳಿಲ್ಲದೇ ಸಾರ್ವಜನಿಕರಿಗೆ ಸಮಸ್ಯೆಗಳ ಮಹಾಪೂರ : ನವೆಂಬರ್‌ 03 ರಂದು ಕುಕನೂರು ಬಂದ್..!!

LOCAL NEWS : ತಾಲೂಕು ಆಡಳಿತ ಕಛೇರಿಗಳಿಲ್ಲದೇ ಸಾರ್ವಜನಿಕರಿಗೆ ಸಮಸ್ಯೆಗಳ ಮಹಾಪೂರ : ನವೆಂಬರ್‌ 03 ರಂದು ಕುಕನೂರು ಬಂದ್..!!

ಪ್ರಜಾ ವೀಕ್ಷಣೆ ಸುದ್ದಿ : 

LOCAL NEWS : ತಾಲೂಕು ಆಡಳಿತ ಕಛೇರಿಗಳಿಲ್ಲದೇ ಸಾರ್ವಜನಿಕರಿಗೆ ಸಮಸ್ಯೆಗಳ ಮಹಾಪೂರ : ನವೆಂಬರ್‌ 03 ರಂದು ಕುಕನೂರು ಬಂದ್..!!

 

ಕುಕನೂರು : ‘ಪಟ್ಟಣ ತಾಲೂಕ ಕೇಂದ್ರವಾಗಿ ಸುಮಾರು ಎಂಟು ವರ್ಷಗಳು ಗತಿಸಿದರು ಸಹ ಸರ್ಕಾರಗಳಿಲ್ಲದೆ ಸರ್ಕಾರಿ ಕಾರ್ಯಗಳು ಸಮರ್ಪಕವಾಗಿ ಕಾರ್ಯಾರಂಭ ಮಾಡಿರುವುದಿಲ್ಲ ಆದ್ದರಿಂದ ಪಟ್ಟಣದಲ್ಲಿ ಸೂಕ್ತ ಕಟ್ಟಡ ನಿರ್ಮಿಸಿ ತಾಲೂಕ ಕಾರ್ಯಾಲಯಗಳನ್ನು ಪ್ರಾರಂಭಿಸುವಂತೆ ಸರ್ಕಾರವನ್ನು ಒತ್ತಾಯಿಸಿ ಕುಕನೂರು ಬಂದ್ ಹಮ್ಮಿಕೊಳ್ಳಲಾಗಿದೆ’ ಎಂದು ಮುಖಂಡ ಸಿದ್ದಯ್ಯ ಕಳ್ಳಿಮಠ ಹೇಳಿದರು.

ಪಟ್ಟಣದ ಪ್ರವಾಸಿ ಮಂದಿರದಲ್ಲಿ ಪತ್ರಿಕಾಗೋಷ್ಠಿಯ ಉದ್ದೇಶಿಸಿ ಸಿದ್ದಯ್ಯ ಕಳ್ಳಿ ಮಠ ಮಾತನಾಡುತ್ತಾ ಮಂಗಳೂರು ಮತ್ತು ಕುಕುನೂರು ಹೋಬಳಿ ಒಳಗೊಂಡಂತೆ ಕುಕನೂರು ಪಟ್ಟಣವನ್ನು ತಾಲೂಕ ಕೇಂದ್ರವನ್ನಾಗಿ ಘೋಷಣೆ ಮಾಡಿ ಸುಮಾರು ಎಂಟು ವರ್ಷಗಳು ಕಳೆದರೂ ಸಹ ಇಂದಿಗೂ ಪಟ್ಟಣದಲ್ಲಿ ಸಂಪೂರ್ಣವಾಗಿ ತಾಲೂಕ ಕೇಂದ್ರದಲ್ಲಿ ಆಡಳಿತ ಮಾಡಿಸಬೇಕಾದ ಸರ್ಕಾರಿ ಕಾರ್ಯಾಲಯಗಳು ಕಾರ್ಯ ಆರಂಭ ಮಾಡದೇ ಇರುವುದು ವಿಪರ್ಯಾಸದ ಸಂಗತಿಯಾಗಿದ್ದು ಜೊತೆಗೆ ಸಾರ್ವಜನಿಕರು ಪರದಾಡುವ ಪರಿಸ್ಥಿತಿ ನಿರ್ಮಾಣಗೊಂಡಿರುತ್ತದೆ. ಆದ್ದರಿಂದ ಸರ್ಕಾರಿ ಕಚೇರಿಗಳು ಕಾರ್ಯ ರಂಭಗೊಳ್ಳಬೇಕು ಎಂದು ಒತ್ತಾಯಿಸಿ ನವಂಬರ್ 03ರ ಸೋಮವಾರ ಕುಕನೂರು ಪಟ್ಟಣವನ್ನು ಸಂಪೂರ್ಣ ಬಂದ್ ಮಾಡಿ ಪ್ರತಿಭಟನೆ ಮಾಡಲಾಗುವುದು ಎಂದು ತಿಳಿಸಿದರು.

ಪಟ್ಟಣದಲ್ಲಿ ತಾಲೂಕ ಆಡಳಿತ ಸೌದಕ್ಕಾಗಿ 30 ಕೋಟಿ, ನ್ಯಾಯಾಲಯಗಳ ಸಂಕೀರ್ಣ ಐವತ್ತು ಕೋಟಿ ಹಾಗೂ ಬುದ್ಧ ಬಸವ ಅಂಬೇಡ್ಕರ್ ಭವನ ನಿರ್ಮಾಣಕ್ಕೆ ಎಂದು 15 ಕೋಟಿ ರೂಪಾಯಿಗಳನ್ನು ಈಗಾಗಲೇ ಮಂಜೂರು ಮಾಡಿ ಪಟ್ಟಣದ ಗುದ್ನೆಪ್ಪನಮಠ ಪ್ರದೇಶದಲ್ಲಿ ಧಾರ್ಮಿಕ ದತ್ತಿ ಇಲಾಖೆಗೆ ಸಂಬಂಧಿಸಿದ ಸರ್ಕಾರಿ ಜಾಗವನ್ನು ಸರ್ವೆ ನಂಬರ್ 78ರ ಗುರುತಿಸಿದ್ದು ಸರ್ಕಾರದಿಂದ ಅನುಮೋದನೆ ಸಹ ದೊರೆತಿರುತ್ತದೆ ಆದರೆ ಕೆಲ ಪಟ್ಟಭದ್ರ ಶಾಸ್ತ್ರಿಗಳಿಂದ ಈ ಜಾಗದಲ್ಲಿ ಸರ್ಕಾರಿ ಕಾರ್ಯಾಲಯ ನಿರ್ಮಿಸಬಾರದು ಎಂದು ನ್ಯಾಯಾಲಯದಿಂದ ತಡೆಯಾಗ್ನೇ ತಂದಿರುವುದು ತಾಲೂಕಿನ ಸರ್ವಾಂಗೀನ ಅಭಿವೃದ್ಧಿ ಕುಂಠಿತಗೊಳ್ಳಲು ಕಾರಣವಾಗಿದೆ ಆದ್ದರಿಂದ ತಾಲೂಕಿನ ಸಾರ್ವಜನಿಕರ ಹಿತಾಸಕ್ತಿಯಿಂದ ಪಟ್ಟಣದಲ್ಲಿ ತಾಲೂಕ ಆಡಳಿತ ಸೌದದೊಂದಿಗೆ ನ್ಯಾಯಾಲಯ ಸಂಕೀರ್ಣ ಮತ್ತು ಬುದ್ಧ ಬಸವ ಅಂಬೇಡ್ಕರ್ ಭವನ ನಿರ್ಮಿಸಿ ಸಾರ್ವಜನಿಕರಿಗೆ ಅನುಕೂಲ ಮಾಡಿಕೊಡಬೇಕೆಂದು ಸರ್ಕಾರವನ್ನು ಒತ್ತಾಯಿಸಿ ಪ್ರತಿಭಟನೆ ನಡೆಸಿ ಮನವಿ ಸಲ್ಲಿಸಲಾಗುವುದರಿಂದ ತಾಲೂಕಿನ ಪ್ರತಿಯೊಬ್ಬರು ಪ್ರತಿಭಟನೆಯಲ್ಲಿ ಪಾಲ್ಗೊಂಡು ಯಶಸ್ವಿಗೊಳಿಸಬೇಕು ಎಂದು ಕರೆ ನೀಡಿದರು.

ವಕೀಲರ ಸಂಘದ ಅಧ್ಯಕ್ಷ ಬಸವರಾಜ್ ಜಂಗ್ಲಿ ಮಾತನಾಡುತ್ತಾ ಧಾರ್ಮಿಕ ದತ್ತಿ ಇಲಾಖೆಗೆ ಬಾಡಿಗೆ ಆಧಾರದಲ್ಲಿ ಜಾಗ ನೀಡುವಂತೆ ಮನವಿ ಮಾಡಿದ್ದು ಅದಕ್ಕೆ ಒಪ್ಪಿಗೆ ಸಹ ದೊರೆತಿದ್ದು ಕೆಲ ಉದ್ದಿಮೇದಾರರ ವೈಯಕ್ತಿಕ ಹಿತಾಸಕ್ತಿಯಿಂದ ಆಡಳಿತ ಕಚೇರಿ ಇಲ್ಲದೆ ಅಭಿವೃದ್ಧಿ ವೈಫಲ್ಯ ಎದುರಿಸುವಂತಾಗಿದೆ ಎಂದರು.

ವಕೀಲರ ಸಂಘ, ಕನ್ನಡಪರ ಸಂಘಟನೆಗಳು,ಹಮಾಲರ ಸಂಘ, ಕ್ರೀಡಾ ಪ್ರೇಮಿಗಳ ಸಂಘ, ಕಟ್ಟಡ ಕಾರ್ಮಿಕರ ಸಂಘ, ದಲಿತ ಸಂಘಟನೆಗಳು, ಆಲ್ ಇಂಡಿಯಾ ಬಂಜಾರ ಸೇನೆ, ವರ್ತಕರ ಸಂಘ,ರೈತಪರ ಸಂಘಟನೆಗಳು, ಸುಡುಗಾಡ ಸಿದ್ಧರ ಸಂಘಗಳು ಬೆಂಬಲ ವ್ಯಕ್ತಪಡಿಸಿದ್ದಾರೆ.

ಪತ್ರಿಕಾಗೋಷ್ಠಿಯಲ್ಲಿ ಪ್ರಮುಖರಾದ ಈರಪ್ಪ ಕುಡುಗುಂಟಿ, ಅಶೋಕ ತೋಟದ, ರಾಮಣ್ಣ ಬಂಕದ ಮನೆ, ಸಂಗಮೇಶ ಗುತ್ತಿ, ರೆಹಮಾನ್ ಸಾಬ್ ಮಕಪ್ಪನವರ್, ಬಸವರಾಜ ಜಂಗ್ಲಿ, ರಮೇಶ್ ಗಜಕೋಶ, ಪ್ರಶಾಂತ್ ಆರು ಬೆರಳಿನ,ಮಲಿಯಪ್ಪ ಅಣ್ಣಿಗೇರಿ, ನಿಂಗಪ್ಪ ಗೊರಲೆಕೊಪ್ಪ, ಸಿದ್ದು ವಾಲ್ಮೀಕಿ, ರವಿ ನಾಲ್ವಡ, ರಘು ಕಾತರಕಿ ಸೇರಿದಂತೆ ಇನ್ನಿತರರು ಪಾಲ್ಗೊಂಡಿದ್ದರು.

“ಪತ್ರಿಕಾಗೋಷ್ಠಿಯಲ್ಲಿ ತಾಲೂಕ ಕ್ರೀಡಾಂಗಣ ನಿರ್ಮಾಣ ವೇದಿಕೆಯ ಪ್ರಭಾಕರಾದ ಚಂದ್ರಕಾಂತ ಗುಡಿಮನಿ ಮಾತನಾಡಿ ಪಟ್ಟಣವು 30ಸಾವಿರಕ್ಕೂ ಹೆಚ್ಚು ಜನಸಂಖ್ಯೆಯನ್ನು ಹೊಂದಿದ್ದು ಒಂದೇ ಒಂದು ಕ್ರೀಡಾಂಗಣವನ್ನು ಸಹ ಹೊಂದಿರುವುದಿಲ್ಲ. ಇದಕ್ಕೆ ಕ್ರೀಡಾಪಟುಗಳು ಕ್ರೀಡಾ ಚಟುವಟಿಕೆಗಾಗಿ ಹರಸಾಹಸ ಪಡುವ ಪರಿಸ್ಥಿತಿ ಉಂಟಾಗಿದ್ದು ಪೊಲೀಸ್ ಹಾಗೂ ಸೇನೆ ಸೇರುವ ಉದ್ದೇಶ ಹೊಂದಿರುವ ಯುವಕರು ದೈಹಿಕ ಸಾಮರ್ಥ್ಯ ಉದ್ದೇಶದಿಂದ ಕ್ರೀಡಾ ಚಟುವಟಿಕೆಗಾಗಿ ಬೇರೆ ಬೇರೆ ಕಡೆ ಅವಲಂಬಿಸಬೇಕಾದ ಅನಿವಾರ್ಯತೆ ಉಂಟಾಗಿದೆ ಆದ್ದರಿಂದ ಶೀಘ್ರದಲ್ಲಿ ತಾಲೂಕ ಕ್ರೀಡಾಂಗಣ ನಿರ್ಮಾಣಗೊಳ್ಳಲಿ ಎಂಬುದು ತಾಲೂಕ ಕ್ರೀಡಾಂಗಣ ನಿರ್ಮಾಣ ವೇದಿಕೆಯ ಒತ್ತಾಯವಾಗಿದೆ.”

ಚಂದ್ರಕಾಂತ್ ಗುಡಿಮನಿ
ತಾಲೂಕ ಕ್ರೀಡಾಂಗಣ ನಿರ್ಮಾಣ ವೇದಿಕೆ ಸದಸ್ಯ

Leave a Reply

error: Content is protected !!