LOCAL NEWS : ಕೆರೆ ಹೂಳು ಎತ್ತುವ ಕಾಮಗಾರಿ : ಖಾಸಗಿ ನಿವೇಶನಗಳಿಗೆ ಅಕ್ರಮ ಮರಂ ಸಾಗಣೆಗೆ ಶಾಸಕ ರಾಯರೆಡ್ಡಿ ಕೈವಾಡ : ಎಸ್. ವಿ. ಸೋಮರೆಡ್ಡಿ ಆರೋಪ!
ಕುಕನೂರ : ತಾಲ್ಲೂಕಿನ ತಳಕಲ್ ಗ್ರಾಮದ ಬೆಣ್ಣೆಗೇರಿ ಸರ್ಕಾರಿ ಕೆರೆಯಲ್ಲಿ ಹೂಳು ಎತ್ತುವ ಕಾಮಗಾರಿ ಭರದಿಂದ ನಡೆದಿದ್ದು, ರಾಜಧನ ಕಟ್ಟದೇ ಈಗ ಅನಧಿಕೃತವಾಗಿ ತಮ್ಮಗೆ ಬೇಕಾದವರ ನಿವೇಶನಕ್ಕೆ ಮರಂ ಸಾಗಿಸುತ್ತಿವುದನ್ನು ತಡೆಯಬೇಕೆಂದು ಸಾಮಾಜಿಕ ಹೋರಾಟಗಾರ, ನಿವೃತ ಪ್ರಾಧ್ಯಾಪಕ ಎಸ್. ವಿ. ಸೋಮರೆಡ್ಡಿ ಅವರು ಒತ್ತಾಯಿಸಿದ್ದರು.
ಈ ಕುರಿತು ಭಾನುವಾರ ಪಟ್ಟಣದ ನೀರಿಕ್ಷಣಾ ಮಂದಿರದಲ್ಲಿ ಸುದ್ದಿಗೋಷ್ಠಿ ನಡೆಸಿ, ಪತ್ರಕರ್ತರಿಗೆ ಮಾಹಿತಿ ನೀಡಿದ ಅವರು, ಗಣಿ ಮತ್ತು ಭೂ ವಿಜ್ಞಾನ ಇಲಾಖೆ ಅಧಿಕಾರಿಗಳ ಮೇಲೆ ಶಾಸಕ ಬಸವರಾಜ ರಾಯರೆಡ್ಡಿ ಅವರು ವರ್ಗಾವಣೆ ಅಸ್ತ್ರ ಬಳಸಿ ಬೆದರಿಕೆ ಹಾಕಿ ಕ್ಷೇತ್ರದಲ್ಲಿ ತಮ್ಮಗೆ ಬೇಕಾದ ರೀತಿಯಲ್ಲಿ ಅಕ್ರಮ ಕಾರ್ಯಗಳನ್ನು ಮಾಡಿಸಿಕೊಂಡು ಅಧಿಕಾರ ದುರ್ಬಳಕೆ ಮಾಡಿಕೊಳ್ಳತ್ತಿದ್ದಾರೆ. ಕಾನೂನು ಬಾಹಿರವಾಗಿ ಹೂಳೆತ್ತಿದ ಮರಂ ನ್ನು ಖಾಸಗಿ ವ್ಯಕ್ತಿಗಳ ನಿವೇಶನಗಳಲ್ಲಿ ಹಾಕುತ್ತಿದ್ದಾರೆ ಎಂದು ಆರೋಪಿಸಿದ್ದರು.
ಇತ್ತೀಚಿಗೆ ಜಿಲ್ಲಾ ಗಣಿ ಮತ್ತು ಭೂ ವಿಜ್ಞಾನ ಇಲಾಖೆಯ ಅಧಿಕಾರಿಗಳನ್ನು ವರ್ಗಾವಣೆ ಮಾಡಿ ಎಂದು ಪತ್ರ ಬರೆದ ಶಾಸಕ ರಾಯರಡ್ಡಿಗಣಿ ಸಂಪತ್ತು ಲೂಟಿ, ಲೋಕಾಯುಕ್ತರಿಗೆ ದೂರು.
ಕುಕನೂರು : ತಾಲೂಕಿನ ತಳಕಲ್ ಗ್ರಾಮದ ವ್ಯಾಪ್ತಿಯಲ್ಲಿ ಬರುವ ಬೆಣ್ಣಿಗೇರಿ ಕೆರೆಯ ಸುಮಾರು 9 ಎಕರೆ ಜಮೀನಿನಲ್ಲಿ ಅಕ್ರಮ ಪರಂ ಸಾಗಣೆ ತಡೆಯುವಂತೆ ಒತ್ತಾಯಿಸಿ ನಿವೃತ್ತ ಪ್ರಧ್ಯಾಪಕ ಮತ್ತು ಸಾಮಾಜಿಕ ಹೋರಾಟಗಾರ ಎಸ್ ವಿ ಸೋಮರಡ್ಡಿ ಅವರು ರಾಜ್ಯ ಲೋಕಾಯುಕ್ತರಿಗೆ ಪತ್ರ ಬರೆದಿದ್ದಾರೆ.
ಈ ಕುರಿತು ಕುಕನೂರು ಪಟ್ಟಣದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾಹಿತಿ ನೀಡಿದ ಅವರು, ಸ್ಥಳೀಯ ಶಾಸಕ ಬಸವರಾಜ್ ರಾಯರಡ್ಡಿ ಸಹೋದರರ ಪ್ರಭಾವದಿಂದ ಬೆಣ್ಣೆಗೇರಿ ಕೆರೆ ಮತ್ತು ಸುತ್ತಮುತ್ತಲಿನ ಪ್ರದೇಶದ ಪರಂ ಅನ್ನು ಲೂಟಿ ಮಾಡಲಾಗುತ್ತಿದ್ದು ಇದನ್ನು ತಡೆಯಬೇಕಾದ ಅಧಿಕಾರಿಗಳಿಗೆ ಒತ್ತಡ ತಂತ್ರ ಹಾಕಿಸಿ ಸುಮ್ಮನಾಗಿಸಿದ್ದಾರೆ.
ಇತ್ತೀಚಿಗೆ ಜಿಲ್ಲಾ ಗಣಿ ಮತ್ತು ಭೂ ವಿಜ್ಞಾನ ಇಲಾಖೆಯ ಅಧಿಕಾರಿಗಳನ್ನು ವರ್ಗಾವಣೆ ಮಾಡಿ ಎಂದು ಪತ್ರ ಬರೆದ ಶಾಸಕ ರಾಯರಡ್ಡಿ ಅವರದು ಬೆದರಿಕೆ ಮತ್ತು ಅನುಕೂಲ ಸಿಂದು ನಡೆಯಾಗಿದೆ. ಇದರಲ್ಲಿ ಆಧಿಕಾರಿಗಳನ್ನು ಬೆದರಿಸುವ ತಂತ್ರವಾಗಿದೆ ಅಷ್ಟೇ ಹೊರತು ಗಣಿ ಸಂಪತ್ತಿನ ಲೂಟಿ ತಡೆಯುವ ಉದ್ದೇಶವಿಲ್ಲ ಎಂದು ಎಸ್ ವಿ ಸೋಮರಡ್ಡಿ ಆರೋಪಿಸಿದ್ದಾರೆ.
ಬೆಣ್ಣೆಗೇರಿ ಕೆರೆಯ ಪರಂ ಅನ್ನು ಅಕ್ರಮವಾಗಿ ಸಾಗಿಸಿ ಖಾಸಗಿ ವ್ಯಕ್ತಿಗಳಿಗೆ ಸೇರಿದ ಜಾಗದಲ್ಲಿ ಸಂಗ್ರಹಣೆ ಮಾಡಲಾಗಿದೆ. ಇದರಿಂದ ರಾಜ್ಯದ ಬೊಕ್ಕಸಕ್ಕೆ ನೂರಾರು ಕೋಟಿ ಅವರು, ಬೆದರಿಕೆ ಮತ್ತು ಅನುಕೂಲ ಸಿಂದು ನಡೆಯಾಗಿದೆ. ಇದರಲ್ಲಿ ಆಧಿಕಾರಿಗಳನ್ನು ಬೆದರಿಸುವ ತಂತ್ರವಾಗಿದೆ ಅಷ್ಟೇ ಹೊರತು ಗಣಿ ಸಂಪತ್ತಿನ ಲೂಟಿ ತಡೆಯುವ ಉದ್ದೇಶವಿಲ್ಲ ಎಂದು ಅವರು ಹೇಳಿದರು.
ಈ ಸಂಬಂಧ ಆ.18, 2025ರಂದು ಕೊಪ್ಪಳ ಡಿ.ಸಿ ಅವರಿಗೆ ಮನವಿ ಸಲ್ಲಿಸಿದರೂ ಸಹ ಯಾವದೇ ಕ್ರಮ ಜರಗಿಸಿಲ್ಲ.ಹೀಗಾಗಿ ಕರ್ನಾಟಕ ಉಪ ಲೋಕಾಯುಕ್ತರಿಗೆ ದೂರು ಸಹ ಸಲ್ಲಿಸಲಾಗಿದೆ . ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಸಮಗ್ರ ತನಿಖೆ ಕೈಗೊಂಡು ತಪ್ಪಿಸ್ಥರ ವಿರುದ್ಧ ಕಾನೂನು ಕ್ರಮ ತೆಗೆದುಕೊಳ್ಳಬೇಕು ಅವರು ಆಗ್ರಹಿಸಿದ್ದರು.