You are currently viewing CRIME NEWS: “ಕೊಪ್ಪಳ| ಒಡಹುಟ್ಟಿದ ತಂಗಿಯನ್ನೇ ಗರ್ಭಿಣಿ ಮಾಡಿದ ಪಾಪಿ ಅಣ್ಣ.! ಹೆಣ್ಣು ಮಗುವಿಗೆ ಜನ್ಮ ನೀಡಿದ ತಂಗಿ.!ಅಣ್ಣ ಅರೆಸ್ಟ್.!”

CRIME NEWS: “ಕೊಪ್ಪಳ| ಒಡಹುಟ್ಟಿದ ತಂಗಿಯನ್ನೇ ಗರ್ಭಿಣಿ ಮಾಡಿದ ಪಾಪಿ ಅಣ್ಣ.! ಹೆಣ್ಣು ಮಗುವಿಗೆ ಜನ್ಮ ನೀಡಿದ ತಂಗಿ.!ಅಣ್ಣ ಅರೆಸ್ಟ್.!”

“ಕೊಪ್ಪಳ|ಒಡಹುಟ್ಟಿದ ತಂಗಿಯನ್ನೇ ಗರ್ಭಿಣಿ ಮಾಡಿದ ಪಾಪಿ ಅಣ್ಣ.! ಹೆಣ್ಣು ಮಗುವಿಗೆ ಜನ್ಮ ನೀಡಿದ ತಂಗಿ.! ಅಣ್ಣಅರೆಸ್ಟ್.!”

ವರದಿ: ಭೀಮಾಶಂಕರ ಪಾಣೇಗಾಂವ.

• ಪ್ರಜಾ ವೀಕ್ಷಣೆ ನ್ಯೂಸ್‌ ಕೊಪ್ಪಳ :

ಅಣ್ಣ-ತಂಗಿ ಸಂಬಂಧವನ್ನೇ ಬೆಚ್ಚಿಬೀಳಿಸುವ ಘೋರ ಪ್ರಸಂಗಯೊಂದು ಜಿಲ್ಲೆಯಲ್ಲಿ ನಡೆದಿದೆ ಎನ್ನಲು ಹೇಳಲು ಅಸಹನೀಯವೆನಿಸುತ್ತದೆ. ನಿನ್ನನ್ನೇ ಮದುವೆಯಾಗುತ್ತೇನೆ ಎಂದು ಒಡಹುಟ್ಟಿದ ತಂಗಿಗೆ ಆಮಿಷವೊಡ್ಡಿ ಆಕೆಯ ಜೊತೆ ದೈಹಿಕ ಸಂಪರ್ಕ ಬೆಳಸಿ, ಮಗುವಾಗುವಂತೆ ಮಾಡಿದ ಅಘಾತಕಾರಿ ಘಟನೆ ಕೊಪ್ಪಳ ತಾಲೂಕಿನ ಗ್ರಾಮೀಣ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಗುರುವಾರ  ಬೆಳಕಿಗೆ ಬಂದಿದೆ. 

ಸಿನಿಮಾ, ಟಿವಿ ಮತ್ತು ಮೊಬೈಲ್‌ಗಳ ಪ್ರಭಾವದಿಂದ ಸಮಾಜದ ಕಟ್ಟುಪಾಡುಗಳನ್ನು ಧಿಕ್ಕರಿಸಿ ಅತ್ಯಾಚಾರ ಮತ್ತು ಪರಸ್ಪರ ಒಪ್ಪಿಗೆಯಿಂದ ಲೈಂಗಿಕ ಕೃತ್ಯಗಳಲ್ಲಿ ತೊಡಗುವುದನ್ನು ಕಾಣಬಹುದು. ಇಂತಹ ಪರಿಸ್ಥಿತಿಗಳಲ್ಲಿ ಮಾನವ ಮೃಗಗಳಿಂದ ತಂಗಿಯನ್ನು ಕಾಪಾಡಬೇಕಾದ ಅಣ್ಣ ತನ್ನ ಸ್ವಂತ ತಂಗಿ ಎಂಬುದನ್ನೂ ಬಿಟ್ಟು ಪಶುವಿನಂತೆ ವರ್ತಿಸಿರುವ ಘಟನೆ  ನಾಗರಿಕ ಸಮಾಜ ತಲೆತಗ್ಗಿಸುವಂತ ಪ್ರಕರಣ ಜಿಲ್ಲೆಯಲ್ಲಿ ಆತಂಕಕ್ಕೆ ಮನೆ ಮಾಡಿದೆ.

ಅಣ್ಣ-ತಂಗಿ ಸಂಬಂಧಕ್ಕೆ ಕಳಂಕ ಎಂಬಂತೆ ತಾಲೂಕಿನಲ್ಲಿ 21 ವರ್ಷದ ಯುವಕನೊಬ್ಬ ತನ್ನ 17 ವರ್ಷದ ಅಪ್ರಾಪ್ತ ತಂಗಿಯ ಮೇಲೆ ಲೈಂಗಿಕ ದೌರ್ಜನ್ಯ ಎಸಗಿ ಗರ್ಭಿಣಿಯಾಗಿಸಿದ್ದಾನೆ.  ಅಪ್ರಾಪ್ತ ಬಾಲಕಿಗೆ ಹೊಟ್ಟೆನೋವು ಕಾಣಿಸಿಕೊಂಡ ಹಿನ್ನೆಲೆಯಲ್ಲಿ, ಕುಟುಂಬಸ್ಥರು ಆಕೆಯನ್ನು ಚಿಕಿತ್ಸೆಗಾಗಿ ಆಸ್ಪತ್ರೆಗೆ ದಾಖಲಿಸಿದ್ದರು. ವೈದ್ಯಕೀಯ ತಪಾಸಣೆ ವೇಳೆ ಆಕೆ ಗರ್ಭಿಣಿಯಾಗಿರುವುದು ತಿಳಿದುಬಂದಿದೆ.

ಕೆಲವೇ ಹೊತ್ತಿನಲ್ಲಿ ಹೆಣ್ಣು ಮಗುವಿಗೆ ಜನ್ಮ ನೀಡಿದ ಬಳಿಕ ಈ ಘೋರ ಕೃತ್ಯ ಬೆಳಕಿಗೆ ಬಂದಿದೆ. ಬಾಲಕಿಯ ದೂರಿನ ಆಧಾರದ ಮೇಲೆ ಆರೋಪಿ ವಿರುದ್ಧ ಪೋಕ್ಸೋ ಕಾಯ್ದೆಯಡಿ ಪ್ರಕರಣ ದಾಖಲಿಕೊಂಡು ಆರೋಪಿ ಅಣ್ಣನನ್ನು ಪೋಲಿಸರು ಬಂಧಿಸಿ ನ್ಯಾಯಾಂಗಕ್ಕೆ ಒಪ್ಪಿಸಿದ್ದಾರೆ.

Prajavikshane

Chandru R Bhanapaur

Leave a Reply

error: Content is protected !!