You are currently viewing LOCAL NEWS : ಹೆರಿಗೆ & ಶಸ್ತ್ರಚಿಕಿತ್ಸೆ ಹೆರಿಗೆಯ ಗುಣಮಟ್ಟದ ಸೇವೆಗಾಗಿ ಮಂಗಳೂರಿನ ಸಮುದಾಯ ಆರೋಗ್ಯ ಕೇಂದ್ರಕ್ಕೆ LAQSHYA ರಾಷ್ಟ್ರ ಪ್ರಶಸ್ತಿ..!
ಮಂಗಳೂರಿನ ಸಮುದಾಯ ಆರೋಗ್ಯ ಕೇಂದ್ರದ ಹೊರಾಂಗಣ

LOCAL NEWS : ಹೆರಿಗೆ & ಶಸ್ತ್ರಚಿಕಿತ್ಸೆ ಹೆರಿಗೆಯ ಗುಣಮಟ್ಟದ ಸೇವೆಗಾಗಿ ಮಂಗಳೂರಿನ ಸಮುದಾಯ ಆರೋಗ್ಯ ಕೇಂದ್ರಕ್ಕೆ LAQSHYA ರಾಷ್ಟ್ರ ಪ್ರಶಸ್ತಿ..!

ಪ್ರಜಾ ವೀಕ್ಷಣೆ ಸುದ್ದಿ :

LOCAL NEWS : ಹೆರಿಗೆ & ಶಸ್ತ್ರಚಿಕಿತ್ಸೆ ಹೆರಿಗೆಯ ಗುಣಮಟ್ಟದ ಸೇವೆಗಾಗಿ ಮಂಗಳೂರಿನ ಸಮುದಾಯ ಆರೋಗ್ಯ ಕೇಂದ್ರಕ್ಕೆ LAQSHYA ರಾಷ್ಟ್ರ ಪ್ರಶಸ್ತಿ..!

ಮಂಗಳೂರಿನ ಸಮುದಾಯ ಆರೋಗ್ಯ ಕೇಂದ್ರದ ಹೊರಾಂಗಣ

*ರಾಷ್ಟ್ರ ಮಟ್ಟದ ಲಕ್ಷ್ಯ ಪ್ರಮಾಣ ಪತ್ರ *

ಕುಕನೂರು : ತಾಲೂಕಿನ ಮಂಗಳೂರಿನ ಸಮುದಾಯ ಆರೋಗ್ಯ ಕೇಂದ್ರದಲ್ಲಿ ಹೆರಿಗೆ & ಶಸ್ತ್ರಚಿಕಿತ್ಸೆ ಹೆರಿಗೆ ವಿಭಾಗದಲ್ಲಿ ನೀಡಲಾಗುವ ಸೇವೆಗಳ ಮೌಲ್ಯಮಾಪನವನ್ನು ಕಳೆದ ತಿಂಗಳು ಅಕ್ಟೋಬರ್‌ 17 ರಂದು ನಡೆಸಲಾಗಿತ್ತು. ಸದರಿ ಮೌಲ್ಯಮಾಪನ ಫಲಿತಾಂಶ ಪ್ರಕಟವಾಗಿದ್ದು, ಶೇ 91% ಅಂಕ‌ಪಡೆದು ಉತ್ತೀರ್ಣ ಆಗಿರುವ ಕಾರಣ “ಲಕ್ಷ್ಯ ರಾಷ್ಟ್ರ ಮಟ್ಟದ ಪ್ರಮಾಣ ಪತ್ರ” ಘೋಷಿಸಲಾಗಿರುತ್ತದೆ.

ಗ್ರಾಮೀಣ ಮಟ್ಟದಲ್ಲಿ ಉತ್ತಮ ಸೇವೆ ನೀಡಲು ಉತ್ತೇಜಿಸಿದ ಜಿಲ್ಲಾ ಆರೋಗ್ಯ & ಕುಟುಂಬ ಕಲ್ಯಾಣ ಅಧಿಕಾರಿಗಳು, ಕುಟುಂಬ ಕಲ್ಯಾಣ ಅಧಿಕಾರಿಗಳು, ಕಾರ್ಯಕ್ರಮ ಅಧಿಕಾರಿಗಳು, ಸಹದ್ಯೋಗಿ ವೈದ್ಯಾಧಿಕಾರಿಗಳು ಹಾಗೂ ರಜಾ ದಿನಗಳಲ್ಲೂ ಕೆಲಸ ಮಾಡುವ ಮೂಲಕ ಪ್ರತಿ ಹಂತದಲ್ಲೂ ಸಹಕಾರ ನೀಡಿದ ಸ.ಆ.ಕೇಂದ್ರ ಮಂಗಳೂರು ಸಿಬ್ಬಂದಿಗಳು, ಆಶಾ ಕಾರ್ಯಕರ್ತೆಯರು ಗ್ರಾ.ಪಂ. ಅಧ್ಯಕ್ಷರು, ಪಿ.ಡಿ.ಓ. ಉಪಾಧ್ಯಕ್ಷರು, ಸರ್ವ ಸದಸ್ಯರು, ಗ್ರಾಮದ ಪ್ರಮುಖರು, ಗ್ರಾಮಸ್ಥರು ಹಾಗೂ ಮಾಧ್ಯಮ ಮಿತ್ರರರಿಗೆ ಡಾ ಸಿ.ಎಮ್. ಹಿರೇಮಠ ರವರು ಅಭಿನಂದಿಸಿ ಹರ್ಷ ವ್ಯಕ್ತಪಡಿಸಿರುತ್ತಾರೆ.

ಸದರಿ ಮೌಲ್ಯಮಾಪನದಲ್ಲಿ ಸಕ್ರೀಯವಾಗಿ ಭಾಗವಹಿಸಿ ಜಿಲ್ಲೆಗೆ ಕೀರ್ತಿ ತಂದ ಸ.ಆ.ಕೇಂದ್ರ ಮಂಗಳೂರು ನ ಪ್ರಸೂತಿ & ಸ್ತ್ರೀ ರೋಗ ತಜ್ಣರಾದ ಡಾ ಸಿ.ಎಮ್.ಹಿರೇಮಠ & ಎಲ್ಲಾ ವೈದ್ಯಾಧಿಕಾರಿಗಳು ಹಾಗೂ ಸಿಬ್ಬಂದಿಗಳಿಗೆ ಮಾನ್ಯ ಜಿಲ್ಲಾ ಆರೋಗ್ಯ & ಕುಟುಂಬ ಕಲ್ಯಾಣ ಅಧಿಕಾರಿಗಳು ಹಾಗೂ ಜಿಲ್ಲಾ ಕುಟುಂಬ ಕಲ್ಯಾಣ ಅಧಿಕಾರಿಗಳು ಹಾಗೂ ಕಾರ್ಯಕ್ರಮ ಅಧಿಕಾರಿ ಗಳು ಅಭಿನಂದಿಸಿರುತ್ತಾರೆ.

ಲಕ್ಷ್ಯ ರಾಷ್ಟ್ರ ಮಟ್ಟದ ಪ್ರಮಾಣ ಪತ್ರದ ವಿವರಣೆ

 ಕೇಂದ್ರ ಆರೋಗ್ಯ ಸಚಿವಾಲಯವು ನೀಡುವ ಮಾನ್ಯತೆಯಾಗಿದ್ದು, ತಾಯಿ ಮತ್ತು ನವಜಾತ ಶಿಶುಗಳ ಆರೈಕೆಯಲ್ಲಿ ಉತ್ತಮ ಗುಣಮಟ್ಟದ ಸೇವೆಗಳನ್ನು ಒದಗಿಸುವ ಆಸ್ಪತ್ರೆಗಳಿಗೆ ನೀಡಲಾಗುತ್ತದೆ. ಈ ಪ್ರಮಾಣ ಪತ್ರವು ಆಸ್ಪತ್ರೆಗೆ ವಾರ್ಷಿಕ ರೂ. 3 ಲಕ್ಷ ಅನುದಾನ, ಮೂರು ವರ್ಷಗಳ ಸಿಂಧುತ್ವ ಮತ್ತು ಉತ್ತಮ ಕಾರ್ಯಕ್ಷಮತೆಗಾಗಿ ಪ್ಲಾಟಿನಂ ಪದಕದಂತಹ ಬಹುಮಾನಗಳನ್ನು ನೀಡುತ್ತದೆ. 

ಲಕ್ಷ್ಯ ಪ್ರಮಾಣ ಪತ್ರದ ವಿವರಗಳು

  • ಅರ್ಹತೆ: ಆಸ್ಪತ್ರೆಗಳು ಉತ್ತಮ ಗುಣಮಟ್ಟದ ಪ್ರಸವಾ ಪೂರ್ವ ಮತ್ತು ಪ್ರಸವಾ ನಂತರದ ಸೇವೆಗಳನ್ನು ಒದಗಿಸಬೇಕು.

  • ಪರಿಶೀಲನೆ: ಈ ಪ್ರಮಾಣ ಪತ್ರ ಪಡೆಯಲು ಜಿಲ್ಲಾ ಮಟ್ಟದ ತಂಡ, ರಾಜ್ಯ ಮಟ್ಟದ ತಂಡ ಮತ್ತು ನಂತರ ರಾಷ್ಟ್ರ ಮಟ್ಟದ ಸಮಿತಿಯಿಂದ ಮೂರು ಹಂತದ ಪರಿಶೀಲನೆ ನಡೆಯುತ್ತದೆ.

  • ಮೌಲ್ಯಮಾಪನ: ಪರಿಶೀಲನೆಯಲ್ಲಿ ಆಸ್ಪತ್ರೆಗಳು ತಾಯಿ ಮತ್ತು ನವಜಾತ ಶಿಶುಗಳ ಆರೋಗ್ಯ, ಸಾವು ಇತ್ಯಾದಿಗಳನ್ನು ಪರಿಗಣಿಸಿ ಅಂಕಗಳನ್ನು ನೀಡಲಾಗುತ್ತದೆ.

  • ಪ್ರಯೋಜನೆಗಳು:

    • ಮೂರು ವರ್ಷಗಳ ಸಿಂಧುತ್ವ.

    • ಒಂದೇ ಗುಣಮಟ್ಟ ಕಾಯ್ದುಕೊಂಡರೆ ಪ್ರತಿ ವರ್ಷ ರೂ. 3 ಲಕ್ಷ ಅನುದಾನ.

    • 90ಕ್ಕಿಂತ ಹೆಚ್ಚು ಅಂಕ ಪಡೆದರೆ ಪ್ಲಾಟಿನಂ ಪದಕ ಲಭಿಸುತ್ತದೆ.

  • ಅನುದಾನ ಬಳಕೆ: ರೂ. 3 ಲಕ್ಷದ ರೂ. 3 ಲಕ್ಷದಲ್ಲಿ 75% ಆಸ್ಪತ್ರೆ ಅಭಿವೃದ್ಧಿಗಾಗಿ ಮತ್ತು 25% ಸಿಬ್ಬಂದಿಗೆ ವಿತರಣೆ ಮಾಡಲಾಗುತ್ತದೆ. 

Leave a Reply

error: Content is protected !!