ಮುದಗಲ್ಲ ವರದಿ..

ಮುದಗಲ್ಲ ಪುರಸಭೆ ವತಿಯಿಂದ ಅರ್ಥಪೂರ್ಣ ಸಂವಿಧಾನ ದಿನ ಆಚರಣೆಗೆ..

ಮುದಗಲ್ಲ :- ವಿಶ್ವದ ಅತಿದೊಡ್ಡ ಪ್ರಜಾಪ್ರಭುತ್ವ ರಾಷ್ಟ್ರವಾಗಿರುವ ಭಾರತದ ಆತ್ಮ ನಾವು ಅಂಗೀಕರಿಸಿರುವ’ಸಂವಿಧಾನ’ವಾಗಿದೆ. ಈ ಹಿನ್ನೆಲೆಯಲ್ಲೇ ನವೆಂಬರ್‌ 26ರಂದು ಸಂವಿಧಾನ ದಿನ ಎಂದು ಆಚರಿಸಲಾಗುತ್ತದೆ ಅದರಂತೆ ಮುದಗಲ್ಲ ಪುರಸಭೆ ವತಿಯಿಂದ ಆಚರಣೆ ಮಾಡಲಾಯಿತು

ದಲಿತ ಸಂಘರ್ಷ ಸಮಿತಿಯ ಅಧ್ಯಕ್ಷ ರಾದ ಶರಣಪ್ಪ ಕಟ್ಟಿಮನಿ ಅವರು ಸಂವಿಧಾನ ಪೀಠಿಕೆ ಹಾಗೂ ಡಾ.ಬಿ.ಆರ್.ಅಂಬೇಡ್ಕರ್ ಅವರ ಭಾವಚಿತ್ರ ಕ್ಕೆ ಹೂಮಾಲೆ ಹಾಕಿ ಪೂಜೆ ಸಲ್ಲಿಸಿದರು ಮೂಲಕ ಗೌರವ ಸಲ್ಲಿಸಿದರು

ಸಂವಿಧಾನ ರಕ್ಷಣೆಗೆ ಎಲ್ಲರೂ ಒಗ್ಗೂಡಬೇಕು ಸಂವಿಧಾನದ ತತ್ವಗಳು ಮತ್ತು ಪ್ರತೀ ಚಿಂತನೆಯನ್ನು ರಕ್ಷಿಸಲು ಜನರೆಲ್ಲರೂ ಒಗ್ಗೂಡಬೇಕು ಮುಖ್ಯಾಧಿಕಾರಿ ಪ್ರವೀಣ್ ಬೋಗರ್ ಅವರು ಸದಸ್ಯರು ಹೇಳಿದರು.

ಈ ಸಂದರ್ಭದಲ್ಲಿ , ಮುಖ್ಯಾಧಿಕಾರಿ ಪ್ರವೀಣ್ ಬೋಗರ್ ,ಮ್ಯಾನೇಜರ್ ಸುರೇಶ್ , ಪುರಸಭೆ ಕಂದಾಯ ವಿಭಾಗದ ಅಧಿಕಾರಿಯಾದ ಅಂತೋಣಿ ರಾಜ್ , ನೈಮಲ್ಯ ವಿಭಾಗದ ಅಧಿಕಾರಿಯಾದ ಆರೀಪಾ ಹುನ್ನಿಸಾ ಬೇಗಂ , ಜಾಕೀಯಾ ರೈಮತ್ ಹುನ್ನಿಸಾ ಬೇಗಂ, ಹಾಗೂ ಬಸವರಾಜ ಬಂಕದಮನೆ ,ಕೃಷ್ಣ ಚಲುವಾದಿ,ಸಿಬ್ಬಂದಿ ವರ್ಗದವರು , ಪೌರ ಕಾರ್ಮಿಕರು ಉಪಸ್ಥಿತರಿದ್ದರು..

ವರದಿ:- ಮಂಜುನಾಥ ಕುಂಬಾರ

Prajavikshane

Chandru R Bhanapaur

Leave a Reply

error: Content is protected !!