LOCAL NEWS :ರೇಣುಕಾಚಾರ್ಯರ ತತ್ವ, ಸಿದ್ದಾಂತಗಳನ್ನು ಅಳವಡಿಸಿಕೊಳ್ಳೋಣ : ಮುರಳಿಧರ್ ಕುಲಕರ್ಣಿ

You are currently viewing LOCAL NEWS :ರೇಣುಕಾಚಾರ್ಯರ ತತ್ವ, ಸಿದ್ದಾಂತಗಳನ್ನು ಅಳವಡಿಸಿಕೊಳ್ಳೋಣ : ಮುರಳಿಧರ್ ಕುಲಕರ್ಣಿ

ರೇಣುಕಾಚಾರ್ಯರ ತತ್ವ, ಸಿದ್ದಾಂತಗಳನ್ನು ಅಳವಡಿಸಿಕೊಳ್ಳೋಣ : ಮುರಳಿಧರ್ ಕುಲಕರ್ಣಿ

ಕುಕನೂರು : ರೇಣುಕಾಚಾರ್ಯರ ತತ್ವ, ಸಿದ್ದಾಂತಗಳನ್ನು ಪ್ರತಿಯೊಬ್ಬರು ನಮ್ಮ ಜೀವನದಲ್ಲಿ ಅಳವಡಿಸಿಕೊಳ್ಳೋಣ ಎಂದು ಗ್ರೇಡ್-೨ ತಹಶೀಲ್ದಾರ್ ಮುರಳಿಧರ್ ರಾವ್ ಕುಲಕರ್ಣಿ ಹೇಳಿದರು.

ರೇಣುಕಾಚಾರ್ಯರ ಜಯಂತಿ ಪ್ರಯುಕ್ತ ಪಟ್ಟಣದ ತಹಶೀಲ್ದಾರ್ ಕಾರ್ಯಲಯದಲ್ಲಿ ಹಮ್ಮಿಕೊಂಡಿದ್ದ ಪೂಜಾ ಕಾರ್ಯಕ್ರಮವನ್ನು ಉದ್ದೇಶಿಸಿ ಮಾತನಾಡಿದ ಅವರು ಅಸೂಹೆಗಳನ್ನು ತಡೆದು ಹಾಕಿ ಸಮಾಜದ ಒಳಿತಿಗಾಗಿ ಬದುಕಬೇಕು. ಜ್ಯೋತಿ ಸ್ವರೂಪಿಯಾದ ರೇಣುಕಾಚಾರ್ಯರು ಸಮಾಜ ಬದಲಾವಣೆಗೆ ಸಂದೇಶಗಳನ್ನು ನೀಡಿದ್ದಾರೆ. ಯುಗಪುರಷರ ಸಂದೇಶದoತೆ ಮಾನವ ಜನ್ಮಕ್ಕೆ ಜಯವಾಗುವ ರೀತಿಯಲ್ಲಿ ಬಾಳೋಣ, ಅವರ ತತ್ವ, ಸಿದ್ದಾಂತಗಳನ್ನು ನಮ್ಮ ಜೀವನದಲ್ಲಿ ಅಳವಡಿಸಿಕೊಂಡು ಸಮಾಜದಲ್ಲಿ ಮೇಲು ಕೀಳು ಎಂಬ ಭಾವನೆಯನ್ನು ತೆಗೆದು ಹಾಕಿ ಬದುಕೋಣ ಎಂದರು.

ಈ ಸಂದರ್ಭದಲ್ಲಿ ಸಮಾಜದ ಪ್ರಮುಖ ಹಿರಿಯುರು ರೇಣುಚಾಕಾರ್ಯರ ಕುರಿತು ಮಾತನಾಡಿದರು. ಹಾಗೂ ಸಮಾಜದ ವತಿಯಿಂದ ಪಟ್ಟಣದ ಗುದ್ನೇಪ್ಪನಮಠದ ಹತ್ತಿರ ರೇಣುಕಾಚಾರ್ಯರ ವೃತ್ತದಲ್ಲಿ ಪೂಜೆಯನ್ನು ಸಲ್ಲಿಸಿಲಾಯಿತು.

ಪ್ರಮುಖಾರಾದ ಶಿವಕುಮಾರ ನಾಗಲಾಪೂರಮಠ, ಈಶಯ್ಯ ಶಿರೂರಮಠ, ವೀರಯ್ಯ ದೇವಗಣಮಠ, ಸಿದ್ದಯ್ಯ ಉಳ್ಳಾಗಡ್ಡಿಮಠ, ಮಹೇಶ ಕಲ್ಮಠ, ಕರಬಸಯ್ಯ ಬಿನ್ನಾಳ, ಅನಿಲ್ ಆಚಾರ್, ಕಳಕಪ್ಪ ಕಂಬಳಿ, ಸಿದ್ದಲಿಂಗಯ್ಯ ಬಂಡಿ, ಮಂಜುನಾಥ ನಾಡಗೌಡರ, ಮಂಜುನಾಥ ಗುನ್ನಳ್ಳಿ ಹಿರೇಮಠ ಹಾಗೂ ಇತರರಿದ್ದರು.

Leave a Reply

error: Content is protected !!