You are currently viewing FLASH NEWS : ಪ್ರಿವೆಡ್ಡಿಂಗ್ ಫೋಟೋ ಶೂಟಿಂಗ್‌ ಮುಗಿಸಿ ಮರಳಿ ಬರುವಾಗ ಜೋಡಿಯೊಂದು ರಸ್ತೆ ಅಪಘಾತದಲ್ಲಿ ಸಾವು..!!
ಸಂದರ್ಬಿಕ ಚಿತ್ರ

FLASH NEWS : ಪ್ರಿವೆಡ್ಡಿಂಗ್ ಫೋಟೋ ಶೂಟಿಂಗ್‌ ಮುಗಿಸಿ ಮರಳಿ ಬರುವಾಗ ಜೋಡಿಯೊಂದು ರಸ್ತೆ ಅಪಘಾತದಲ್ಲಿ ಸಾವು..!!

FLASH NEWS : ಪ್ರಿವೆಡ್ಡಿಂಗ್ ಫೋಟೋ ಶೂಟಿಂಗ್‌ ಮುಗಿಸಿ ಮರಳಿ ಬರುವಾಗ ಜೋಡಿಯೊಂದು ರಸ್ತೆ ಅಪಘಾತದಲ್ಲಿ ಸಾವು..!!

ಸಂದರ್ಬಿಕ ಚಿತ್ರ

ಪ್ರಜಾ ವೀಕ್ಷಣೆ ಡಿಜಿಟಲ್ ಸುದ್ದಿ : 

ಗಂಗಾವತಿ : ಹೃದಯ ವಿದ್ರಾವಕ ಘಟನೆಯೊಂದು ನಡೆದಿದ್ದು, ಇದೇ ಡಿ. 21 ರಂದು ಹಸೆಮಣೆ ಏರಿ ಹೊಸ ಜೀವನಕ್ಕೆ ಕಾಲಿಡಬೇಕಿದ್ದ ಜೋಡಿಯೊಂದು ಪ್ರಿವೆಡ್ಡಿಂಗ್ ಶೂಟಿಂಗ್‌ಗೆ ಮುಗಿಸಿ ಬರುವಾಗ ರಸ್ತೆ ಅಪಘಾತದಲ್ಲಿ ಮೃತಪಟ್ಟಿರುವ ಆಘಾತಕಾರಿ ಘಟನೆಯೊಂದು ನಿನ್ನೆ ಜಿಲ್ಲೆಯ ಗಂಗಾವತಿ ಸಮೀಪದಲ್ಲಿ ನಡೆದಿದೆ.

ದುರ್ದೈವ ಮೃತರಾದ ಕರಿಯಪ್ಪ ಮಡಿವಾಳ್‌ ಹನುಮನಹಟ್ಟಿ (26) ಹಾಗೂ ಕವಿತಾ ಪವಾಡೆಪ್ಪ ಮಡಿವಾಳ (19) ಮೃತ ಜೋಡಿ ಎಂದು ಗುರುತಿಸಲಾಗಿದೆ. ಇದೇ ವರ್ಷ 5 ತಿಂಗಳ ಹಿಂದೆ ನಿಶ್ಚಿತಾರ್ಥ ಮಾಡಿಕೊಂಡಿದ್ದರು.

ಡಿ.21ರಂದು ಮದುವೆ ನಿಶ್ಚಯವಾಗಿತ್ತು. ಅದರ ಪ್ರಯುಕ್ತ ನಿನ್ನೆ ಪ್ರೀವೆಡ್ಡಿಂಗ್ ಶೂಟಿಂಗ್‌ಗಾಗಿ ಹೊಸಪೇಟೆಯ ಪಂಪಾವನ, ಮುನಿರಾಬಾದಿನ ಜಲಾಶಯದ ಕಡೆ ತೆರಳಿ ಫೋಟೋ ಶೂಟಿಂಗ್ ಮುಗಿಸಿ ಮರಳಿ ಬರುತ್ತಿರುವಾಗ ಈ ಘಟನೆ ನಡೆದಿದೆ.

ಕವಿತಾರನ್ನು ತಮ್ಮ ಗಂಗಾವತಿಯ ಮನೆಗೆ ಬಿಟ್ಟು ಹೋಗಲು ಬೈಕ್‌ನಲ್ಲಿ ಬರುತ್ತಿದ್ದರು ಎನ್ನಲಾಗಿದೆ. ಈ ವೇಳೆ ಕ್ವಾರಿಯ ಲಾರಿಯೊಂದು ಬೈಕ್ ಮೇಲೆ ಹರಿದಿದೆ. ಈ ಪರಿಣಾಮ ಕವಿತಾ ಸ್ಥಳದಲ್ಲಿಯೇ ಅಸುನೀಗಿದ್ದಾರೆ. ಕರಿಯಪ್ಪ ತೀವ್ರವಾಗಿ ಗಾಯಗೊಂಡು ಗಂಗಾವತಿ ಆಸತ್ರೆಯಲ್ಲಿ ಮೃತಪಟ್ಟಿದಾರೆ ಎಂದು ತಿಳಿದು ಬಂದಿದೆ.

Prajavikshane

Chandru R Bhanapaur

Leave a Reply

error: Content is protected !!