You are currently viewing BREAKING : ಸಾರ್ವಜನಿಕರೇ ಎಚ್ಚರ | WhatsAppನಲ್ಲಿ ಅಪರಿಚಿತರು ಕಳುಹಿಸುವ `APK’ ಶುಭಾಶಯ ಲಿಂಕ್‌ಗಳ ಮೇಲೆ ಕ್ಲಿಕ್ ಮಾಡಬೇಡಿ.!!

BREAKING : ಸಾರ್ವಜನಿಕರೇ ಎಚ್ಚರ | WhatsAppನಲ್ಲಿ ಅಪರಿಚಿತರು ಕಳುಹಿಸುವ `APK’ ಶುಭಾಶಯ ಲಿಂಕ್‌ಗಳ ಮೇಲೆ ಕ್ಲಿಕ್ ಮಾಡಬೇಡಿ.!!

BREAKING : ಸಾರ್ವಜನಿಕರೇ ಎಚ್ಚರ | WhatsAppನಲ್ಲಿ ಅಪರಿಚಿತರು ಕಳುಹಿಸುವ `APK’ ಶುಭಾಶಯ ಲಿಂಕ್‌ಗಳ ಮೇಲೆ ಕ್ಲಿಕ್ ಮಾಡಬೇಡಿ.!!

ಪ್ರಜಾ ವೀಕ್ಷಣೆ ಡಿಜಿಟಲ್ ಸುದ್ದಿ : 

ಬೆಂಗಳೂರು : ಸಾರ್ವಜನಿಕರೇ ಎಚ್ಚರ, ಹೊಸ ವರ್ಷಕ್ಕೆ ನಿಮ್ಮ WhatsApp ಗೆ ಅಪರಿಚಿತರು ಕಳುಹಿಸುವ ‘APK’ ಶುಭಾಶಯಗಳನ್ನು ಲಿಂಕ್‌ಗಳ ಮೇಲೆ ಕ್ಲಿಕ್ ಮಾಡಬೇಡಿ. ಒಂದು ವೇಳೆ ಮಾಡಿದರೆ ಅಪಾಯ ಕಟ್ಟಿಟ್ಟ ಬುತ್ತಿ ಎಂದು ಹೇಳಬಹುದು.

ಹೌದು, 2026ರ ಹೊಸ ವರ್ಷಕ್ಕೆ ಶುಭಾಶಯ ತಿಳಿಸುವುದಕ್ಕಾಗಿ ಸಾಕಷ್ಟು ಜನ ಅಪರಿಚಿತರು ಲಿಂಕ್‌ನೊಂದಿಗೆ ಹೊಸ ವರ್ಷದ ಶುಭಾಶಯ ಸಂದೇಶವನ್ನು ಕಳುಹಿಸುತ್ತಾರೆ, ಈ ಶುಭಾಶಯ ಪತ್ರಗಳನ್ನು ಕಳುಹಿಸಲು ‘APK’ ಇನ್ಸ್ಟಾಲ್ ಮಾಡಲು ನಿಮ್ಮನ್ನು ಕೇಳಲಾಗುತ್ತದೆ. ಒಮ್ಮೆ ನೀವು ಇನ್ಸ್ಟಾಲ್ ಮಾಡಿದ ಬಳಿಕ, ಸೈಬ‌ರ್ ವಂಚಕರು ನಿಮ್ಮ ಫೋಟೋಗಳು, ಸಂಪರ್ಕಗಳು, OTPಗಳು ಮತ್ತು ಬ್ಯಾಂಕಿಂಗ್ ಡೇಟಾವನ್ನು ಕದಿಯಬಹುದು.

ಸುರಕ್ಷಿತವಾಗಿರಲು ಉಪಯುಕ್ತ ಸಲಹೆಗಳು

  1. ಲಿಂಕ್‌ಗಳಿಂದ APK ಗಳನ್ನು ಎಂದಿಗೂ ಇನ್ಸ್ಟಾಲ್ ಮಾಡದಿರಿ

  2. ಅಧಿಕೃತ ಅಪ್ಲಿಕೇಶನ್ ಸ್ಟೋರ್‌ಗಳನ್ನು ಬಳಸಿ

  3.  ಕ್ಲಿಕ್ ಮಾಡುವ ಮೊದಲು ಕಳುಹಿಸುವವರೊಂದಿಗೆ ಪರಿಶೀಲಿಸಿ

  4. ಸಂದೇಹವಿದ್ದರೆ, ಕ್ಲಿಕ್ ಮಾಡಬೇಡಿ

 ಈ ಸೈಬರ್ ವಂಚನೆಯಿಂದ ನಿಮ್ಮ ಕುಟುಂಬ ಮತ್ತು ಸ್ನೇಹಿತರನ್ನು ರಕ್ಷಿಸಲು ಇದನ್ನು ಹಂಚಿಕೊಳ್ಳಿ…

 

Prajavikshane

Chandru R Bhanapaur

Leave a Reply

error: Content is protected !!