ಮುದಗಲ್ಲ :- ಸಾವಿತ್ರಿಬಾಯಿ ಫುಲೆ ಜಯಂತಿ ಆಚರಣೆ…

ಭಾರತದ ಮೊದಲ ಮಹಿಳಾ ಶಿಕ್ಷಕಿ ಹಾಗೂ ಮಹಿಳಾ ಶಿಕ್ಷಣದ ಪಿತಾಮಹಿ ಸಾವಿತ್ರಿಬಾಯಿ ಪುಲೆ ಅವರ ಜಯಂತಿಯನ್ನು ಶ್ರದ್ಧಾ ಸ್ಥಳೀಯ ಸೆಕ್ರೇಡ್ ಹಾರ್ಟ್ ಇಂಗ್ಲಿಷ್ ಮಾಧ್ಯಮ ಶಾಲೆಯಲ್ಲಿ ಭಕ್ತಿಯಿಂದ ಆಚರಿಸಲಾಯಿತು..
ಕಾರ್ಯಕ್ರಮದ ಆರಂಭದಲ್ಲಿ ಸಾವಿತ್ರಿಬಾಯಿ ಪುಲೆ ಅವರ ಭಾವಚಿತ್ರಕ್ಕೆ ಪಾಧರ್ ವಿಜಯ್ ಕುಮಾರ್ ಅವರು ಹಾಗೂ ಶಿಕ್ಷಕರಾದ ಊಮಾ ,ಪವಿತ್ರ ದೇವಿ ಶಿಕ್ಷಕರು ಹಾಗೂ ವಿದ್ಯಾರ್ಥಿಗಳು ಪುಷ್ಪಾರ್ಚನೆ ಸಲ್ಲಿಸಿ ಗೌರವ ನಮನಗಳನ್ನು ಅರ್ಪಿಸಿದರು.

ಈ ಸಂದರ್ಭದಲ್ಲಿ ಮಾತನಾಡಿದ ಪಾಧರ್ ವಿಜಯ್ ಕುಮಾರ್ ಅವರು ಮಹಿಳಾ ಶಿಕ್ಷಣದ ಮೂಲಕ ಸಮಾಜದಲ್ಲಿ ಸಮಾನತೆ ಮತ್ತು ನ್ಯಾಯ ಸ್ಥಾಪಿಸಲು ಸಾವಿತ್ರಿಬಾಯಿ ಪುಲೆ ಅವರು ಮಾಡಿದ ಸೇವೆ ಅನನ್ಯ ಅವರ ಆದರ್ಶಗಳು ಇಂದಿನ ಪೀಳಿಗೆಗೆ ಮಾರ್ಗದರ್ಶಕವಾಗಿವೆ ಎಂದರು.
ಈ ಸಂದರ್ಭದಲ್ಲಿ ಪಾಧರ್ ವಿಜಯ್ ಕುಮಾರ್ ಅವರು ಹಾಗೂ ಶಿಕ್ಷಕರಾದ ಊಮಾ ,ಪವಿತ್ರ ದೇವಿ, ಚನ್ನಬಸವ ಕುಂಬಾರ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.
ವರದಿ :- ಮಂಜುನಾಥ ಕುಂಬಾರ