You are currently viewing BREAKING : ಟ್ಯಾಕ್ಸಿಕ್ ಚಿತ್ರದ ಟೀಸರ್ ವಿವಾದ : ನಟ ಯಶ್ ಗೆ ಬಿಗ್ ಶಾಕ್..!! : ಟೀಸರ್ ನಲ್ಲಿ ಅಶ್ಲೀಲ ಕಂಟೆಂಟ್ : ಮಹಿಳಾ ಆಯೋಗಕ್ಕೆ ದೂರು.!!

BREAKING : ಟ್ಯಾಕ್ಸಿಕ್ ಚಿತ್ರದ ಟೀಸರ್ ವಿವಾದ : ನಟ ಯಶ್ ಗೆ ಬಿಗ್ ಶಾಕ್..!! : ಟೀಸರ್ ನಲ್ಲಿ ಅಶ್ಲೀಲ ಕಂಟೆಂಟ್ : ಮಹಿಳಾ ಆಯೋಗಕ್ಕೆ ದೂರು.!!

BREAKING : ಟ್ಯಾಕ್ಸಿಕ್ ಚಿತ್ರದ ಟೀಸರ್ ವಿವಾದ : ನಟ ಯಶ್ ಗೆ ಬಿಗ್ ಶಾಕ್..!! : ಟೀಸರ್ ನಲ್ಲಿ ಅಶ್ಲೀಲ ಕಂಟೆಂಟ್ : ಮಹಿಳಾ ಆಯೋಗಕ್ಕೆ ದೂರು.!!

ಟಾಕ್ಸಿಕ್ ಚಿತ್ರದಲ್ಲಿರುವ ಅಶ್ಲೀಲ ವಿಡಿಯೋ ಕಂಟೆಂಟ್ ವಿರುದ್ಧ ಎಎಪಿ ಮಹಿಳಾ ನಿಯೋಗ ದಿಂದ ಮಹಿಳಾ ಆಯೋಗಕ್ಕೆ ದೂರು

 ಪ್ರಜಾ ವೀಕ್ಷಣೆ ಡಿಜಿಟಲ್ ಮಾಧ್ಯಮ ಸುದ್ದಿ : 

ಬೆಂಗಳೂರು : ಕನ್ನಡದ ರಾಕಿಂಗ್ ಸ್ಟಾರ್ ನಟ ಯಶ್ ಅಭಿನಯದ ಟ್ಯಾಕ್ಸಿಕ್ ಚಿತ್ರದ ಟೀಸರ್ ಇತ್ತೀಚಿಗೆ ರಿಲೀಸ್ ಆಗಿತ್ತು. ಈ ಟೀಸರ್ ನಲ್ಲಿ ಅಶ್ಲೀಲ ಕಂಟೆಂಟ್ ಇದೆ ಎಂದು ರಾಜ್ಯ ಮಹಿಳಾ ಆಯೋಗಕ್ಕೆ ಎಎಪಿಯಿಂದ ಇಂದು ದೂರು ನೀಡಲಾಗಿದೆ.

ರಾಜ್ಯ ಮಹಿಳಾ ಆಯೋಗದ ಕಚೇರಿಗೆ ಭೇಟಿ ನೀಡಿ, ಅಮ್ ಆದ್ಮಿ ಪಕ್ಷದ ಮಹಿಳಾ ಘಟಕದ ಪ್ರಮುಖರು, ಇತ್ತೀಚೆಗೆ ಬಿಡುಗಡೆಯಾಗಿರುವ ಟಾಕ್ಸಿಕ್ ಚಲನಚಿತ್ರದ ಟೀಸರ್ ಅನ್ನು ಕೂಡಲೆ ರದ್ದುಗೊಳಿಸಬೇಕೆಂದು ಆಮ್ ಆದ್ಮಿ ಪಕ್ಷದ ಮಹಿಳಾ ಘಟಕ ಇಂದು ರಾಜ್ಯ ಮಹಿಳಾ ಆಯೋಗದ ಕಚೇರಿಗೆ ಭೇಟಿ ನೀಡಿ ದೂರನ್ನು ಸಲ್ಲಿಸಿದ್ದಾರೆ.

ಈ ಕುರಿತು ಮಾತನಾಡಿದ ಎಎಪಿ ಪಕ್ಷದ ರಾಜ್ಯ ಕಾರ್ಯದರ್ಶಿ ಉಷಾ ಮೋಹನ್, ‘ಈ ಟೀಸರ್ ನಲ್ಲಿರುವ ಅಶ್ಲೀಲ ಹಾಗೂ ಪ್ರೌಢ ದೃಶ್ಯಗಳು ಹೆಂಗಳೆಯರ ಹಾಗೂ ಮಕ್ಕಳ ಸಾಮಾಜಿಕ ಸ್ವಾಸ್ಥ್ಯಕ್ಕೆ ಧಕ್ಕೆ ಉಂಟು ಮಾಡುತ್ತಿದೆ. ಯಾವುದೇ ವಯಸ್ಸಿನ ಮಿತಿ ಅಥವಾ ಮುನ್ನೆಚ್ಚರಿಕೆ ಇಲ್ಲದೆ ಸಾರ್ವಜನಿಕವಾಗಿ ಬಿಡುಗಡೆಯಾಗಿರುವ ಈ ದೃಶ್ಯಗಳು ಮಹಿಳೆಯರ ಘನತೆಗೆ ಕುಂದು ತರುವಂತಿದ್ದು, ಕನ್ನಡದ ಐತಿಹಾಸಿಕ ಸಾಂಸ್ಕೃತಿಕ ಜಗತ್ತಿಗೆ ಮಾಡುತ್ತಿರುವ ತೀವ್ರ ಅಪಮಾನವಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಇದೇ ಸಂದರ್ಭದಲ್ಲಿ ಮಹಿಳಾ ಮುಖಂಡಯರಾದ ವೀಣಾ ಸರ್ರಾವ್, ಜ್ಯೋತಿ ಮತ್ತು ಇನ್ನಿತರ ಮಹಿಳಾ ಮುಖಂಡರುಗಳು ಭಾಗವಹಿಸಿದ್ದರು.

Prajavikshane

Chandru R Bhanapaur

Leave a Reply

error: Content is protected !!