You are currently viewing LOCAL NEWS : ಕುಕನೂರು ತಾಲೂಕಾ ಪ್ರೇಮಿಯರ್ ಲೀಗ್ (ಕೆಟಿಪಿಎಲ್) : ಫೆ.8 ರಂದು ಫೈನಲ್ ಪಂದ್ಯ : ಬಂಜಾರ ಟೈಗರ್ಸ್ ವಿರುದ್ಧ ರೈಸಿಂಗ್ ಸ್ಟಾರ್! 

LOCAL NEWS : ಕುಕನೂರು ತಾಲೂಕಾ ಪ್ರೇಮಿಯರ್ ಲೀಗ್ (ಕೆಟಿಪಿಎಲ್) : ಫೆ.8 ರಂದು ಫೈನಲ್ ಪಂದ್ಯ : ಬಂಜಾರ ಟೈಗರ್ಸ್ ವಿರುದ್ಧ ರೈಸಿಂಗ್ ಸ್ಟಾರ್! 

LOCAL NEWS : ಕುಕನೂರು ತಾಲೂಕಾ ಪ್ರೇಮಿಯರ್ ಲೀಗ್ (ಕೆಟಿಪಿಎಲ್) : ಫೆ.8 ರಂದು ಫೈನಲ್ ಪಂದ್ಯ : ಬಂಜಾರ ಟೈಗರ್ಸ್ ವಿರುದ್ಧ ರೈಸಿಂಗ್ ಸ್ಟಾರ್! 

ಪ್ರಜಾವೀಕ್ಷಣೆ ಸುದ್ದಿ : 

ಕುಕನೂರು : ಪಟ್ಟಣದ ಗುದ್ನೇಶ್ವರ ಜಾತ್ರಾ ಪ್ರಯುಕ್ತವಾಗಿ “ಗುದ್ನೇಶ್ವರ ಟ್ರೋಫಿ” ಎಂಬ ಹೆಸರಿನಲ್ಲಿ ಕುಕನೂರು ತಾಲೂಕು ಕ್ರೀಡಾಂಗಣ ಹೋರಾಟ ಸಮಿತಿ ಸಹಯೋಗದಲ್ಲಿ ಕುಕನೂರು ತಾಲೂಕು ಪ್ರೀಮಿಯರ್ ಲೀಗ್ ಆಯೋಜನೆ ಮಾಡಲಾಗಿತ್ತು, ಇದರ ಫೈನಲ್ ಪಂದ್ಯವು ಇದೇ ಫೆಬ್ರವರಿ 8 ರಂದು (ಭಾನುವಾರದಂದು) ಗುದ್ನೇಪ್ಪನ ಮಠದ ಬಳಿಯ ಗಂಗಾಧರಯ್ಯ ಹಿರೇಮಠ ಇವರ ಜಾಗೆಯಲ್ಲಿ ನಡೆಯಲಿದೆ ಎಂದು ಆಯೋಜಕ ಚಂದ್ರಕಾಂತ್ ಗುಡಿಮನಿ ತಿಳಿಸಿದ್ದಾರೆ.

ಇಂದು ಪಟ್ಟಣದ ಪ್ರವಾಸಿ ಮಂದಿರದಲ್ಲಿ ಪತ್ರಿಕಾಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿದ ಇವರು, ‘ಈ ಟೂರ್ನಿಯಲ್ಲಿ ಒಟ್ಟು 12 ತಂಡಗಳು ಭಾಗವಹಿಸಿದ್ದು, ಸರಿ ಸುಮಾರು 70 ಪಂದ್ಯಗಳನ್ನು ಆಡಿಸಲಾಗಿದೆ. ಇದರಲ್ಲಿ ಪ್ರಮುಖವಾಗಿ ಬಂಜಾರ ಟೈಗರ್ಸ್ ಕಕ್ಕಿಹಳ್ಳಿ ತಾಂಡಾ ಹಾಗೂ ರೈಸಿಂಗ್ ಸ್ಟಾರ್ ಚಿಕ್ಕಬಿಡನಾಳ ತಂಡಗಳು ಫೈನಲ್ ನಲ್ಲಿ ಮುಖಮುಖಿ ಆಗಲಿವೆ’ ಎಂದರು.

ಈ ಟೂರ್ನಿಯ ಪ್ರಥಮ ಬಹುಮಾನ 2 ಲಕ್ಷ ರೂ. ಹಾಗೂ ಒಂದು ಟ್ರೋಫಿ, ಎರಡನೆಯ ಬಹುಮಾನ ನಗದು 1 ಲಕ್ಷ ರೂ. ಹಾಗೂ ಒಂದು ಟ್ರೋಫಿ, ಮೂರನೇ ಬಹುಮಾನ 50 ಸಾವಿರ ಹಾಗೂ ಒಂದು ಟ್ರೋಪಿ ನೀಡಲಾಗುವುದು ಎಂದರು.

ಈ ಸಂದರ್ಭದಲ್ಲಿ ಟೂರ್ನಿಯ ಆಯೋಜಕರಾದ ಈರಣ್ಣ ಶಿರೂರು, ರಸೂಲ್ ಬನ್ನಿಕಟ್ಟಿ, ಪಾಪಾಸಾಬ್ ಸೇರಿದಂತೆ ಹಲವರು ಉಪಸ್ಥಿತರಿದ್ದರು.

Prajavikshane

Chandru R Bhanapaur

Leave a Reply

error: Content is protected !!